ರಣ್‌ಬೀರ್ ಕಪೂರ್- ಆಲಿಯಾ ಭಟ್ (Alia Bhatt) ನಟನೆಯ ಬ್ರಹ್ಮಾಸ್ತ್ರ (Brahmastra Film) ಸಿನಿಮಾ 2022ರಲ್ಲಿ ತೆರೆಕಂಡಿತ್ತು. ಈ ಸಿನಿಮಾ ಇದೀಗ ಒಂದು ವರ್ಷ ಪೂರೈಸಿದೆ. ಈ ಖುಷಿಯಲ್ಲಿ ನಿರ್ದೇಶಕ ಅಯಾನ್ ಮುಖರ್ಜಿ, ಬ್ರಹ್ಮಾಸ್ತ್ರ ಪಾರ್ಟ್ 2, 3 ಬಗ್ಗೆ ಬಿಗ್ ಅಪ್‌ಡೇಟ್ ಹಂಚಿಕೊಂಡಿದ್ದಾರೆ.
Advertisement
ಅಯಾನ್ ಮುಖರ್ಜಿ ಸೋಶಿಯಲ್ ಮೀಡಿಯಾದಲ್ಲಿ ಕೆಲವು ಕಾರ್ಟೂನ್ ಚಿತ್ರಗಳು, ವಿಡಿಯೋಗಳನ್ನು ಹಂಚಿಕೊಂಡಿದ್ದು, ಬ್ರಹ್ಮಾಸ್ತ್ರ 2 ಮತ್ತು 3 ಕೆಲಸ ಚಾಲ್ತಿಯಲ್ಲಿದೆ ಎಂದಿದ್ದಾರೆ. ಸದ್ಯಕ್ಕೆ ಬ್ರಹ್ಮಾಸ್ತ್ರ 2 & 3 ಸಿನಿಮಾಗಳ ಕಾನ್ಸೆಪ್ಟ್ ಆರ್ಟ್ ವರ್ಕ್ ನಡೆಯುತ್ತಿದ್ದು, ಕಾನ್ಸೆಪ್ಟ್ ಆರ್ಟ್ ವರ್ಕ್ ಮುಗಿದ ಕೂಡಲೇ ಸಿನಿಮಾ ಚಿತ್ರೀಕರಣ ಪ್ರಾರಂಭವಾಗಲಿದೆ. ಈ ಮೂಲಕ ರಣ್‌ಬೀರ್-ಆಲಿಯಾ ಫ್ಯಾನ್ಸ್‌ಗೆ ಸಿಹಿಸುದ್ದಿ ಸಿಕ್ಕಿದೆ. ಇದನ್ನೂ ಓದಿ:ವಿಕ್ಕಿ ವರುಣ್ ನಟಿಸಿ, ನಿರ್ದೇಶನ ಮಾಡಿರುವ ‘ಕಾಲಾಪತ್ಥರ್’ ಸಾಂಗ್ ರಿಲೀಸ್
Advertisement
Advertisement
ಅಯಾನ್ ಮುಖರ್ಜಿ ಈಗ ಹಂಚಿಕೊಂಡಿರುವ ಕಾರ್ಟೂನ್ ಚಿತ್ರ- ವಿಡಿಯೋಗಳಲ್ಲಿ ಶಿವ ಭಕ್ತನೊಬ್ಬ ಆಯುಧ ಹಿಡಿದು ದೈತ್ಯಾಕಾರದ ಅಸುರನನ್ನು ಕೊಲ್ಲಲು ಯತ್ನಿಸುತ್ತಿರುವ ದೃಶ್ಯಗಳಿವೆ. ಆ ವ್ಯಕ್ತಿಗೆ ಮಹಿಳೆಯೊಬ್ಬಾಕೆ ಬೆಂಬಲವಾಗಿ ನಿಂತಿರುವುದು ಸಹ ಕಾಣುತ್ತಿದೆ. ಬ್ರಹ್ಮಾಸ್ತ್ರ ಸಿನಿಮಾವು ಅಗ್ನಿ ಅಸ್ತ್ರ, ವಾಯು ಅಸ್ತ್ರ, ಜಲ ಅಸ್ತ್ರ ಹೀಗೆ ಬೇರೆ ಬೇರೆ ಆಯುಧಗಳ ಕುರಿತಾದ ಕತೆಯನ್ನು ಒಳಗೊಂಡಿತ್ತು. ರಣ್‌ಬೀರ್ ಅಗ್ನಿ ಅಸ್ತ್ರ ಸಂರಕ್ಷಕನಾಗಿ ಪಾತ್ರದಲ್ಲಿ ನಟಿಸಿದ್ದರು. ಮುಂದುವರೆದ ಭಾಗದಲ್ಲಿ ದೀಪಿಕಾ ಪಡುಕೋಣೆ ಕೂಡ ಕಾಣಿಸಿಕೊಳ್ಳಲಿದ್ದಾರೆ.
Advertisement
ರಣ್‌ಬೀರ್ (Ranbir Kapoor) ಶಿವ ಪಾತ್ರಕ್ಕೆ ಜೀವತುಂಬಿದ್ದು, ಆಲಿಯಾ ಭಟ್ ಇಶಾ ರೋಲ್‌ನಲ್ಲಿ ನಟಿಸಿದ್ದರು. ಮೌನಿ ರಾಯ್ ವಿಲನ್ ಆಗಿ ಕಾಣಿಸಿಕೊಂಡಿದ್ದರು. ಉಳಿದಂತೆ ಬಿಗ್ ಬಿ, ಶಾರುಖ್ ಖಾನ್, ನಾಗಾರ್ಜುನ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.