ಜಿಮ್ನಾಸ್ಟಿಕ್‍ನಲ್ಲಿ ಭಾರತಕ್ಕೆ ಮೊದಲ ಚಿನ್ನ – ದೀಪಾ ಕರ್ಮಾಕರ್ ಏಷ್ಯನ್ ಚಾಂಪಿಯನ್

Public TV
1 Min Read
Dipa Karmakar

ತಾಷ್ಕೆಂಟ: ಏಷ್ಯನ್ ಜಿಮ್ನಾಸ್ಟಿಕ್ ಚಾಂಪಿಯನ್‍ಶಿಪ್‍ನಲ್ಲಿ (Asian Gymnastics Championship) ಭಾರತದ ತಾರಾ ಅಥ್ಲೀಟ್ ದೀಪಾ ಕರ್ಮಾಕರ್ (Dipa Karmakar) ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ಜಿಮ್ನಾಸ್ಟಿಕ್ ಚಾಂಪಿಯನ್‍ಶಿಪ್‍ನಲ್ಲಿ ಚಿನ್ನ ಪಡೆದ ಭಾರತದ ಮೊದಲ ಅಥ್ಲೀಟ್ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

ದೀಪಾ ಭಾನುವಾರ (ಮೇ 26) ಮಹಿಳೆಯರ ವಾಲ್ಟ್ ಸ್ಪರ್ಧೆಯಲ್ಲಿ ಸರಾಸರಿ 13.566 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದರು. ಉತ್ತರ ಕೊರಿಯಾದ ಕಿಮ್ ಸನ್ ಹ್ಯಾಂಗ್(13.466) ಬೆಳ್ಳಿ, ಕ್ಯೊಂಗ್ ಬ್ಯೊಲ್(12.966) ಕಂಚಿಗೆ ತೃಪ್ತಿಪಟ್ಟುಕೊಂಡರು. ಇದನ್ನೂ ಓದಿ: IPL 2024: ಚಾಂಪಿಯನ್‌ KKRಗೆ 20 ಕೋಟಿ ರೂ., ಆರೆಂಜ್‌, ಪರ್ಪಲ್‌ ಕ್ಯಾಪ್‌‌ ಗೆದ್ದವ್ರಿಗೆ ಸಿಕ್ಕಿದ್ದೆಷ್ಟು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್‌

2016ರ ರಿಯೋ ಒಲಿಂಪಿಕ್ಸ್‌ನಲ್ಲಿ 4ನೇ ಸ್ಥಾನ ಪಡೆದು ಗಮನ ಸೆಳೆದಿದ್ದ ದೀಪಾ, 2015ರ ಏಷ್ಯನ್ ಚಾಂಪಿಯನ್‍ಶಿಪ್‍ನಲ್ಲಿ ಕಂಚಿನ ಪದಕ ಗೆದ್ದಿದ್ದರು. ಉಳಿದಂತೆ ಭಾರತದ ಆಶಿಶ್ ಕುಮಾರ್ 2015ರಲ್ಲಿ ಏಷ್ಯನ್ ಕೂಟದ ಫ್ಲೋರ್ ಎಕ್ಸರ್‍ಸೈಸ್‍ನಲ್ಲಿ ಕಂಚು, 2019, 2022ರಲ್ಲಿ ಪ್ರಣತಿ ನಾಯಕ್ ವಾಲ್ಟ್ ವಿಭಾಗದಲ್ಲಿ ಕಂಚು ಜಯಿಸಿದ್ದರು. ಇದನ್ನೂ ಓದಿ: ಫೈನಲ್‌ನಲ್ಲಿ ಕೋಲ್ಕತ್ತಾ ವಿರುದ್ಧ ಹೈದರಾಬಾದ್‌ಗೆ ಸೋಲು; ದುಃಖ ತಡೆಯಲಾರದೇ ಕಣ್ಣೀರಿಟ್ಟ ಕಾವ್ಯ ಮಾರನ್‌

Share This Article