ಬಾಲಿವುಡ್ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್, ಬಾಲಿವುಡ್ ಸೋಲಿಗೆ ತಮ್ಮದೇ ಆದ ಕಾರಣಗಳನ್ನು ನೀಡಿದ್ದಾರೆ. ಅದು ಕನ್ನಡದ ಸೂಪರ್ ಹಿಟ್ ಸಿನಿಮಾ ಕೆಜಿಎಫ್ 2 ಅನ್ನು ಉದಾಹರಣೆಯಾಗಿ ನೀಡಿದ್ದಾರೆ. ಸಂವಾದವೊಂದರಲ್ಲಿ ಮಾತನಾಡಿದ ಅನುರಾಗ್, ಬಾಲಿವುಡ್ ಅನುಕರಣೆಯಿಂದಾಗಿ ಹೀನಾಯವಾಗಿ ಸೋತಿದೆ. ಬರುತ್ತಿರುವ ಸಿನಿಮಾಗಳು ನೆಲಕಚ್ಚುತ್ತಿವೆ. ಅದನ್ನು ಮಾಡಬಾರದು ಎಂದು ಅವರು ಹೇಳಿದ್ದಾರೆ.
Advertisement
ಕಾಂತಾರ ಮತ್ತು ಪುಷ್ಪ ಸಿನಿಮಾಗಳು ತಮ್ಮ ತಮ್ಮ ನೆಲದ ಕಥೆಯನ್ನು ಹೇಳಿದವು. ಹಾಗಾಗಿ ಗೆದ್ದವು. ಆದರೆ, ಕೆಜಿಎಫ್ 2 ಹಾಗಲ್ಲ. ಅದನ್ನು ಅನುಕರಿಸಲು ಹೋದರೆ ಸೋಲು ಗ್ಯಾರಂಟಿ ಎಂದು ಅವರು ಹೇಳಿದ್ದಾರೆ. ಮರಾಠಿ ಚಿತ್ರರಂಗದ ಉದಾಹರಣೆಯನ್ನೂ ನೀಡಿರುವ ಅವರು, ಸೈರಾಟ್ ಸಿನಿಮಾ ಮರಾಠಿ ಸಿನಿಮಾ ರಂಗದಲ್ಲಿ ಹೊಸ ಸಂಚಲನವನ್ನೇ ಉಂಟು ಮಾಡಿತು. ಕಡಿಮೆ ಬಜೆಟ್ ನಲ್ಲಿ ತಗೆದು ಸಿನಿಮಾ, ಬಾಕ್ಸ್ ಆಫೀಸಿನಲ್ಲಿ ಹಿಟ್ ಆಯಿತು. ಆ ಸಿನಿಮಾವನ್ನೇ ಮಾದರಿಯಾಗಿಟ್ಟುಕೊಂಡು ಚಿತ್ರ ಮಾಡಿದರು. ಮುಂದೆ ಏನಾಯಿತು ಎಂದು ಯೋಚಿಸಿ ಅಂದಿದ್ದಾರೆ. ಇದನ್ನೂ ಓದಿ: ‘ಸೀತಾ ಸರ್ಕಲ್ ಶ್ರೀ ಕೃಷ್ಣನ್ ಮನೆ’ ಸಿನಿಮಾ ಫಸ್ಟ್ ಲುಕ್ ರಿಲೀಸ್
Advertisement
Advertisement
ಬಾಲಿವುಡ್ ಸಿನಿಮಾ ರಂಗ ಕೂಡ ಗೆದ್ದ ಎತ್ತಿನ ಬಾಲ ಹಿಡಿಯುತ್ತದೆ. ಒಂದು ಸಿನಿಮಾ ಗೆದ್ದರೆ ಅದೇ ಮಾದರಿಯ ಚಿತ್ರಗಳನ್ನು ಮಾಡುತ್ತದೆ. ಆದರೆ, ಆ ಫಾರ್ಮುಲಾ ಇತ್ತೀಚಿನ ದಿನಗಳಲ್ಲಿ ಕೆಲಸ ಮಾಡುತ್ತಿಲ್ಲ. ಹಾಗಾಗಿ ಬಾಲಿವುಡ್ ಸಿನಿಮಾಗಳು ಸೋಲುತ್ತಿವೆ. ಸ್ವಂತಿಕೆಯ ಮತ್ತು ತಮ್ಮದೇ ನೆಲದ ಕಥೆಯನ್ನು ಮಾಡಿದರೆ ಚಿತ್ರಗಳು ಗೆಲ್ಲುತ್ತವೆ ಎಂದು ಅನುರಾಗ್ ಕಶ್ಯಪ್ ಹೇಳಿದ್ದಾರೆ.