Bengaluru CityDistrictsKarnatakaLatestMain Post

ಹೇಳಿದ್ದನ್ನೇ ಹೇಳೋ ಕಿಸಬಾಯಿ ದಾಸನಂತೆ ಸುಳ್ಳು ಭಾಷಣ ಬಿಟ್ಟು ಸತ್ಯ ಮಾತಾಡ್ತೀರಾ: ಮೋದಿಗೆ ಗುಂಡೂರಾವ್ ಪ್ರಶ್ನೆ

ಬೆಂಗಳೂರು: ಮೋದಿಯವರೇ ಇಂದಾದರೂ ಹೇಳಿದ್ದನ್ನೇ ಹೇಳುವ ಕಿಸಬಾಯಿ ದಾಸ ಎಂಬಂತೆ ಸುಳ್ಳು ಭಾಷಣ ಬಿಟ್ಟು ಸತ್ಯ ಮಾತನಾಡುತ್ತೀರಾ ಎಂದು ಶಾಸಕ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.

ಪ್ರಧಾನಿ ಮೋದಿ ಅವರು ಇಂದು ಮಂಗಳೂರಿಗೆ ಆಗಮಿಸುತ್ತಿರುವ ಹಿನ್ನೆಲೆ ಸರಣಿ ಟ್ವೀಟ್ ಮಾಡಿರುವ ದಿನೇಶ್ ಗುಂಡೂರಾವ್ ಅವರು, ಇಂದು ಮಂಗಳೂರಿಗೆ ಬರುತ್ತಿರುವ ಮೋದಿಯವರಿಗೆ ಸ್ವಾಗತ. ಯಥಾಪ್ರಕಾರ ಇಂದೂ ಕೂಡ ಮೋದಿಯವರ ಬುರುಡೆ ಭಾಷಣ ಚರ್ವಿತ ಚರ್ವಣದಂತೆ ರಿಪೀಟ್ ಆಗಲಿದೆ. ಆದರೂ ಮೋದಿಯವರ ಬುರುಡೆ ಭಾಷಣ ಕೇಳುವ ಅನಿವಾರ್ಯ ಕರ್ಮ ಕನ್ನಡಿಗರದ್ದು. ಮೋದಿಯವರೇ ಇಂದಾದರೂ ಹೇಳಿದ್ದನ್ನೇ ಹೇಳುವ ಕಿಸಬಾಯಿ ದಾಸ ಎಂಬಂತೆ ಸುಳ್ಳು ಭಾಷಣ ಬಿಟ್ಟು ಸತ್ಯ ಮಾತನಾಡುತ್ತೀರಾ ಎಂದು ವ್ಯಂಗ್ಯವಾಡಿದ್ದಾರೆ.

ಮೋದಿಯವರೇ, ಇಂದಿನ ನಿಮ್ಮ ಭಾಷಣದಲ್ಲಿ ರಾಜ್ಯ ಬಿಜೆಪಿ ಸರ್ಕಾರದ 40% ಕಮಿಷನ್ ದಂಧೆ, ಪಿಎಸ್‍ಐ ಹಗರಣ, ಕೆಪಿಟಿಸಿಎಲ್ ನೇಮಕಾತಿ ಹಗರಣ, ಉಪನ್ಯಾಸಕರ ನೇಮಕಾತಿ ಹಗರಣ, ಜ್ಯೂ.ಇಂಜಿನಿಯರ್ ನೇಮಕಾತಿ ಹಗರಣ ಹಾಗೂ ನಿಮ್ಮ ಪಕ್ಷ 2018ರ ಪ್ರಣಾಳಿಕೆಯಲ್ಲಿ 600 ವಚನ ಕೊಟ್ಟು ಒಂದನ್ನೂ ಈಡೇರಿಸದೇ ವಚನ ವಂಚನೆಯ ಬಗ್ಗೆ ಮಾತಾಡುವಿರಾ? ನಿಮ್ಮ ಪಾರದರ್ಶಕತೆಗೆ ಸವಾಲು ಇದು ಎಂದಿದ್ದಾರೆ.

