– ಸಾರಿಗೆ ಇಲಾಖೆಯಿಂದ ʻಇವಿʼಗಳನ್ನೇ ಖರೀದಿಸಲು ತಾಕೀತು
ಬೆಂಗಳೂರು: ದೆಹಲಿ ಮಾದರಿಯಲ್ಲಿ ಬೆಂಗಳೂರು (Bengaluru) ವಾಯುಮಾಲಿನ್ಯ ಹದಗೆಡುವುದು ಬೇಡ. ಮುಂಜಾಗ್ರತೆಯ ಸಲುವಾಗಿ ʻಇವಿʼಗಳಿಗೆ (Electric Vehicles) ಮೊರೆ ಹೋಗುವಂತೆ ಸಾರಿಗೆ ಸಚಿವರಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಪತ್ರ ಬರೆದಿದ್ದಾರೆ.
Advertisement
ವಾಯುಮಾಲಿನ್ಯ ನಿಯಂತ್ರಣಕ್ಕೆ ʻಇವಿʼಬಳಕೆ ನಿಯಮ ಜಾರಿಗೆ ಕ್ರಮವಹಿಸಿ. ದಿನೇ ದಿನೇ ವಾಯುಮಾಲಿನ್ಯ ಹೆಚ್ಚಾಗುತ್ತಿದ್ದು, ನಿಯಂತ್ರಣದ ಕ್ರಮಗಳ ಬಗ್ಗೆ ಚಿಂತನೆ ನಡೆಸುವಂತೆ ಸಚಿವ ರಾಮಲಿಂಗಾ ರೆಡ್ಡಿಗೆ (Ramalinga Reddy) ಪತ್ರದಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ಅಮೆರಿಕದಿಂದ ಅಕ್ರಮ ವಲಸಿಗರು ಗಡಿಪಾರು – 205 ಭಾರತೀಯ ಪ್ರಯಾಣಿಕರಿಗೆ ವಿಮಾನದಲ್ಲಿ ಒಂದೇ ಟಾಯ್ಲೆಟ್
Advertisement
Advertisement
ಭವಿಷ್ಯದಲ್ಲಿ ಸಂಚರಿಸುವ ವಾಹನಗಳಿಗೆ ಅನುಮತಿ ನೀಡುವ ಮುನ್ನ, ಇವಿಗಳಾಗಿದ್ದರೆ ಮಾತ್ರ ಅನುಮತಿ ನೀಡಬೇಕು. ಸಾರಿಗೆ ಇಲಾಖೆಯಿಂದ ವಾಹನಗಳ ಖರೀದಿ ಮಾಡುವುದಿದ್ದರೆ ʻಇವಿʼಗಳನ್ನೇ ಖರೀದಿ ಮಾಡುವಂತೆ ಸಾರಿಗೆ ಸಚಿವರಿಗೆ ದಿನೇಶ್ ಗುಂಡೂರಾವ್ ಪತ್ರದ ಮೂಲಕ ಮನವಿ ಮಾಡಿದ್ದಾರೆ. ಇದನ್ನೂ ಓದಿ: ವಿಸಿ ನಾಲೆಗೆ ಕಾರು ಬಿದ್ದು ದುರಂತ: ಮೃತರ ಸಂಖ್ಯೆ 3ಕ್ಕೆ ಏರಿಕೆ