ಫ್ರಾನ್ಸ್ ದೇಶದ ಕಾನ್ಸ್ ನಗರದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಕಾನ್ಸ್ ಚಿತ್ರೋತ್ಸವದ (Cannes Festival) ರೆಡ್ ಕಾರ್ಪೆಟ್ ವಿಭಾಗದಲ್ಲಿ ದಕ್ಷಿಣ ಭಾರತದ ಜನಪ್ರಿಯ ನಿರ್ದೇಶಕರಾದ ಅಟ್ಲಿ (Atlee) ತಮ್ಮ ಪತ್ನಿ ಪ್ರಿಯಾ ಅಟ್ಲಿ (Priya Atlee) ಜೊತೆಗೆ ಭಾಗವಹಿಸಿದ್ದರು. ಕಪ್ಪು ಬಣ್ಣದ ಉಡುಗಿಯಲ್ಲಿ ಕಾಣಿಸಿಕೊಂಡ ದಂಪತಿ ನಗು ನಗುತ್ತಲೇ ಎಲ್ಲರತ್ತ ಕೈ ಬೀಸಿ ಹೆಜ್ಜೆ ಹಾಕಿದರು.
Advertisement
ಒಂದು ಕಡೆ ಕಾನ್ಸ್ ನ ರೆಡ್ ಕಾರ್ಪೆಟ್ (Red Carpet) ಸಾಕಷ್ಟು ಸುದ್ದಿ ಮಾಡುತ್ತಿದ್ದರೆ, ಮತ್ತೊಂದು ಕಡೆ ಈ ಕುರಿತು ಟೀಕೆಗಳು ಕೇಳಿ ಬಂದಿವೆ. ಪ್ರತಿಷ್ಠಿತ ಕಾನ್ಸ್ (Cannes Festival) ಚಿತ್ರೋತ್ಸವದ ವಿರುದ್ಧ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) ಗರಂ ಆಗಿದ್ದಾರೆ. ಕಾನ್ಸ್ ಅದೊಂದು ಹೆಮ್ಮೆಯ ಚಿತ್ರೋತ್ಸವ, ಅದರ ಬದಲು ಅದನ್ನು ಫ್ಯಾಶನ್ ಶೋ ಆಗಿ ಪರಿವರ್ತನೆ ಮಾಡಲಾಗುತ್ತಿದೆ ಎಂದು ವಿಷಾದ ವ್ಯಕ್ತ ಪಡಿಸಿದ್ದಾರೆ. ಕಾನ್ಸ್ ಚಿತ್ರೋತ್ಸವದ ಪ್ರತಿಷ್ಠೆಯನ್ನು ಉಳಿಸಬೇಕು ಎಂದೂ ಅವರು ಸಲಹೆ ನೀಡಿದ್ದಾರೆ. ಇದನ್ನೂ ಓದಿ:ಈ ಕಾರಣಕ್ಕಾಗಿ ಯಶ್ ಸಿನಿಮಾ ಕೈ ಬಿಟ್ಟರು: ನಿರ್ದೇಶಕ ನರ್ತನ್
Advertisement
Advertisement
ನಟಿಯರ ವಿವಿಧ ರೀತಿಯ ಕಾಸ್ಟ್ಯೂಮ್ ಗಳಿಂದಾಗಿ ಕಾನ್ಸ್ ಸಾಕಷ್ಟು ಸುದ್ದಿ ಆಗುತ್ತದೆ. ಅದರ ಹೊರತಾಗಿ ಚಿತ್ರೋತ್ಸವದಲ್ಲಿ ಏನೆಲ್ಲ ನಡೆಯುತ್ತದೆ ಎನ್ನುವುದು ಜಗತ್ತಿಗೆ ಗೊತ್ತೇ ಆಗುವುದಿಲ್ಲ. ರೆಡ್ ಕಾರ್ಪೆಟ್ ನಲ್ಲಿ ನಡೆಯುವ ಫ್ಯಾಷನ್ ಶೋ ಮಾತ್ರ ಹೆಚ್ಚು ಸದ್ದು ಮಾಡುತ್ತದೆ. ಇದೇ ವಿವೇಕ್ ಅಗ್ನಿಹೋತ್ರಿ ಕೋಪಕ್ಕೆ ಕಾರಣವಾಗಿದೆ. ಒಳ್ಳೊಳ್ಳೆ ಚಿತ್ರಗಳ ಬಗ್ಗೆ ಯಾರೂ ಮಾತನಾಡುವುದಿಲ್ಲ ಎಂದಿದ್ದಾರೆ.
Advertisement
ಈ ಬಾರಿಯ ಕಾನ್ಸ್ ನಲ್ಲಿ ಸಾಕಷ್ಟು ಸುದ್ದಿಯಾಗಿದ್ದು ಬಾಲಿವುಡ್ ನಟಿ ಐಶ್ವರ್ಯ ರೈ (Aishwarya Rai) ಅವರ ವಿಚಿತ್ರ ಕಾಸ್ಟ್ಯೂಮ್. ಕೇವಲ ಭಾರತದಲ್ಲಿ ಮಾತ್ರವಲ್ಲ, ಜಗತ್ತಿನ ನಾನಾ ದೇಶಗಳು ಕೂಡ ಅದಕ್ಕೆ ಮಹತ್ವ ನೀಡಿದ್ದವು. ಹೀಗಾಗಿ ಪರೋಕ್ಷವಾಗಿ ಐಶ್ವರ್ಯ ವಿರುದ್ಧವೂ ವಿವೇಕ್ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಅದನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.