ಮೋದಿಯವರೇ, ಇಂದಿನ ನಿಮ್ಮ ಭಾಷಣದಲ್ಲಿ ರಾಜ್ಯಕ್ಕೆ ಕೇಂದ್ರದಿಂದ ಜಿಎಸ್‍ಟಿ ಬಾಕಿ ಯಾಕೆ ಕೊಟ್ಟಿಲ್ಲ, 15ನೇ ಹಣಕಾಸು ಆಯೋಗ ನೀಡಿದ್ದ ವಿಶೇಷ ಅನುದಾನ ರಾಜ್ಯಕ್ಕೆ ಕೊಡದಿರುವುದು ಯಾಕೆ? 2014ರಲ್ಲಿ 52 ಲಕ್ಷ ಕೋಟಿ ಇದ್ದ ದೇಶದ ಸಾಲ ನಿಮ್ಮ ಅಧಿಕಾರಾವಧಿಯಲ್ಲಿ 1.42 ಲಕ್ಷ ಕೋಟಿ ಏರಿಕೆಯಾಗಿದ್ದು ಯಾಕೆ? ಎಂಬ ಬಗ್ಗೆ ದಯವಿಟ್ಟು ಮಾತನಾಡುವಿರಾ ಎಂದು ಹೇಳಿದ್ದಾರೆ. ಇದನ್ನೂ ಓದಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ವಜ್ರಕುಮಾರ್ ಇನ್ನಿಲ್ಲ

ಮೋದಿಯವರೇ, ಇಂದಿನ ನಿಮ್ಮ ಭಾಷಣದಲ್ಲಿ ತೈಲಬೆಲೆ ಯದ್ವಾತದ್ವಾ ಏರಿಕೆಯಾಗಿದ್ದು ಯಾಕೆ? 80 ರೂ. ಇದ್ದ ಅಡುಗೆ ಎಣ್ಣೆ 180 ರೂ. ಗಡಿ ದಾಟಿದ್ದು ಯಾಕೆ? 400 ರೂ. ಇದ್ದ ಸಿಲಿಂಡರ್ ಬೆಲೆ ಸಾವಿರ ತಲುಪಿದ್ದು ಹೇಗೆ? 30 ರೂ. ಇದ್ದ ಸಾಬೂನು 60 ರೂ. ಆಗಿದ್ದು ಹೇಗೆ? ತಿನ್ನುವ ಅನ್ನಕ್ಕೂ ನಿಮ್ಮ ಸರ್ಕಾರ GST ಹಾಕಿ ದೋಚುತ್ತಿರುವ ಬಗ್ಗೆ ಮಾತನಾಡುವಿರಾ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಸಾರ್ವಜನಿಕವಾಗಿ ಹಸ್ತಮೈಥುನ ಮಾಡಿಕೊಳ್ಳುವುದು ಲೈಂಗಿಕ ಉದ್ದೇಶವನ್ನು ಸೂಚಿಸುತ್ತದೆ: ಮುಂಬೈ ಕೋರ್ಟ್

ಮೋದಿಯವರೆ, ಇಂದಿನ ನಿಮ್ಮ ಭಾಷಣದಲ್ಲಿ ಪಿಎಂ ಕೇರ್ಸ್ ಹೆಸರಲ್ಲಿ ಸಂಗ್ರಹಿಸಿದ ಸಾವಿರಾರು ಕೋಟಿ ಹಣ ಎಲ್ಲಿ ಹೋಯಿತು? ಆಪರೇಷನ್ ಕಮಲಕ್ಕೆ ಬಳಕೆಯಾಗುವ ದುಡ್ಡಿನ ಮೂಲ ಯಾವುದು? ಬಿಜೆಪಿಯವರ ಮೇಲೆ ಇಡಿ, ಐಟಿ & ಸಿಬಿಐ ದಾಳಿ ನಡೆಯದ ರಹಸ್ಯವೇನು? ರೈತರ ಸಾಲ ಮನ್ನಾ ಮಾಡದೇ ಕಾರ್ಪೋರೆಟ್ ಕುಳಗಳ ಲಕ್ಷ ಲಕ್ಷ ಕೋಟಿ ತೆರಿಗೆ ಮನ್ನಾ ಮಾಡಿದ ಬಗ್ಗೆ ಮಾತನಾಡುವಿರಾ ಎಂದಿದ್ದಾರೆ.

Live Tv

Leave a Reply

Your email address will not be published.

Back to top button