ಅಬುಧಾಬಿ: ದಾವುದ್ ಗ್ಯಾಂಗ್ ಸದಸ್ಯ, ಗುಜರಾತ್ ಬಿಜೆಪಿ ಮುಖಂಡ ಹರೇನ್ ಪಾಂಡ್ಯ ಕೊಲೆ, ಸೇರಿದಂತೆ ಅನೇಕ ಪ್ರಕರಣಗಳಿಗೆ ಬೇಕಾಗಿದ್ದ ಆರೋಪಿ ಫಾರೂಖ್ ದೆವ್ದಿವಾಲಾ ನನ್ನು ಯುನೈಟೆಡ್ ಅರಬ್ ಎಮಿರೇಟ್ಸ್ ಸರ್ಕಾರ ಪಾಕಿಸ್ತಾನಕ್ಕೆ ಗಡೀಪಾರು ಮಾಡಿದ್ದು, ಭಾರತದ ಅಧಿಕಾರಿಗಳಿಗೆ ಭಾರೀ ಹಿನ್ನಡೆಯಾಗಿದೆ.
ಫಾರೂಖ್ ದುಬೈನಲ್ಲಿ ಅಡಗಿದ್ದಾನೆ ಎನ್ನುವ ಮಾಹಿತಿಯನ್ನು ಗುಜರಾತ್ ಪೊಲೀಸರು ಕೇಂದ್ರ ಭದ್ರತಾ ಸಂಸ್ಥೆಗೆ ತಿಳಿಸಿದ್ದರು. ಭಾರತದ ಅಧಿಕಾರಿಗಳು ನೀಡಿದ ಮಾಹಿತಿಯ ಮೇರೆಗೆ ಈ ವರ್ಷದ ಮೇ 12 ರಂದು ಯುಎಇ ಪೊಲೀಸರು ಫಾರೂಖ್‍ನನ್ನು ಬಂಧಿಸಿದ್ದರು.
Advertisement
ಫಾರೂಖ್ ಬಂಧನದ ಬಳಿಕ ಭಾರತದ ಸರ್ಕಾರ ಆತನ ಮೂಲದ ಬಗ್ಗೆ ಗುಜರಾತ್ ಮತ್ತು ಮುಂಬೈನಲ್ಲಿ ಮಾಹಿತಿ ಕಲೆ ಹಾಕುತಿತ್ತು. ಈ ವೇಳೆ ದುಬೈ ಕಾಲೇಜ್ ಒಂದರಲ್ಲಿ ಪಾಕಿಸ್ತಾನದ ಪಾಸ್‍ಪೋರ್ಟ್ ಬಳಸಿ ಅಧ್ಯಯನ ಮಾಡುತ್ತಿದ್ದ ವಿಚಾರ ತಿಳಿದು ಬಂದಿದೆ. ಈ ವಿಚಾರವನ್ನು ಬಲವಾಗಿ ಪ್ರತಿಪಾದಿಸಿದ್ದ ಪಾಕಿಸ್ತಾನ ಅಧಿಕಾರಿಗಳು ಫಾರೂಖ್ ನಮ್ಮ ದೇಶದ ಪ್ರಜೆ, ಭಾರತದ ಪ್ರಜೆ ಅಲ್ಲ ಎಂದು ಹೇಳಿ ತಮ್ಮ ದೇಶಕ್ಕೆ ಆತನನ್ನು ಕರೆ ತರುವಲ್ಲಿ ಯಶಸ್ವಿಯಾಗಿದ್ದಾರೆ.
Advertisement
ಯಾರು ಈ ಫಾರೂಖ್?
ಫಾರೂಖ್ 17 ವರ್ಷಗಳಿಂದ ಭಾರತ ಪೊಲೀಸರ ಕಣ್ಣು ತಪ್ಪಿಸಿ ಓಡಾಡುತ್ತಿದ್ದ. ಇತನು ಐಎಸ್‍ಐ ಸೇರಿದಂತೆ ಪಾಕಿಸ್ತಾನದ ಕೆಲವು ಭಯೋತ್ಪಾಕ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದಾನೆ. ಇತ್ತೀಚೆಗೆ ಫಾರೂಖ್ ಗುಜರಾತ್‍ನಲ್ಲಿ ಡಿ-ಗ್ಯಾಂಗ್ ಆಪ್ರೇಷನ್‍ನಲ್ಲಿ ಗುರುತಿಸಿಕೊಂಡಿದ್ದನು. ಇದರೊಂದಿಗೆ ಫಾರೂಖ್ ಭೂಗತ ಪಾತಕಿಗಳಾದ ದಾವುದ್ ಹಾಗೂ ಛೋಟಾ ಶಕೀಲ್ ಜೊತೆಗೆ ಸಂಪರ್ಕ ಹೊಂದಿದ್ದಾನೆ.
Advertisement
2003 ಮಾರ್ಚ್ ತಿಂಗಳಿನಲ್ಲಿ ಗುಜರಾತಿನ ಮಾಜಿ ಸಚಿವ ಹರೇನ್ ಪಾಂಡ್ಯ (43) ಅವರನ್ನು ಗುಂಡಿಕ್ಕಿ ಕೊಲೆ ಮಾಡಲಾಗಿತ್ತು. ಈ ವೇಳೆ ಪಾಂಡ್ಯ ಅವರ ದೇಹದೊಳಗೆ 5 ಗುಂಡು ಸೇರಿದ್ದವು. ಬಿಜೆಪಿ ಮುಖಂಡ ಹರೇನ್ ಪಾಂಡ್ಯ ಹತ್ಯೆ ಪ್ರಕರಣದಲ್ಲಿ ಫಾರುಕ್ ಆರೋಪಿಯಾಗಿದ್ದಾನೆ. ಅಷ್ಟೇ ಅಲ್ಲದೆ ಪಾಕಿಸ್ತಾದಲ್ಲಿ ತನ್ನ ಸಂಬಂಧಿ ಫೈಜಲ್ ಮಿರ್ಜಾ ಹಾಗೂ ಅಲ್ಲಾಹರಖಾನ್ ಮುನ್ಸುರಿ ಜೊತೆ ಸೇರಿ ಭಯೋತ್ಪಾನಾ ತರಬೇತಿ ಕೇಂದ್ರ ಪಾರಂಭಿಸಿದ್ದನು. ಸದ್ಯ ಫೈಜಲ್ ಹಾಗೂ ಮುನ್ಸುರಿಯನ್ನು ಮಹಾರಾಷ್ಟ್ರ ಎಟಿಎಸ್ ಬಂಧಿಸಿದೆ.