ದರ್ಶನ್ ಪ್ರಕರಣ: ತಪ್ಪಿಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದ ನಿರ್ದೇಶಕ ಓಂ ಪ್ರಕಾಶ್ ರಾವ್

Public TV
2 Min Read
darshan 15

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renukaswamy Murder Case) ವಿಚಾರದಲ್ಲಿ ಆರೋಪಿಯಾಗಿರುವ ನಟ ದರ್ಶನ್‌ರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಬೆನ್ನಲ್ಲೇ ನಿರ್ದೇಶಕ ಕಮ್ ನಿರ್ಮಾಪಕ ಓಂ ಪ್ರಕಾಶ್ ರಾವ್ (Om Prakash Rao) ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ:ಮಾದಕ ಲುಕ್‌ನಲ್ಲಿ ಪಡ್ಡೆಹುಡುಗರ ನಿದ್ದೆ ಕದ್ದ ಚೈತ್ರಾ ಆಚಾರ್

om prakash rao

ರೇಣುಸ್ವಾಮಿ ಕೊಲೆ ಪ್ರಕರಣಕ್ಕೆ ಪ್ರತಿಕ್ರಿಯಿಸಿ, ಅಪಾರ ಅಭಿಮಾನಿಗಳ ಬಳಗ ಹೊಂದಿರುವ ದರ್ಶನ್ (Darshan) ಸಣ್ಣ ಕಾರಣಕ್ಕೆ ಹೀಗೆಲ್ಲಾ ಮಾಡಿಕೊಂಡರು. ರೇಣುಕಾಸ್ವಾಮಿ ಮೆಸೇಜ್ ಮಾಡಿರೋದು ಅಷ್ಟೇ. ಇದು ಸಣ್ಣ ವಿಚಾರ. ರೇಣುಕಾಸ್ವಾಮಿ ಮೇಲೆ ಆಗಿರುವ ಪ್ರಯೋಗ ತುಂಬಾ ತಪ್ಪು ಅನಸ್ತು. ಇದನ್ನು ಯಾರೇ ಮಾಡಿದ್ರೂ ಅವರಿಗೆ ತಕ್ಕ ಶಿಕ್ಷೆಯಾಗಬೇಕು. ನಮ್ಮ ಕರ್ನಾಟಕ ಪೊಲೀಸ್ ವಿಚಾರಣೆ ಮಾಡಿರುವ ರೀತಿ, ಅವರು ಇಟ್ಟಿರುವ ಹೆಜ್ಜೆ ಗ್ರೇಟ್ ಆಗಿದೆ ಎಂದು ಓಂ ಪ್ರಕಾಶ್ ಮಾತನಾಡಿದ್ದಾರೆ.

DARSHAN 1

ಅಂತಹ ಮೇಧಾವಿ ನಟ ದರ್ಶನ್ ಈಗ ಆರೋಪಿ ಸ್ಥಾನದಲ್ಲಿ ನಿಂತಿರೋದು ನಿಜಕ್ಕೂ ಬೇಜಾರು ಆಗ್ತಿದೆ. ನಾನು ಈಗ ದರ್ಶನ್‌ರನ್ನು ಭೇಟಿ ಮಾಡದೇ 10 ವರ್ಷಗಳಾಗಿವೆ. ಆದರೆ ಅವರು ಒಳ್ಳೆಯ ವ್ಯಕ್ತಿ. ಕನ್ನಡಿಗರಿಗೆ ಅವಕಾಶ ಸಿಗಬೇಕು ಎಂಬ ಮನೋಭಾವನೆ ಅವರಿಗಿದೆ. ಕೆಲ ವೈಯಕ್ತಿಕ ಕಾರಣಗಿಳಿಂದ ಅವರ ಜೊತೆ ಇಬ್ಬರೂ ದೂರ ಆದೆವು ಎಂದಿದ್ದಾರೆ ನಿರ್ದೇಶಕ ಓಂ ಪ್ರಕಾಶ್ ರಾವ್.

darshan

ಒಂದು ವರ್ಷದ ಹಿಂದೆ ಸಿನಿಮಾ ಮಾಡಬೇಕು ಎಂದು ದರ್ಶನ್‌ರನ್ನು ಸಂಪರ್ಕಿಸಿದೆ. ಕೆಲಸಗಾರರಿಗೆ ಬೆಲೆ ಕೊಡಬೇಕು ಎಂಬ ಉದ್ದೇಶದಲ್ಲಿ ನಾನೇ ಅವರಿಗೆ ಸಾರಿ ಕೇಳಿದೆ. ಬಳಿಕ ನಾವಿಬ್ಬರೂ ಸೇರಿ ಒಂದು ಸಿನಿಮಾ ಮಾಡೋಣ ಅಂತ ಕೇಳಿದ್ದೆ, ಡೇಟ್ಸ್ ವಿಚಾರವಾಗಿ ಹೊಂದಾಣಿಕೆ ಆಗಲಿಲ್ಲ. ಈಗ ಮಾಡುತ್ತಿರುವ ‘ಫಿನಿಕ್ಸ್’ ಸಿನಿಮಾ ಅವರಿಗಾಗಿಯೇ ಮಾಡಿದ್ದು 60% ಚಿತ್ರೀಕರಣ ಆಗಿದೆ. ಈಗಲೂ ಶೂಟಿಂಗ್ ನಡೆಯುತ್ತಿದೆ. ಈ ವೇಳೆ, ನಾನು ನಿರ್ದೇಶಿಸಿದ ಸಿನಿಮಾಗಳಲ್ಲಿ ದರ್ಶನ್ ಯಾವತ್ತೂ ಗಲಾಟೆ ಮಾಡಿಲ್ಲ ಎಂದು ಓಂ ಪ್ರಕಾಶ್ ಮಾಹಿತಿ ನೀಡಿದರು.

ರೇಣುಕಾಸ್ವಾಮಿ ಮಾಡಿರೋದು ಘನಘೋರ ಅಪರಾಧ ಅಲ್ಲ. ಪೊಲೀಸ್ ಅಧಿಕಾರಿಗಳ ಸಹಾಯ ತೆಗೆದುಕೊಂಡು ಸರಿ ಮಾಡಬಹುದಿತ್ತು. ಆ ಥರ ಚಿತ್ರಹಿಂಸೆ ಕೊಡಬಾರದಿತ್ತು. ದೊಡ್ಡ ನಟನಾಗಿ ಈ ಸ್ಥಾನದಲ್ಲಿ ನಿಲ್ಲಬಾರದಿತ್ತು ಎಂದಿದ್ದಾರೆ. ಆ ಕುಟುಂಬಕ್ಕೆ ನ್ಯಾಯ ಸಿಗಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕು. ಯಾವ ಪ್ರಭಾವಕ್ಕೂ ಮಣಿಯದೇ ಅಧಿಕಾರಿಗಳು ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ಓಂ ಪ್ರಕಾಶ್ ಮಾತನಾಡಿದ್ದಾರೆ.

ಅಂದಹಾಗೆ, ಈ ಹಿಂದೆ ದರ್ಶನ್ ನಟನೆಯ ಅಯ್ಯ, ಕಲಾಸಿಪಾಳ್ಯ, ಮಂಡ್ಯ, ಯೋಧ, ಪ್ರಿನ್ಸ್ ಸಿನಿಮಾಗಳಿಗೆ ಓಂ ಪ್ರಕಾಶ್ ರಾವ್ ನಿರ್ದೇಶನ ಮಾಡಿದ್ದರು.

Share This Article