– ಹೆಚ್‍ಡಿಕೆ ಆರೋಪಕ್ಕೆ ತಿರುಗೇಟು
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಮಾನಸಿಕ ಅಸ್ವಸ್ಥರಾಗಿದ್ದಾರೆ ಎಂದು ಶಾಸಕ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ರಾಹುಲ್ ಗಾಂಧಿ ಡ್ರಗ್ ಪೆಡ್ಲರ್ ಎಂಬ ಕಟೀಲ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದರು. ನಳಿನ್ ಕುಮಾರ್ ಕಟೀಲ್ ರಾಹುಲ್ ಗಾಂಧಿ ಬಗ್ಗೆ ಮಾತನಾಡಿದ್ದಾರೆ. ಎಂತಹ ಅವಿವೇಕಿಗೆ ಬಿಜೆಪಿ ಪಕ್ಷ ರಾಜ್ಯಾಧ್ಯಕ್ಷರನ್ನಾಗಿ ಮಾಡಿದೆ ಅನ್ನೋದನ್ನ ಇದು ತೋರಿಸುತ್ತೆ. ಕಟೀಲ್ ಮಾನಸಿಕ ಅಸ್ವಸ್ಥರಾಗಿದ್ದಾರೆ. ರಾಜ್ಯಾಧ್ಯಕ್ಷರಾದವರ ಮನಸ್ಸು ಎಷ್ಟು ಕೊಳಕಾಗಿದೆ ಅನ್ನೋದು ಗೊತ್ರಾಗುತ್ತೆ ಎಂದು ಕಿಡಿಕಾರಿದರು.
Advertisement
1@RahulGandhi ಯವರನ್ನು ಡ್ರಗ್ ಪೆಡ್ಲರ್ ಎಂದಿರುವ @nalinkateel ಕೇವಲ ಜೋಕರ್ ಮಾತ್ರ ಅಲ್ಲ, ಸಂಸ್ಕಾರವೇ ಇಲ್ಲದ ಅತ್ಯಂತ ತುಚ್ಛ ವ್ಯಕ್ತಿ ಕೂಡ ಹೌದು.
ಶತಮಾನದ ಶ್ರೇಷ್ಟ ಅವಿವೇಕಿಯಂತೆ ವರ್ತಿಸುವ ಕಟೀಲ್‌ರವರಿಗೆ ಬಹುಶಃ ಡ್ರಗ್ಸ್ ತೆಗೆದುಕೊಳ್ಳುವ ಅಭ್ಯಾಸವಿರಬಹುದು.
ಆ ಡ್ರಗ್ಸ್ ನಶೆಯಲ್ಲೇ ಇಂತಹ ಅಸಂಬದ್ಧ ಮಾತುಗಳನ್ನು ಆಡುತ್ತಾರೆನೋ?
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) October 19, 2021
Advertisement
ನಳಿನ್ ಕುಮಾರ್ ಕಟೀಲ್, ಯತ್ನಾಳ್, ಸಿ.ಟಿ.ರವಿ, ಅನಂತ್ ಕುಮಾರ್ ಹೆಗ್ಡೆ ಅಂತವರೇ ಇವರಿಗೆ ಹೀರೋಗಳು. ಅವರು ಆಡುವ ಮಾತು ಎಂತದ್ದು ಬಳಸುವ ಭಾಷೆ ಎಂತದ್ದು…?, ಇಂತವರನ್ನ ಬೆಂಬಲಸುವವರೇ ನರೇಂದ್ರ ಮೋದಿ. ಕಟೀಲ್ ಗೆ ಕ್ಷಮೆ ಕೇಳುವ ಅರ್ಹತೆಯೂ ಇಲ್ಲ. ಕಟೀಲ್ ನ ಕೂಡಲೇ ವಜಾ ಮಾಡಬೇಕು. ಬಾಯಿ ಮುಚ್ಚಿಕೊಂಡು ಇರಪ್ಪ ಅಂತ ಹೇಳಬೇಕು. ನಳಿನ್ ಕುಮಾರ್ ಕಟೀಲ್ ಒಬ್ಬ ಅವಿವೇಕಿ. ಅವರಿಗೆ ತಲೆ ಕೆಟ್ಟಿದೆ ಎಂದು ಗರಂ ಆದರು. ಇದನ್ನು ಓದಿ: ರಾಹುಲ್ ಗಾಂಧಿ ಡ್ರಗ್ ಪೆಡ್ಲರ್: ಕಟೀಲ್
Advertisement
3
ಕಟೀಲ್‌ರವರು ಬಿಜೆಪಿಯಂತಹ ರಾಷ್ಟ್ರೀಯ ಪಕ್ಷದ ರಾಜ್ಯಾಧ್ಯಕ್ಷರಾಗಿ ಸಭ್ಯತೆಯಿಂದ ಮಾತನಾಡುವ ಸಂಸ್ಕೃತಿ ಕಲಿಯಲಿ.
