ಬೆಂಗಳೂರು: ಆತ್ಮಹತ್ಯೆಗೆ ಶರಣಾಗಿರುವ ನಿರ್ದೇಶಕ ಗುರುಪ್ರಸಾದ್ (Guruprasad) ಕಳೆದ ಒಂದು ವರ್ಷದಲ್ಲಿ ಮೂರು ಮನೆಯನ್ನು ಬದಲಾಯಿಸಿದ್ದರು.
ಗುರುಪ್ರಸಾದ್ ವಿರುದ್ದ ಹಲವರು ಪೊಲೀಸರಿಗೂ (Police) ದೂರು ನೀಡಿದ್ದರು. ಸಾಲ (Loan) ಕೊಟ್ಟವರು ಮನೆ ಬಳಿ ಬರುತ್ತಾರೆಂದು ಪದೇ ಪದೇ ಗುರುಪ್ರಸಾದ್ ಮನೆ ಖಾಲಿ ಮಾಡುತ್ತಿದ್ದರು. ಇದನ್ನೂ ಓದಿ: ಗುರುಪ್ರಸಾದ್ ಕೊನೆಯ ಚಾಟ್ ಏನಾಗಿತ್ತು?: ಸಂಬಂಧಿ ರವಿ ದೀಕ್ಷಿತ್ ಹೇಳೋದೇನು?
Advertisement
Advertisement
ಬಸವೇಶ್ವರನಗರದ ಬಳಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಗುರುಪ್ರಸಾದ್ ನಂತರ ಜಯನಗರ ಕನಕನಪಾಳ್ಯದ ಅಶೋಕ್ ಪಿಲ್ಲರ್ ಬಳಿ ವಾಸವಿದ್ದರು. ಕೆಲದಿನಗಳ ಕಾಲ ಮನೆ ಬಿಟ್ಟು ಒಬ್ಬಂಟಿಯಾಗಿ ಹೋಟೆಲಿನಲ್ಲಿ ಗುರುಪ್ರಸಾದ್ ರೂಂ ಮಾಡಿಕೊಂಡಿದ್ದರು.
Advertisement
ಸದ್ಯ ಕಳೆದ ಕೆಲ ತಿಂಗಳುಗಳಿಂದ ಮಾದನಾಯಕನಹಳ್ಳಿ ಬಳಿಯ ನ್ಯೂ ಹೆವೆನ್ ಅಪಾರ್ಟ್ಮೆಂಟ್ ನಲ್ಲಿ ವಾಸವಾಗಿದ್ದರು. ಮಾದನಾಯಕನಹಳ್ಳಿ ಬಳಿಯ ಫ್ಲಾಟ್ ಬಗ್ಗೆ ಯಾರಿಗೂ ಹೆಚ್ಚಿನ ಮಾಹಿತಿಯನ್ನು ಗುರುಪ್ರಸಾದ್ ನೀಡಿರಲಿಲ್ಲ.
Advertisement
ಚೆಕ್ ಬೌನ್ಸ್ ಪ್ರಕರಣದಲ್ಲಿ ಗುರುಪ್ರಸಾದ್ ಕೋರ್ಟ್, ಕಚೇರಿ ಅಲೆಯುತ್ತಿದ್ದರು. ಈ ನಡುವೆ ಜಯನಗರದಲ್ಲಿ ಪುಸ್ತಕ ಖರೀದಿ ಮಾಡಿ ಹಣ ನೀಡಿಲ್ಲ ಎಂಬ ಆರೋಪದ ಅಡಿ ಮತ್ತೊಂದು ಕೇಸ್ ದಾಖಲಾಗಿತ್ತು. ಹೀಗಾಗಿ ಆರ್ಥಿಕವಾಗಿ ಒಂದಷ್ಟು ಸಮಸ್ಯೆಯನ್ನು ಗುರುಪ್ರಸಾದ್ ಎದುರಿಸುತ್ತಿದ್ದರು.