`ಮನವೆಂಬ ಕಡಲ ತೀರದ’ ಚಿತ್ರಣ

Public TV
2 Min Read
pannaga

ಮ್ಮ ಸಿನಿಮಾದ ಹೆಸರು `ಕಡಲ ತೀರದ ಭಾರ್ಗವ’ (Kadala Theerada Bhargava) ಅಂತಿದೆ. ಹಾಗಂತ ಇದು ಸಾಹಿತಿ ಕೋಟ ಶಿವರಾಮ ಕಾರಂತರ ಸಿನಿಮಾವಲ್ಲ. ಅಥವಾ ಅವರ ಯಾವುದೇ ಕೃತಿಗೂ ಸಂಬಂಧಿಸಿದ್ದಲ್ಲ. ಇದೊಂದು ಸೈಕಾಲಜಿಕಲ್ ಥ್ರಿಲ್ಲರ್ ಶೈಲಿಯ ಸಿನಿಮಾ. ಮನುಷ್ಯನ ಮನಸ್ಸು ಒಂಥರಾ ಕೊನೆಯಿರದ ಕಡಲಿನಂತೆ. ಅದರ ಆಳ, ಅಗಲ ಎಲ್ಲವೂ ಕಡಲಿನಂತೆ, ಅಳತೆಗೆ ನಿಲುಕದ್ದು. ಅಂಥದ್ದೇ ಮನಸ್ಸಿನ ಚಿತ್ರಣ ಈ ಸಿನಿಮಾದ ಕಥಾವಸ್ತು. ಹಾಗಾಗಿ ಸಿನಿಮಾದ ಸಬ್ಜೆಕ್ಟ್‌ಗೆ ಹೊಂದಾಣಿಕೆಯಾಗುತ್ತದೆ ಎಂಬ ಕಾರಣಕ್ಕೆ, ನಮ್ಮ ಸಿನಿಮಾಕ್ಕೆ ಈ ಟೈಟಲ್ ಇಟ್ಟಿದ್ದೇವೆ ಇದು ತೆರೆ ಕಾಣಲು ರೆಡಿಯಾಗಿರುವ `ಕಡಲ ತೀರದ ಭಾರ್ಗವ’ ಸಿನಿಮಾದ ಬಗ್ಗೆ ನಿರ್ದೇಶಕ ಪನ್ನಗ ಸೋಮಶೇಖರ್ (Pannaga Somashekar) ಮಾತನಾಡಿದ್ದಾರೆ.

kadala theerada bhargava

ಸದ್ಯ ತನ್ನ ಟೈಟಲ್, ಟ್ರೇಲರ್ ಮತ್ತು ಹಾಡುಗಳ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸಿನಿಪ್ರಿಯರ ಗಮನ ಸೆಳೆಯುತ್ತಿರುವ ಸಿನಿಮಾ `ಕಡಲ ತೀರದ ಭಾರ್ಗವ’ ಇದೇ ಮಾ.3ಕ್ಕೆ ತೆರೆಗೆ ಬರುತ್ತಿದೆ. ಇದೇ ವೇಳೆ ಸಿನಿಮಾದ ಬಗ್ಗೆ ಮಾತಿಗೆ ಸಿಕ್ಕ ನಿರ್ದೇಶಕ ಪನ್ನಗ ಸೋಮಶೇಖರ್, ಸಿನಿಮಾದ ಬಗ್ಗೆ ಒಂದಷ್ಟು ಮಾಹಿತಿ ನೀಡಿದ್ದಾರೆ.

shruthi prakash

`ಕಡಲ ತೀರದ ಭಾರ್ಗವ’ ಸುಮಾರು ನಾಲ್ಕು ವರ್ಷಗಳ ಹಿಂದಿನ ಕನಸು. ಇದೇ ಕಥೆಯನ್ನು ಮೊದಲು ಶಾರ್ಟ್ ಮೂವಿ ಮಾಡಿದ್ದೆವು. ಬಳಿಕ ಅದನ್ನೇ ಪೂರ್ಣ ಪ್ರಮಾಣದ ಸಿನಿಮಾವಾಗಿ ಮಾಡಿದ್ದೇವೆ. ಎಲ್ಲರ ಮನಮುಟ್ಟುವಂಥ ಕಥೆ ಈ ಸಿನಿಮಾದಲ್ಲಿದೆ. ಭಾರ್ಗವ ಎಲ್ಲರಿಗೂ ಇಷ್ಟವಾಗುತ್ತಾನೆ ಎಂಬುದು ನಿರ್ದೇಶಕ ಪನ್ನಗ ಅವರ ಭರವಸೆಯ ಮಾತು.

ಬಹುತೇಕ ಹೊಸಬರೇ ಸೇರಿ ನಿರ್ಮಿಸಿರುವ `ಕಡಲ ತೀರದ ಭಾರ್ಗವ’ ಸಿನಿಮಾದ ಮೂಲಕ ಭರತ್ ಗೌಡ (Bharath Gowda) ಮತ್ತು ವರುಣ್ ರಾಜು ಪಟೇಲ್ (Varun Patel Raju) ನಾಯಕ ನಟರಾಗಿ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ಜೊತೆಗೆ ನಿರ್ಮಾಪಕರಾಗಿ ಬಂಡವಾಳ ಹೂಡಿ ಸಿನಿಮಾವನ್ನು ನಿರ್ಮಿಸಿದ್ದಾರೆ. ಶ್ರುತಿ ಪ್ರಕಾಶ್ (Shruthi Prakash) ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಶ್ರೀಧರ್, ರಾಘವ ನಾಗ್, ಅಶ್ವಿನ್ ಹಾಸನ್ ಮೊದಲಾದವರು `ಕಡಲ ತೀರದ ಭಾರ್ಗವ’ ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಇದನ್ನೂ ಓದಿ: ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ʻಜೊತೆ ಜೊತೆಯಲಿʼ ನಟಿಯ ಹೊಸ ಫೋಟೋಶೂಟ್‌

shruthi prakash

ಒಟ್ಟಾರೆ ತನ್ನ ಕಂಟೆಂಟ್, ಟ್ರೇಲರ್ ಮತ್ತು ಹಾಡುಗಳ ಮೂಲಕ ನಿರೀಕ್ಷೆ ಮೂಡಿಸಿರುವ `ಕಡಲ ತೀರದ ಭಾರ್ಗವ’ನ ಕಥೆ ಏನೆಂಬುದು ಮಾರ್ಚ್ 3ಕ್ಕೆ ಅನಾವರಣವಾಗಲಿದೆ.

Share This Article
Leave a Comment

Leave a Reply

Your email address will not be published. Required fields are marked *