ಇಲ್ಲವೇ ಈ ರೀತಿ ಮಾತನಾಡುವುದು RSS ಕಲಿಸಿದ ಸಂಸ್ಕಾರ ಎಂದು ಬಹಿರಂಗವಾಗಿ ಒಪ್ಪಿಕೊಳ್ಳಲಿ.
ಕುಲವಂ ನಾಲಗೆ ನುಡಿಯಿತು ಎಂಬಂತೆ ಕಟೀಲ್‌ರವರ ಸಂಸ್ಕಾರ ಮತ್ತು ಸಂಸ್ಕೃತಿಯೇನು ಎಂಬುದು ಅವರ ಮಾತಿನಿಂದಲೇ ತಿಳಿಯುತ್ತದೆ.
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) October 19, 2021
Advertisement
ಇದೇ ವೇಳೆ ಮುಸ್ಲಿಂ ನಾಯಕರನ್ನು ಸಿದ್ದರಾಮಯ್ಯ ಟರ್ಮಿನೇಟ್ ಮಾಡುತ್ತಿದ್ದಾರೆ ಎಂಬ ಹೆಚ್‍ಡಿಕೆ ಆರೋಪಕ್ಕೆ ಕೂಡ ದಿನೇಶ್ ಗುಂಡೂರಾವ್ ತಿರುಗೇಟು ನಿಡಿದರು. ಅವರ ಉದ್ದೇಶ ಬೇರೆ, ಮೆಜಾರಿಟಿ ಬರಬಾರದು ಅಂತ. ಕುಮಾರಸ್ವಾಮಿ ಅವರಿಗೆ ಯಾವುದೇ ಬದ್ಧತೆ, ತತ್ವ ಸಿದ್ಧಾಂತ ಯಾವುದೂ ಗೊತ್ತಿಲ್ಲ ಎಂದರು. ಇದನ್ನು ಓದಿ: ಶೇ.40 ರಷ್ಟು ಮಹಿಳೆಯರಿಗೆ ಟಿಕೆಟ್ – ಯುಪಿಯಲ್ಲಿ ಪ್ರಿಯಾಂಕಾ ಗಾಂಧಿ ಕ್ರಾಂತಿಕಾರಿ ನಿರ್ಧಾರ
3
ನಳೀನ್ ಕುಮಾರ್ ಕಟೀಲ್ ರಾಜ್ಯಾಧ್ಯಕ್ಷರಾಗಿ ಹಾಗೂ ಸಂಸದರಾಗಿ ರಾಹುಲ್ ಗಾಂಧಿಯವರ ಬಗ್ಗೆ ಅತ್ಯಂತ ಕೀಳುಮಟ್ಟದ ಹಾಗೂ ಆಧಾರರಹಿತ ಹೇಳಿಕೆ ಕೊಟ್ಟಿದ್ದಾರೆ.
ಈ ಹೇಳಿಕೆ ಕಟೀಲ್‌ರವರ ಕೊಳಕು ಮನಃಸ್ಥಿತಿಯನ್ನು ಅನಾವರಣ ಮಾಡಿದೆ.
ಸಂಸ್ಕೃತಿ ಮತ್ತು ದೇವರ ಬಗ್ಗೆ ಮಾತನಾಡುವ ಬಿಜೆಪಿಯವರ ಅಶ್ಲೀಲ ವಿಡಿಯೋಗಳು ಹರಿದಾಡುತ್ತಿವೆ.
ಆ ಬಗ್ಗೆ ಕ್ರಮವೇನು?
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) October 19, 2021
ವೈಯಕ್ತಿಕ ಲಾಭಕ್ಕಾಗಿ ರಾಜಕೀಯವನ್ನು ಮಾಡ್ತಾರೆ. ಅವರಿಗೆ ಸುತ್ತ ಹದಿನೈದು ಶಾಸಕರು ಇದ್ರೆ ಸಾಕು. ಬ್ಲಾಕ್ ಮೇಲ್ ರಾಜಕೀಯ ಮಾಡ್ತಾ ಇದ್ದಾರೆ. ಕಿಂಗ್ ಮೇಕರ್ ಆಗಬೇಕು ಅನ್ನುವುದಷ್ಟೆ ಅವರ ಉದ್ದೇಶ. ಅಧಿಕಾರಕ್ಕಾಗಿ ರಾಜಕಾರಣ ಮಾಡ್ತಾ ಇದ್ದಾರೆ. ಯಾವಾಗಾದರೂ ಅವರು ರಾಜ್ಯ ಅಥವಾ ದೇಶದ ಬಗ್ಗೆ ಗಂಭೀರವಾಗಿ ಮಾತನಾಡಿದ್ದಾರಾ ಎಂದು ಗುಂಡೂರಾವ್ ಪ್ರಶ್ನಿಸಿದರು.