ಪುನೀತ್ ಮಾಡಬೇಕಾದ ಸಿನಿಮಾ ಈಗ ವಿರಾಟ್ ಪಾಲು! – ಕೊನೆಗೂ ಈಡೇರಲಿಲ್ಲ ದಿನಕರ್ ಕನಸು!

Public TV
2 Min Read
Dinakar nagar Virat Puneeth Rajkumar Jayanna Bhogendra Combines

ಚಂದನವನದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಿಧನರಾದ ನಂತರ ಅವರಿಗಾಗಿಯೇ ಬರೆದ ಎಷ್ಟೋ ಸ್ಕ್ರಿಪ್ಟ್ ಸಿನಿಮಾವಾಗದೇ ನಿಂತಿದೆ. ಅನಿವಾರ್ಯವಾಗಿ ಕೆಲವು ಸಿನಿಮಾಗಳು ಬೇರೆ ನಾಯಕರ ಪಾಲಾಗಿದೆ. ಈಗ ಪುನೀತ್ ನಟಿಸಬೇಕಿದ್ದ ಸಿನಿಮಾಗೆ ‘ಕಿಸ್’ ಖ್ಯಾತಿಯ ವಿರಾಟ್ ಬಣ್ಣ ಹಚ್ಚುತ್ತಿದ್ದಾರೆ.

Puneeth 3 2

ಪುನೀತ್ ಅವರಿಗೆ ಆಕ್ಷನ್ ಕಟ್ ಹೇಳಬೇಕು ಎಂದು ಕಥೆ ರಚಿಸಿದ್ದ ದಿನಕರ್ ತೂಗುದೀಪ ಆ ಕಥೆಗೆ ಬೇರೆ ನಾಯಕರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಸಿನಿಮಾಗೆ ವಿರಾಟ್ ನಾಯಕರಾಗಿ ಆಯ್ಕೆಯಾಗಿದ್ದಾರೆ. ಇಂದು ವಿರಾಟ್ ಹುಟ್ಟುಹಬ್ಬವಾದ ಹಿನ್ನೆಲೆ ಇಂದು ಸಿನಿಮಾ ಪೋಸ್ಟರ್‌ನನ್ನು ಚಿತ್ರತಂಡ ಬಿಡುಗಡೆ ಮಾಡಿದ್ದಾರೆ. ಇದು ವಿರಾಟ್ 3ನೇ ಸಿನಿಮಾ. ಮೂರನೇ ಚಿತ್ರಕ್ಕೆ ಇಷ್ಟು ದೊಡ್ಡ ಪ್ರಾಜೆಕ್ಟ್ ಸಿಕ್ಕಿರುವುದಕ್ಕೆ ವಿರಾಟ್ ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:  ವರ್ಕೌಟ್‌ನಲ್ಲಿ ಬ್ಯುಸಿಯಾದ ವರದನಾಯಕನ ರಾಣಿ 

ಚಿತ್ರತಂಡ ವಿರಾಟ್ ಇರುವ ಪೋಸ್ಟರ್‌ನನ್ನು ಬಿಡುಗಡೆ ಮಾಡಿದ್ದು, ಈ ಸಿನಿಮಾ ಟೈಟಲ್ ಏನು ಎಂಬುದನ್ನು ಮಾತ್ರ ಚಿತ್ರತಂಡ ರಿಲೀಸ್ ಮಾಡಿಲ್ಲ. ಸಿನಿಮಾ ಯಾವುದು ಎಂದು ಗೆಸ್ ಮಾಡಲು ಚಿತ್ರತಂಡ ಪ್ರೇಕ್ಷಕರಿಗೆ ಬಿಟ್ಟಿದ್ದಾರೆ.

appu virat

ಈ ಸಿನಿಮಾವನ್ನು ಜಯಣ್ಣ-ಭೋಗೇಂದ್ರ ಕಂಬೈನ್ಸ್ ನಿರ್ಮಾಣ ಮಾಡುತ್ತಿದ್ದು, ಇದು ಇವರ 24ನ ಸಿನಿಮಾವಾಗಿದೆ. ಅದಕ್ಕೆ ಚಿತ್ರತಂಡ ರಿಲೀಸ್ ಮಾಡಿರುವ ಪೋಸ್ಟರ್‌ರಲ್ಲಿ 24 ಸಂಖ್ಯೆ ಬರೆದಿರುವುದನ್ನು ಕಾಣಬಹುದು.

