ಸದಾ ಕಾಲ ಸುದ್ದಿಯಲ್ಲಿರುವ ನಟಿ ಎಂದರೆ ರಶ್ಮಿಕಾ ಮಂದಣ್ಣ,(Rashmika Mandanna) ಇದೀಗ ಮತ್ತೆ ಚಾಲ್ತಿಯಲ್ಲಿದ್ದಾರೆ. ಕರ್ನಾಟಕದಲ್ಲಿ ಬ್ಯಾನ್ ಆಕ್ರೋಶದ ಬೆನ್ನಲ್ಲೇ ʻಮೈನಾʼ ನಿರ್ದೇಶಕ ನಾಗಶೇಖರ್(Nagashekar) ಈ ಬಗ್ಗೆ ಮಾತನಾಡಿದ್ದಾರೆ. ರಶ್ಮಿಕಾನ ಬ್ಯಾನ್ ಮಾಡಿದ್ರೆ ಕನ್ನಡ ಚಿತ್ರರಂಗಕ್ಕೆ ನಷ್ಟ ಎಂಬ ಹೇಳಿಕೆಯನ್ನ ನೀಡಿದ್ದಾರೆ.
ಸದ್ಯ ಸೌತ್ ಮತ್ತು ಬಾಲಿವುಡ್‌ನಲ್ಲಿ (Bollywood) ಬ್ಯುಸಿಯಿರುವ ನಟಿ ರಶ್ಮಿಕಾ (Rashmika Mandanna) ಇತ್ತೀಚೆಗೆ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಸಂದರ್ಶನವೊಂದರಲ್ಲಿ ನಟಿ ತಮ್ಮ ಚೊಚ್ಚಲ ಸಿನಿಮಾದ ನಿರ್ಮಾಣ ಸಂಸ್ಥೆಯ ಹೆಸರು ಹೇಳಿಲ್ಲ ಎಂದು ಕನ್ನಡಿಗರ ಆಕ್ರೋಶ ವ್ಯಕ್ತಪಡಿಸಿದ್ದರು. ಇದಾದ ಬಳಿಕ ರಿಷಬ್ ಶೆಟ್ಟಿ ಕೂಡ ತಮ್ಮದೇ ಶೈಲಿಯಲ್ಲಿ ನಟಿಗೆ ಟಾಂಗ್ ಕೊಟ್ಟಿದ್ದರು. ನಂತರ ರಶ್ಮಿಕಾ ಬ್ಯಾನ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಚರ್ಚೆಯಾಗಿತ್ತು. ಇದೀಗ ವಿಷ್ಯವಾಗಿ ನಿರ್ದೇಶಕ ನಾಗಶೇಖರ್ ಕೂಡ ರಿಯಾಕ್ಟ್ ಮಾಡಿದ್ದಾರೆ.
`ಸಂಜು ವೆಡ್ಸ್ ಗೀತಾ’, `ಮೈನಾ; ಖ್ಯಾತಿಯ ನಾಗಶೇಖರ್ ತೆಲುಗಿನ ತಮ್ಮ ಮುಂದಿನ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ರಶ್ಮಿಕಾ ಬ್ಯಾನ್ ಮತ್ತು ಮೊದಲ ಚಿತ್ರದ ಅವಕಾಶದ ಬಗ್ಗೆ ನಿರ್ದೇಶಕ ನಾಗಶೇಖರ್ ಅವರಿಗೆ ಪ್ರಶ್ನೆ ಕೇಳಲಾಗಿದೆ. ಅವಕಾಶ ಕೊಟ್ಟವರನ್ನು ನೆನಪು ಇಟ್ಟುಕೊಳ್ಳಬೇಕು ಎಂದು ನಿರೀಕ್ಷೆ ಮಾಡುವುದೇ ತಪ್ಪು. ಅದನ್ನೆಲ್ಲಾ ನಿರೀಕ್ಷಿಸಬಾರದು ಎಂದಿದ್ದಾರೆ. ಇದನ್ನೂ ಓದಿ: ಹಿರಿಯ ನಿರ್ದೇಶಕ ಭಗವಾನ್ ಆರೋಗ್ಯ ಸ್ಥಿತಿ ಗಂಭೀರ: ಆಸ್ಪತ್ರೆಗೆ ದಾಖಲು
ಇನ್ನೂ ನನಗೆ ಈ ಬಗ್ಗೆ ಗೊತ್ತಿಲ್ಲ. ಒಂದು ವೇಳೆ ರಶ್ಮಿಕಾ ಅವರನ್ನು ಚಿತ್ರರಂಗ ಬ್ಯಾನ್ ಮಾಡಿದರೆ ಚಿತ್ರರಂಗಕ್ಕೆ ನಷ್ಟ ಎಂದಿದ್ದಾರೆ. ಒಬ್ಬ ಒಳ್ಳೆಯ ಕಲಾವಿದೆಯನ್ನ ಬ್ಯಾನ್ ಮಾಡುವುದು ಸರಿಯಲ್ಲ. ಉದಾಹರಣೆಗೆ ಮುಂದಿನ ದಿನಗಳಲ್ಲಿ ನನ್ನ ಕನ್ನಡದ ಸಿನಿಮಾಗೆ ರಶ್ಮಿಕಾ ರೀತಿಯ ನಟಿ ಬೇಕು ಎಂದುಕೊಳ್ಳುತ್ತೇವೆ. ನೀವು ಆಕೆಯನ್ನು ಬ್ಯಾನ್ ಮಾಡಿದರೆ, ಫಿಲ್ಮ್ ಮೇಕರ್ಸ್‌ಗೆ ತೊಂದರೆಯಾಗುತ್ತದೆ ಎಂದು ನಾಗಶೇಖರ್ ಮಾತನಾಡಿದ್ದಾರೆ.