Connect with us

Cinema

‘ದಿ-ವಿಲನ್’ ನಲ್ಲಿ ಸುದೀಪ್ 1 ಹಾಡಿಗೆ ಇಷ್ಟು ಕೋಟಿ, ಮಾಡುತ್ತಾ ಲೂಟಿ!

Published

on

ಬೆಂಗಳೂರು: ಸ್ಯಾಂಡಲ್ ವುಡ್ ನ ಬಹು ನಿರೀಕ್ಷಿತ ‘ದಿ-ವಿಲನ್’ ಚಿತ್ರದ ಕಿಚ್ಚ ಸುದೀಪ್ ಅವರ ಇಂಟ್ರೊಡಕ್ಷನ್ ಹಾಡಿಗೆ ನಿರ್ದೇಶಕ ಪ್ರೇಮ್ ಬರೋಬ್ಬರಿ ರೂ. 2 ಕೋಟಿ ಖರ್ಚು ಮಾಡುತ್ತಿದ್ದಾರೆ ಎನ್ನುವ ಸುದ್ದಿ ಸ್ಯಾಂಡಲ್‍ ವುಡ್ ವಲಯದಲ್ಲಿ ಹರಿದಾಡುತ್ತಿದೆ.

ಸುದೀಪ್ ಅವರ ಇಂಟ್ರೊಡಕ್ಷನ್ ಸಾಂಗ್ 2 ಕೋಟಿ ರೂ. ತಯಾರಾಗುತ್ತಿದ್ದು, ಬರೋಬ್ಬರಿ 100 ಜನ ವಿದೇಶಿ ಡ್ಯಾನ್ಸರ್ ಗಳು ಕುಣಿಯಲಿದ್ದಾರೆ. ಅರ್ಜುನ್ ಜನ್ಯ ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದು, ಸುದೀಪ್ ಅವರ ಹಾಡಿಗೆ ಪ್ರೇಮ್ ಧ್ವನಿ ಆಗಲಿದ್ದಾರೆ. ನಾಗೇಶ್ ಈ ಹಾಡಿಗೆ ನೃತ್ಯ ಹೇಳಿಕೊಡುತ್ತಿದ್ದಾರೆ.

ಹೈದರಾಬಾದ್ ನಲ್ಲಿ ಶಿವಣ್ಣನ ಸಾಹಸ ದೃಶ್ಯಗಳ ಚಿತ್ರೀಕರಣ ನಡೆಸುತ್ತಿದ್ದು, ಅವರ ಇಂಟ್ರೊಡಕ್ಷನ್ ಹಾಡಿಗೂ ಕೂಡ ಸಾಕಷ್ಟು ಖರ್ಚು ಮಾಡಲಿದ್ದಾರೆ ಎನ್ನಲಾಗಿದೆ. ‘ದಿ-ವಿಲನ್’ ಚಿತ್ರ ಮಲ್ಟಿ ಸ್ಟಾರ್ ಫಿಲ್ಮಂ ಆಗಿದ್ದು, ಚಿತ್ರದಲ್ಲಿ ಶಿವರಾಜ್ ಕುಮಾರ್, ಕಿಚ್ಚ ಸುದೀಪ್ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಬಹುಭಾಷಾ ನಟಿ ಆ್ಯಮಿ ಜಾಕ್ಸನ್ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಫೆ.14ರಂದು ಈ ಚಿತ್ರ ಬಿಡುಗಡೆಯಾಗಲು ಸಿದ್ಧತೆ ನಡೆದಿದೆ.

Click to comment

Leave a Reply

Your email address will not be published. Required fields are marked *