ರಾಜ್ಯದಲ್ಲಿ ಯೋಗಿ ಮಾದರಿ ಆಡಳಿತ ಬೇಕು ಎಂದು ಪ್ರತಿಪಾದಿಸುವವರು ಅತ್ಯಾಚಾರಿಗಳ ಸಮರ್ಥಕರಿದ್ದಂತೆ: ದಿನೇಶ್ ಗುಂಡೂರಾವ್

Public TV
2 Min Read
DineshGunduRao

ಬೆಂಗಳೂರು: ನಮ್ಮ ರಾಜ್ಯದಲ್ಲಿ ಯೋಗಿ (Yogi Adityanath) ಮಾದರಿ ಆಡಳಿತ ಬೇಕು ಎಂದು ಪ್ರತಿಪಾದಿಸುವವರು ಅತ್ಯಾಚಾರಿಗಳ ಸಮರ್ಥಕರಿದ್ದಂತೆ. ಉನ್ನಾವೋ ಪ್ರಕರಣದಲ್ಲಿ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಅತ್ಯಾಚಾರವೆಸಗಿದಲ್ಲದೆ ಜೈಲಿನಿಂದಲೇ ಸಂತ್ರಸ್ತೆಯ ತಂದೆ ಹಾಗೂ ವಕೀಲರನ್ನು ಕೊಲ್ಲಿಸುತ್ತಾನೆ. ಯೋಗಿ ಆಡಳಿತದ ಶ್ರೀರಕ್ಷೆಯಿಲ್ಲದೆ ಬಿಜೆಪಿ ಶಾಸಕನಿಗೆ ಈ ಕೃತ್ಯ ನಡೆಸಲು ಸಾಧ್ಯವೇ ಎಂದು ಸರಣಿ ಪ್ರಶ್ನೆಗಳೊಂದಿಗೆ ಸರಣಿ ಟ್ವೀಟ್ ಮೂಲಕ ಬಿಜೆಪಿ (BJP) ನಾಯಕರ ವಿರುದ್ಧ ಕಾಂಗ್ರೆಸ್ (Congress) ನಾಯಕ ದಿನೇಶ್ ಗುಂಡೂರಾವ್ (Dinesh Gundu Rao) ವಾಗ್ದಾಳಿ ನಡೆಸಿದ್ದಾರೆ.

BASAVARAJ BOMMAI AND YOGI ADITHYANATH 2

ಟ್ವೀಟ್‍ನಲ್ಲಿ ಏನಿದೆ?:
ಹತ್ರಾಸ್ (Hathras), ಉನ್ನಾವೋ Unnao) ಅತ್ಯಾಚಾರ ಘಟನೆ ಮಾಸುವ ಮುುುನ್ನವೇ ಉ.ಪ್ರದೇಶದಲ್ಲಿ ಮತ್ತೊಂದು ಜೋಡಿ ಅತ್ಯಾಚಾರ ಹಾಗೂ ಹತ್ಯೆಯ ಘಟನೆ ನಡೆದಿದೆ. ಯೋಗಿ ಮಾದರಿ, ಯೋಗಿ ಮಾದರಿ ಎಂದು ಬಾಯಿ ಬಡಿದುಕೊಳ್ಳುವ ರಾಜ್ಯ ಬಿಜೆಪಿ ನಾಯಕರು, ಯೋಗಿ ಆಡಳಿತದಲ್ಲಿ ಹೆಣ್ಣು ಮಕ್ಕಳಿಗೆ ಹಾಗೂ ಪರಿಶಿಷ್ಟ ಜಾತಿಯವರಿಗೆ ಏನು ರಕ್ಷಣೆಯಿದೆ? ಅನಾಗರಿಕ ಯೋಗಿ ಮಾದರಿ ಆಡಳಿತ ನಮಗೆ ಬೇಕೆ? ಇದನ್ನೂ ಓದಿ: ನೇಣು ಬಿಗಿದ ಸ್ಥಿತಿಯಲ್ಲಿ ಇಬ್ಬರು ದಲಿತ ಬಾಲಕಿಯರ ಮೃತದೇಹ ಪತ್ತೆ – ಅತ್ಯಾಚಾರ, ಕೊಲೆ ಆರೋಪ

