ಬೆಂಗಳೂರು: 2022ರ ಐಪಿಎಲ್ (IPL) ಸೀಸನ್‌ನಲ್ಲಿ ಭರ್ಜರಿ ಬ್ಯಾಟಿಂಗ್‌ನಿಂದ T20 ವಿಶ್ವಕಪ್‌ಗೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದುಕೊಂಡಿದ್ದ ದಿನೇಶ್ ಕಾರ್ತಿಕ್ (Dinesh Karthik) ಈ ಬಾರಿ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿ ಬೇಡದ ದಾಖಲೆಯೊಂದನ್ನ ಹೆಗಲಿಗೇರಿಸಿಕೊಂಡಿದ್ದಾರೆ.
ಆರಂಭದಿಂದಲೂ ಕಳಪೆ ಬ್ಯಾಟಿಂಗ್ ಮುಂದುವರಿಸಿದ ದಿನೇಶ್ ಕಾರ್ತಿಕ್ 17ನೇ ಬಾರಿಗೆ ಡಕೌಟ್ ಆಗುವ ಮೂಲಕ ಐಪಿಎಲ್‌ನಲ್ಲಿ ಅತಿಹೆಚ್ಚು ಬಾರಿ ಡಕೌಟ್ ಆದ ಕೆಟ್ಟ ದಾಖಲೆ ಬರೆದಿದ್ದಾರೆ. ಇದನ್ನೂ ಓದಿ: ಗ್ರೀನ್ ಸ್ಫೋಟಕ ಶತಕ, ಮುಂಬೈಗೆ 8 ವಿಕೆಟ್‌ಗಳ ಭರ್ಜರಿ ಜಯ – RCB ಗೆದ್ದರಷ್ಟೇ ಪ್ಲೇ ಆಫ್‌ಗೆ
ಐಪಿಎಲ್‌ನಲ್ಲಿ ಕೆಕೆಆರ್ (KKR) ತಂಡದ ಆಟಗಾರ ಸುನೀಲ್ ನರೇನ್, ಮಂದೀಪ್ ಸಿಂಗ್ ತಲಾ 15 ಬಾರಿ, ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) 16 ಬಾರಿ ಡಕೌಟ್ ಆದ ಕೆಟ್ಟ ಸಾಧನೆ ಮಾಡಿದ್ದರು. ಆದ್ರೆ 2023ರ ಸೀಸನ್‌ನಲ್ಲಿ ಸತತ ಕಳಪೆ ಬ್ಯಾಟಿಂಗ್‌ನಿಂದ ದಿನೇಶ್ ಕಾರ್ತಿಕ್ ಅತಿಹೆಚ್ಚುಬಾರಿ ಡಕೌಟ್ ಆದ ಕೆಟ್ಟ ದಾಖಲೆ ಬರೆದಿದ್ದಾರೆ. ಇದನ್ನೂ ಓದಿ: ಕೊನೆಯಲ್ಲಿ ರಿಂಕು 6,4,6 – ಹೋರಾಡಿ ಸೋತ KKR – 1 ರನ್‌ನಿಂದ ಗೆದ್ದು ಪ್ಲೇ ಆಫ್‌ಗೆ ಹಾರಿದ ಲಕ್ನೋ
ಒಟ್ಟಾರೆಯಾಗಿ ಕ್ರಿಕೆಟ್ ವೃತ್ತಿ ಬದುಕಿನಲ್ಲಿ 386 ಟಿ20 ಪಂದ್ಯಗಳನ್ನಾಡಿರುವ ದಿನೇಶ್ ಕಾರ್ತಿಕ್ 25 ಬಾರಿ ಡಕೌಟ್ ಆಗಿದ್ದರೆ, ರೋಹಿತ್ ಶರ್ಮಾ 27 ಬಾರಿ ಡಕೌಟ್ ಆಗಿದ್ದಾರೆ. ಇದರಿಂದ ಆರ್‌ಸಿಬಿ ಅಭಿಮಾನಿಗಳು ದಿನೇಶ್ ಕಾರ್ತಿಕ್ ವಿರುದ್ಧ ಕಿಡಿ ಕಾರಿದ್ದಾರೆ.
ಸೂಪರ್ ಸಂಡೇನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಕೊನೆಯ ಲೀಗ್ ಪಂದ್ಯವನ್ನಾಡುತ್ತಿರುವ ಆರ್‌ಸಿಬಿ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 197 ರನ್‌ಗಳನ್ನು ಕಲೆಹಾಕಿತು.