ರಜನಿಕಾಂತ್ ನಟನೆಯ ‘ಜೈಲರ್’ ಸಿನಿಮಾ ಯಶಸ್ವಿಯಾದ್ಮೇಲೆ ಇದರ ಸೀಕ್ವೆಲ್ ಅಪ್‌ಡೇಟ್‌ಗಾಗಿ ಎದುರು ನೋಡುತ್ತಿದ್ದ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಸಿಕ್ಕಿದೆ. ‘ಜೈಲರ್ 2’ (Jailer 2) ಬರೋದು ಫಿಕ್ಸ್ ಎಂದು ಡೈರೆಕ್ಟರ್ ನೆಲ್ಸನ್ ಅಧಿಕೃತ ಅಪ್‌ಡೇಟ್ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಝೈದ್ ಖಾನ್‌ಗೆ ಮಲೈಕಾ ವಸುಪಾಲ್ ಹೀರೋಯಿನ್
ಕಾಲಿವುಡ್‌ನಲ್ಲಿ ಕಳೆದ ವರ್ಷ ಸಂಚಲನ ಮೂಡಿಸಿದ ಸಿನಿಮಾ ಅಂದರೆ ಜೈಲರ್. ಈ ಸಿನಿಮಾದ ಸಕ್ಸಸ್ ಬಳಿಕ ಇದರ ಸೀಕ್ವೆಲ್ ಬರಲಿ ಎಂಬುದು ಅದೆಷ್ಟೋ ಅಭಿಮಾನಿಗಳ ಆಸೆಯಾಗಿತ್ತು. ಆದರೆ ಚಿತ್ರತಂಡ ಯಾವುದೇ ಸ್ಪಷ್ಟನೆ ನೀಡದೆ ಸೈಲೆಂಟ್ ಆಗಿತ್ತು. ಈಗ ‘ಜೈಲರ್’ ಪಾರ್ಟ್ 2 ಬರಲಿದೆ ಎಂದು ಅಧಿಕೃತವಾಗಿ ನಿರ್ದೇಶಕ ನೆಲ್ಸನ್ ದಿಲೀಪ್‌ಕುಮಾರ್ (Nelson Dilipkumar) ಹೇಳಿದ್ದಾರೆ. ಅದಷ್ಟೇ ಅಲ್ಲ, ಇದರ ಮುಂದುವರೆದ ಭಾಗದಲ್ಲಿ ರಜನಿಕಾಂತ್ (Rajanikanth) ಅವರೇ ಹೀರೋ ಆಗಿ ನಟಿಸಲಿದ್ದಾರೆ ಎಂದಿದ್ದಾರೆ.
ಕಥೆ ಕೂಡ ಸಿದ್ಧವಾಗಿದ್ದು, ’ವೆಟ್ಟೈಯಾನ್’ ಸಿನಿಮಾದ ರಿಲೀಸ್‌ಗೂ ಮುನ್ನವೇ ‘ಜೈಲರ್ 2’ ಸಿನಿಮಾದ ಅಧಿಕೃತ ಘೋಷಣೆ ಆಗಲಿದೆ ಎಂದಿದ್ದಾರೆ. ತೆರೆಮರೆಯಲ್ಲಿ ಈ ಸಿನಿಮಾದ ಕೆಲಸ ನಡೆಯುತ್ತಿದೆ ಎಂದು ನಿರ್ದೇಶಕ ನೆಲ್ಸನ್ ಮಾಹಿತಿ ನೀಡಿದ್ದಾರೆ.
ಅಂದಹಾಗೆ, ‘ಜೈಲರ್’ (Jailer) ಸಿನಿಮಾದಲ್ಲಿ ರಜನಿಕಾಂತ್ ಜೊತೆ ರಮ್ಯಾ ಕೃಷ್ಣ, ತಮನ್ನಾ ಭಾಟಿಯಾ, ಯೋಗಿ ಬಾಬು, ಕನ್ನಡದ ನಟ ಶಿವರಾಜ್‌ಕುಮಾರ್ (Shivarajkumar), ಮೋಹನ್‌ಲಾಲ್, ಕಿಶೋರ್, ಸುನೀಲ್ ಸೇರಿದಂತೆ ಅನೇಕರು ನಟಿಸಿದ್ದರು. ಕಳೆದ ವರ್ಷ ಆ.10ರಂದು ಜೈಲರ್ ಬಹುಭಾಷೆಗಳಲ್ಲಿ ರಿಲೀಸ್ ಆಗಿತ್ತು.