Vidah Sauda state legislature building Karnataka Bengaluru

ಯೋಗಿ ಆಡಳಿತದಲ್ಲಿ ಉ.ಪ್ರದೇಶ (Uttar Pradesh) ಅನಾಗರಿಕರ ನಾಡಾಗಿದೆ. ಕೊಲೆ, ಅತ್ಯಾಚಾರ ಈ ರಾಜ್ಯದಲ್ಲಿ ಸರ್ವೇ ಸಾಮಾನ್ಯ. ಇಂತಹ ಗೂಂಡಾ ರಾಜ್ಯ ನಮ್ಮ ರಾಜ್ಯ ಬಿಜೆಪಿ ನಾಯಕರಿಗೆ ಮಾದರಿ ಅಂತಾ ಅನ್ನಿಸಿದಾದರೂ ಹೇಗೆ? ಯೋಗಿ ಮಾದರಿ ಎಂದು ಕನವರಿಸುವ ಬಿಜೆಪಿಯವರಿಗೆ ನಮ್ಮ ರಾಜ್ಯ ದಕ್ಷಿಣದ ಉ.ಪ್ರದೇಶವಾಗಬೇಕೆ? ಉ.ಪ್ರದೇಶದಂತೆ ಕರ್ನಾಟಕ (Karnataka) ಅತ್ಯಾಚಾರಿಗಳ ಸ್ವರ್ಗವಾಗಬೇಕೆ? ಇದನ್ನೂ ಓದಿ: ಕೇವಲ ಧರ್ಮಾಧಾರಿತ ಅಲ್ಲ, ಇದು ಲಿಂಗಾಧಾರಿತ ತಾರತಮ್ಯ – ಹಿಜಬ್‌ಗೆ ಅನುಮತಿ ನೀಡಿ

ನಮ್ಮ ರಾಜ್ಯದಲ್ಲಿ ಯೋಗಿ ಮಾದರಿ ಆಡಳಿತ ಬೇಕು ಎಂದು ಪ್ರತಿಪಾದಿಸುವವರು ಅತ್ಯಾಚಾರಿಗಳ ಸಮರ್ಥಕರಿದ್ದಂತೆ. ಉನ್ನಾವೋ ಪ್ರಕರಣದಲ್ಲಿ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಅತ್ಯಾಚಾರವೆಸಗಿದಲ್ಲದೆ ಜೈಲಿನಿಂದಲೇ ಸಂತ್ರಸ್ತೆಯ ತಂದೆ ಹಾಗೂ ವಕೀಲರನ್ನು ಕೊಲ್ಲಿಸುತ್ತಾನೆ. ಯೋಗಿ ಆಡಳಿತದ ಶ್ರೀರಕ್ಷೆಯಿಲ್ಲದೆ ಬಿಜೆಪಿ ಶಾಸಕನಿಗೆ ಈ ಕೃತ್ಯ ನಡೆಸಲು ಸಾಧ್ಯವೇ? ಇದನ್ನೂ ಓದಿ: ಗಂಟೆಗೆ 130 ಕಿ.ಮೀ ವೇಗದಲ್ಲಿ ಬಂದು ಡಿಕ್ಕಿ ಹೊಡೆದ ಕಾರು – ಮಹಿಳಾ ಟೆಕ್ಕಿಗಳಿಬ್ಬರ ದುರ್ಮರಣ

ಹತ್ರಾಸ್ ಪ್ರಕರಣದಲ್ಲಿ ಅತ್ಯಾಚಾರಕ್ಕೊಳಗಾಗಿ ಹತ್ಯೆಯಾದ ಬಾಲಕಿಯ ಶವವನ್ನು ಪೋಷಕರಿಗೂ ತಿಳಿಯದಂತೆ ಕದ್ದುಮುಚ್ಚಿ ಉ.ಪ್ರದೇಶ ಪೊಲೀಸರು ಅಂತ್ಯಸಂಸ್ಕಾರ ನಡೆಸುತ್ತಾರೆ. ಯೋಗಿ ಆಡಳಿತದಲ್ಲಿ ಮಾತ್ರ ಇಂತಹ ಭೀಭತ್ಸ್ಯ ಕೃತ್ಯಗಳು ನಡೆಯಲು ಸಾಧ್ಯ. ಯೋಗಿ ಮಾದರಿ ಎಂದು ಬೊಬ್ಬಿರಿಯುವ ರಾಜ್ಯ ಬಿಜೆಪಿ ನಾಯಕರು ನಮ್ಮ ರಾಜ್ಯದಲ್ಲೂ ತರಲು ಹೊರಟಿರಯವುದು ಈ ಮಾದರಿಯನ್ನೇ ಎಂದು ಪ್ರಶ್ನಿಸಿ ಟೀಕಿಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article