ಕ್ಲಾಸ್ ಕಟೆಂಟ್, ಮಾಸ್ ನರೇಶನ್, ಮಸ್ತ್ ಮನರಂಜನೆ ನೀಡಲು ‘ತ್ರಿಕೋನ’ ಟೀಂ ರೆಡಿ

Public TV
2 Min Read
Trikona

ಸ್ಯಾಂಡಲ್‍ವುಡ್ ಅಂಗಳದಲ್ಲಿ ಸಾಲು, ಸಾಲು ಸಿನಿಮಾಗಳು ತೆರೆಗೆ ಬರಲು ಸಿದ್ದವಾಗಿ ನಿಂತಿವೆ. ಕೊರೋನಾ ಅಲೆಗಳ ಹೊಡೆತಕ್ಕೆ ಸಿಕ್ಕಿ ಬಿಡುಗಡೆ ಕಾಣದೆ ನಲುಗಿದ್ದ ಚಿತ್ರಗಳು ಒಂದೊಂದಾಗಿ ಬಿಡುಗಡೆ ಭಾಗ್ಯ ಕಾಣುತ್ತಿವೆ. ಚಿತ್ರಮಂದಿರಗಳ ಎದುರು ಮತ್ತೆ ಹಬ್ಬದ ವಾತಾವರಣ ಶುರುವಾಗಿದೆ. ಕ್ಲಾಸ್, ಸಸ್ಪೆನ್ಸ್, ಥ್ರಿಲ್ಲರ್ ಹೀಗೆ ಎಲ್ಲಾ ಜಾನರ್ ಸಿನಿಮಾಗಳು ಬಿಡುಗಡೆ ಭಾಗ್ಯವನ್ನು ಕಾಣುತ್ತಿವೆ. ಈ ಪೈಕಿ ತೆರೆಗೆ ಬರಲು ಸಜ್ಜಾಗಿರುವ ‘ತ್ರಿಕೋನ’ ಸಿನಿಮಾ ಕೂಡ ಸಖತ್ ಸುದ್ದಿಯಲ್ಲಿದೆ.

trikona 1

‘ತ್ರಿಕೋನ’ ಸಿನಿಮಾ ಕ್ಲಾಸ್ ಸಬ್ಜೆಕ್ಟ್ ಒಳಗೊಂಡ ಮಾಸ್ ಸಿನಿಮಾ ಅಂದರೆ ತಪ್ಪಾಗುವುದಿಲ್ಲ. ಟ್ರೇಲರ್ ನೋಡಿದವರಿಗೆ ಅದರ ಝಲಕ್ ಗೊತ್ತಾಗಿರುತ್ತದೆ. ತ್ರಿಕೋನ ಮೂಲಕ ಜೀವನದಲ್ಲಿ ತಾಳ್ಮೆ ಮಹತ್ವವೇನು ಎನ್ನುವುದನ್ನು ಹೇಳುವುದಕ್ಕೆ ಹೊರಟಿದ್ದಾರೆ ನಿರ್ದೇಶಕ ಚಂದ್ರಕಾಂತ್. ಮೂರು ಜನರೇಷನ್ ಇಟ್ಟುಕೊಂಡು ಕಥೆ ಹೆಣೆದಿರುವ ನಿರ್ದೇಶಕರು ಅದನ್ನು ತೆರೆ ಮೇಲೂ ತೋರಿಸಿದ್ದಾರೆ. 25, 45, 65 ವಯೋಮಾನದವರ ಪಾತ್ರಗಳಲ್ಲಿ ಪಾತ್ರಧಾರಿಗಳನ್ನು ಕಾಣಬಹುದು. ಜೀವನದಲ್ಲಿ ಕಷ್ಟ ಎನ್ನುವುದು ಎಲ್ಲರಿಗೂ ಬರುತ್ತದೆ. ಕಷ್ಟ ಬಂದಾಗ ಆಯಾ ವಯೋಮಾನದವರು ಯಾವ ರೀತಿ ಎದುರಿಸುತ್ತಾರೆ. ಶಕ್ತಿ, ಅಹಂ, ತಾಳ್ಮೆ ಇವುಗಳಲ್ಲಿ ಯಾವುದು ಮುಖ್ಯ ಎನ್ನುವುದುದನ್ನು ಆಕ್ಷನ್ ಥ್ರಿಲ್ಲರ್, ಸಸ್ಪೆನ್ಸ್ ಸಬ್ಜೆಕ್ಟ್
ಜೊತೆಗೆ ಮಾಸ್ ಆಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಚಂದ್ರಕಾಂತ್.

