ಕೆಜಿಎಫ್ 2 ಸಿನಿಮಾ ಸಕ್ಸಸ್ ನಂತರ ಯಶ್ ಅವರ ಮುಂದಿನ ಸಿನಿಮಾ ಯಾವುದು ಎಂಬ ಚರ್ಚೆ ನಡೆಯುತ್ತಿದೆ. ಯಾರ ನಿರ್ದೇಶನದಲ್ಲಿ ಯಶ್ ನಟಿಸಲಿದ್ದಾರೆ ಎನ್ನುವುದು ಹಾಟ್ ಟಾಪಿಕ್ ಆಗಿದೆ. ಯಶ್ ವಲಯದಿಂದ ಕೇಳಿ ಬರುತ್ತಿರುವ ಸುದ್ದಿ ಎಂದರೆ, ಮಫ್ತಿ ಚಿತ್ರದ ನಿರ್ದೇಶಕ ನರ್ತನ್ ಅವರೇ ಮುಂದಿನ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇದೇ ಖಚಿತವಾದ ಸುದ್ದಿಯೂ ಆಗಲಿದೆಯಂತೆ. ಇದನ್ನೂ ಓದಿ : Exclusive- ಅಮೆಜಾನ್ ಪ್ರೈಮ್ನಲ್ಲಿ ‘ಕೆಜಿಎಫ್ 2’ : ಫಸ್ಟ್ ಟೈಮ್ ಮೆಂಬರ್ ಅಲ್ಲದವರೂ ಸಿನಿಮಾ ನೋಡಬಹುದು
ಈ ಹಿಂದಿ ನರ್ತನ್ ಕೂಡ ಈ ಕುರಿತು ಮಾತನಾಡಿ, ಯಶ್ ಅವರ ಜೊತೆ ಮಾತುಕತೆ ಆಗಿದ್ದು ನಿಜ, ಅವರಿಗಾಗಿ ಕಥೆಯನ್ನು ಮಾಡಿಕೊಂಡಿದ್ದೂ ಸತ್ಯ. ಆದರೆ, ಯಾವಾಗ ಸಿನಿಮಾ ಆಗುತ್ತದೆ ಎಂದು ಗೊತ್ತಿಲ್ಲ. ನಿರ್ದಿಷ್ಟವಾಗಿ ದಿನಾಂಕವನ್ನು ಹೇಳುವುದು ಸದ್ಯಕ್ಕೆ ಸಾಧ್ಯವಿಲ್ಲ ಎಂದಿದ್ದರು. ಈ ನಂತರ ಯಶ್ ಮತ್ತು ನರ್ತನ್ ಹಲವು ಬಾರಿ ಭೇಟಿ ಮಾಡಿದ ವಿಚಾರವೂ ಸುದ್ದಿಯಾಗಿತ್ತು. ಅದರಲ್ಲೂ ಲಾಕ್ ಡೌನ್ ಸಮಯದಲ್ಲಿ ನರ್ತನ್ ಅವರು ಯಶ್ ಆಫೀಸಿಗೆ ಬಂದು ಕಥೆಯನ್ನು ಚರ್ಚಿಸುತ್ತಿದ್ದರು ಎನ್ನುವುದು ಕೂಡ ಗುಟ್ಟಾಗಿ ಉಳಿದಿಲ್ಲ. ಇದನ್ನೂ ಓದಿ : ಕಾಲೇಜು ದಿನಗಳಲ್ಲೇ ರಮ್ಯಾ ಮೇಲೆ ಕ್ರಶ್ ಆಗಿದೆ : ರಕ್ಷಿತ್ ಶೆಟ್ಟಿ
ಕೆಜಿಎಫ್ ಸಿನಿಮಾ ಯಶಸ್ಸಿನಂತರ ಯಶ್ ಅವರ ಮುಂದಿನ ಚಿತ್ರವನ್ನು ಪುರಿ ಜಗನ್ನಾಥ್ ಮಾಡಲಿದ್ದಾರೆ ಎನ್ನುವ ಸುದ್ದಿಯೂ ಹರಡಿತ್ತು. ಆದರೆ, ಅದಕ್ಕೂ ಮುನ್ನ ನರ್ತನ್ ಹೆಸರು ಕೇಳಿ ಬಂದಿತ್ತು. ನಿನ್ನೆಯಷ್ಟೇ ಗೆಳೆಯನ ಮದುವೆ ಸಮಾರಂಭಕ್ಕೆ ಯಶ್ ಹೋಗಿದ್ದರು. ಅಲ್ಲಿ ನರ್ತನ್ ಕೂಡ ಯಶ್ ಜೊತೆಗಿದ್ದರು. ಹಾಗಾಗಿ ನರ್ತನ್ ಸಿನಿಮಾ ಬಹುತೇಕ ಖಚಿತ ಎನ್ನುವ ಸುದ್ದಿಯಿದೆ. ಇದನ್ನೂ ಓದಿ : ಪತಿ ಉಪ್ಪಿಗಿಂತಲೂ ಪತ್ನಿ ಪ್ರಿಯಾಂಕಾ ಉಪೇಂದ್ರ ಫಾಸ್ಟ್ : ಡಿಟೆಕ್ಟೀವ್ ತೀಕ್ಷ್ಣ @ 50
ಪುರಿ ಜಗನ್ನಾಥ್, ನರ್ತನ್ ಹೀಗೆ ಹಲವು ನಿರ್ದೇಶಕರ ಹೆಸರು ಕೇಳಿ ಬಂದರೂ, ಯಶ್ ಮಾತ್ರ ಈ ಕುರಿತು ಯಾವುದೇ ಹೇಳಿಕೆ ಕೊಟ್ಟಿಲ್ಲ. ಆದರೆ, ಮುಂದಿನ ಸಿನಿಮಾದ ಕಥೆಯ ಕೆಲಸ ನಡೆಯುತ್ತಿದೆ. ಒಂದೊಳ್ಳೆ ಕಥೆಯೊಂದಿಗೆ ಮತ್ತೆ ಬರುತ್ತೇನೆ ಎಂದು ಹೇಳಿದ್ದು ಬಿಟ್ಟರೆ, ಉಳಿದಂತೆ ಎಲ್ಲವೂ ಸಸ್ಪೆನ್ಸ್.