Dinakar nagar Virat Puneeth Rajkumar Jayanna Bhogendra Combines 1

ದಿನಕರ್ ಮತ್ತು ಅಪ್ಪು ಕಾಂಬಿನೇಷನ್‍ನಲ್ಲಿ ಸಿನಿಮಾ ನೋಡಬೇಕು ಎಂದು ಅಭಿಮಾನಿ ಬಳಗ ಕಾಯುತ್ತಿತ್ತು. ಆದರೆ ಅದು ಆಗಲೇ ಇಲ್ಲ. ದಿನಕರ್ ಅವರಿಗೂ ಅಪ್ಪುಗೆ ಆಕ್ಷನ್ ಕಟ್ ಹೇಳಬೇಕು ಎಂದು ತುಂಬಾ ಆಸೆಯಿತ್ತು. ಆದರೆ ಅದು ನೆರವೇರಲಿಲ್ಲ ಎಂಬುದು ಅವರಿಗೂ ಬೇಸರವಿದೆ. ಜಯಣ್ಣ-ಭೋಗೇಂದ್ರ ಕಂಬೈನ್ಸ್ 24ನೇ ಸಿನಿಮಾದ ನಿರ್ಮಾಣದಲ್ಲಿ ಅಪ್ಪು ಮಾಡಬೇಕಾಗಿತ್ತು. ಆದರೆ ಅದು ಸಾಧ್ಯವಾಗಿಲ್ಲ. ಈ ಪರಿಣಾಮ ಅಪ್ಪು ಮಾಡಬೇಕಾದ ಸಿನಿಮಾ ವಿರಾಟ್ ಪಾಲಾಗಿದೆ.

ಈ ಸಿನಿಮಾವನ್ನು ದಿನಕರ್ ಅವರು ಅಪ್ಪುವಿಗಾಗಿ ಮಾಡಿದ್ದರು. ಆ ಸಿನಿಮಾದಲ್ಲಿ ವಿರಾಟ್ ನಟಿಸುತ್ತಿದ್ದಾರೆ ಎಂದು ಚಂದನವನದಲ್ಲಿ ಸುದ್ದಿ ಹರಿದಾಡುತ್ತಿದೆ. ಪ್ರಸ್ತುತ ಪೋಸ್ಟರ್ ಬಿಟ್ಟು ಚಿತ್ರತಂಡ ಯಾವ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.

Pin on Viraat

ಹೊಸ ಚಿತ್ರದ ಅನೌನ್ಸಮೆಂಟ್ ಕೇಳಿ ವಿರಾಟ್ ಫುಲ್ ಖುಷ್ ಆಗಿದ್ದು, ಮಾಧ್ಯಮಗಳೊಂದಿಗೆ ಖುಷಿಯನ್ನು ಹಂಚಿಕೊಂಡಿದ್ದಾರೆ. ವಿರಾಟ್, ಜಯಣ್ಣ-ಭೋಗೇಂದ್ರ ಕಂಬೈನ್ಸ್ ನಲ್ಲಿ ಸಿನಿಮಾ ಮಾಡಬೇಕು ಎಂಬುದು ನನ್ನ ದೊಡ್ಡ ಕನಸು. ಈಗ ಅದು ನೆರವೇರುತ್ತಿದೆ. ದಿನಕರ್ ಅವರ ನಿರ್ದೇಶನದಲ್ಲಿ ನಟಿಸುವ ಅದೃಷ್ಟ ಸಿಕ್ಕಿದೆ. ಈ ಅವಕಾಶ ಕೊಟ್ಟಿದಕ್ಕೆ ನಾನು ಅವರಗೆ ಚಿರಋಣಿ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.

ವಿರಾಟ್ ‘ಕಿಸ್’ ಮೂವೀ ನಂತರ ‘ಅದ್ದೂರಿ ಲವ್ವರ್’ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಸಿನಿಮಾ ಬಿಡುಗಡೆಯ ಹಂತದಲ್ಲಿದೆ. ಈಗ ಮತ್ತೊಂದು ದೊಡ್ಡ ಪ್ರಾಜೆಕ್ಟ್ ಸಿಕ್ಕಿದೆ. ಕಿರುತೆರೆ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಇವರು ಚಂದನವನಕ್ಕೆ ಭರ್ಜರಿಯಾಗಿ ಪಾದರ್ಪಣೆ ಮಾಡಿದ್ದರು. ಮೊದಲ ಸಿನಿಮಾವೇ ಇವರಿಗೆ ದೊಡ್ಡಮಟ್ಟದ ಯಶಸ್ಸು ತಂದುಕೊಟ್ಟಿತ್ತು. ಇದನ್ನೂ ಓದಿ: ತೆಲುಗಿಗೆ ಎಂಟ್ರಿ ಕೊಟ್ಟ ಸಲಗನ ಸಂಗಾತಿ ಸಂಜನಾ 

ಹಿಟ್ ನಿರ್ದೇಶಕರ ಸಾಲಿನಲ್ಲಿ ದಿನಕರ್ ಅವರು ಇದ್ದು, ಇವರ ನಿರ್ದೇಶನದ ಸಿನಿಮಾ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಹಲವು ವರ್ಷಗಳ ನಂತರ ನಿರ್ದೇಶನ ಮಾಡುತ್ತಿರುವ ಈ ಸಿನಿಮಾ ಬಗ್ಗೆ ಚಂದನವನದಲ್ಲಿ ಭಾರೀ ನಿರೀಕ್ಷೆ ಇದೆ.

Share This Article
Leave a Comment

Leave a Reply

Your email address will not be published. Required fields are marked *