Trikona

ಚಂದ್ರಕಾಂತ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಎರಡನೇ ಸಿನಿಮಾವಿದು. ಚಿತ್ರಕ್ಕೆ ನಿರ್ಮಾಪಕ ರಾಜ್ ಶೇಖರ್ ಕತೆ ಬರೆದಿದ್ದು, ಚಿತ್ರಕಥೆ, ಸಂಭಾಷಣೆ, ಸಾಹಿತ್ಯದ ಜವಾಬ್ದಾರಿಯನ್ನು ಚಂದ್ರಕಾಂತ್ ವಹಿಸಿಕೊಂಡಿದ್ದಾರೆ. ಚಿತ್ರದ ತಾರಾಗಣವೇ ಈ ಚಿತ್ರದ ಮತ್ತೊಂದು ಹೈಲೈಟ್. ಜೂಲಿ ಲಕ್ಷ್ಮಿ, ಸುರೇಶ್ ಹೆಬ್ಳಿಕರ್, ಅಚ್ಯುತ್ ಕುಮಾರ್, ಸುಧಾರಾಣಿ, ರಾಜ್ ವೀರ್, ಮಾರುತೇಶ್, ಸಾಧುಕೋಕಿಲ, ಮನದೀಪ್ ರಾಯ್ ಒಳಗೊಂಡ ಸ್ಟಾರ್ ಕಲಾವಿದರ ರಂಗು ಚಿತ್ರಕ್ಕಿದೆ. ಇದನ್ನೂ ಓದಿ : ಸ್ನೇಹಿತರ ನಿವೃತ್ತಿ ನೆನಪಿಸಿ, ಆರೋಗ್ಯದಿಂದಿರಲು ಟಿಪ್ಸ್ ಕೊಟ್ಟ ಜಗ್ಗೇಶ್

Trikona 1

ಸುರೇಂದ್ರನಾಥ್ ಸಂಗೀತ, ಶ್ರೀನಿವಾಸ್ ವಿನ್ನಕೋಟ, ಜೀವನ್ ಪ್ರಕಾಶ್ ಸಂಕಲನ ಚಿತ್ರಕ್ಕಿದ್ದು, ಪೊಲೀಸ್ ಪ್ರಕಿ ಪ್ರೊಡಕ್ಷನ್ ಬ್ಯಾನರ್ ನಡಿ ರಾಜ್ ಶೇಖರ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಟೈಟಲ್, ತಾರಾಗಣದ ಮೂಲಕ ಸೌಂಡ್ ಮಾಡುತ್ತಿರುವ ತ್ರಿಕೋನ ಸಿನಿಮಾ ಪ್ರೇಕ್ಷಕರನ್ನು ಚಿತ್ರಮಂದಿರದಲ್ಲಿ ಯಾವ ರೀತಿ ಸೆಳೆಯಲಿದೆ ಎನ್ನುವುದನ್ನು ಕಾದುನೋಡಬೇಕಿದೆ. ಇದನ್ನೂ ಓದಿ : ಮೇ 11ಕ್ಕೆ ನಟಿ ಮಮತಾ ರಾವುತ್ ಮದುವೆ : ಡಾಕ್ಟರ್ ಜತೆ ಸಪ್ತಪದಿ ತುಳಿಯಲಿರುವ ನಟಿ

Share This Article
Leave a Comment

Leave a Reply

Your email address will not be published. Required fields are marked *