ಭೋಪಾಲ್: ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಅವರು ಪೊಲೀಸ್ ಕಾಲರ್ ಹಿಡಿದು ರಂಪಾಟ ಮಾಡಿರುವ ವೀಡಿಯೋ ಸೊಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ದಿಗ್ವಿಜಯ್ ಸಿಂಗ್ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ವಿಶ್ವಾಸ್ ಸಾರಂಗ್ ನಡುವೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಸ್ಥಾನಕ್ಕೆ ಸಂಬಂಧಿಸಿದಂತೆ ತೀವ್ರ ಪೈಪೋಟಿ ನಡೆಯುತ್ತಿದೆ. ಈ ನಡುವೆ ದಿಗ್ವಿಜಯ ಸಿಂಗ್ ಮತ್ತು ಶಾಸಕರಾದ ಆರಿಫ್ ಮಸೂದ್ ಮತ್ತು ಪಿಸಿ ಶರ್ಮಾ ಸೇರಿದಂತೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಭೋಪಾಲ್‍ನ ಜಿಲ್ಲಾ ಪಂಚಾಯತ್ ಕಚೇರಿಯ ಹೊರಗೆ ಪೊಲೀಸರೊಂದಿಗೆ ಘರ್ಷಣೆ ನಡೆಸಿದ್ದಾರೆ. ಇದನ್ನೂ ಓದಿ: ಬಿಡದಿಯ ನಿತ್ಯಾನಂದನ ಸ್ವರೂಪ ಎಂದು ಜನರನ್ನು ವಂಚಿಸುತ್ತಿದ್ದ ಸತ್ಯಾನಂದನಿಗೆ ಗೂಸಾ
Advertisement
Advertisement
ಸರ್ಕಾರದ ಒತ್ತಡಕ್ಕೆ ಮಣಿದು ಪೊಲೀಸರು ಮತ್ತು ಆಡಳಿತ ವ್ಯವಸ್ಥೆ ಕೆಲಸ ಮಾಡುತ್ತಿದೆ ಎಂದು ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ಆರೋಪಿಸಿದ್ದಾರೆ. ಇದರಿಂದ ಕೋಪಗೊಂಡ ಸಚಿವ ವಿಶ್ವಾಸ್ ಸಾರಂಗ್ ಅವರು ಕಾರಿನಿಂದ ಕೆಳಗಿಳಿದಾಗ ಕಾಂಗ್ರೆಸ್ ಬೆಂಬಲಿಗರು ಅವರನ್ನು ಸುತ್ತುವರಿದಿದ್ದಾರೆ. ಈ ವೇಳೆ ಸಾರಂಗ್ ಕಾಂಗ್ರೆಸ್ ಬೆಂಬಲಿಗರಿಗೆ ಈ ದಾದಾಗಿರಿ ಕೆಲಸ ನಡೆಯುವುದಿಲ್ಲ ಎಂದು ಹೇಳಿದರು. ಸಚಿವ ಸಾರಂಗ್ ಅವರ ಹೇಳಿಕೆಗೆ ಪರಿಸ್ಥಿತಿ ಉದ್ವಿಗ್ನಗೊಂಡು ಮಾತಿನ ಚಕಮಕಿ ನಡೆಯಿತು. ಆದರೆ, ಸಾಕಷ್ಟು ಪ್ರಯತ್ನಗಳ ನಂತರ ಪೊಲೀಸರು ಪರಿಸ್ಥಿಯನ್ನು ಹತೋಟಿಗೆ ತಂದರು.
Advertisement
#WATCH | Congress MP and senior leader Digvijaya Singh entered into a scuffle with Police personnel and held one of them by their collar earlier today in Bhopal, Madhya Pradesh. pic.twitter.com/IgLVvPvyOx
— ANI MP/CG/Rajasthan (@ANI_MP_CG_RJ) July 29, 2022
Advertisement
ಈ ಕುರಿತ ವೀಡಿಯೋದಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಪಂಚಾಯತ್ ಕಚೇರಿಗೆ ಪ್ರವೇಶಿಸದಂತೆ ತಡೆಯಲು ಪೊಲೀಸರು ಪ್ರಯತ್ನಿಸುತ್ತಿರುವುದನ್ನು ಕಾಣಬಹುದಾಗಿದೆ. ಜೊತೆಗೆ ಒಬ್ಬ ಪೊಲೀಸ್ ಅಧಿಕಾರಿಯ ಕೊರಳಪಟ್ಟಿ ಹಿಡಿದು ದಿಗ್ವಿಜಯ್ ಸಿಂಗ್ ಹಿಂಸಾತ್ಮಕವಾಗಿ ತಳ್ಳಿರುವುದನ್ನು ಕಾಣಬಹುದು. ಇದನ್ನೂ ಓದಿ: ಪ್ರವೀಣ್ ಹತ್ಯೆ ಖಂಡಿಸಿ ರಾಜೀನಾಮೆ ಪರ್ವ – ಇದು ಹೇಡಿಗಳ ಲಕ್ಷಣ ಎಂದ ಈಶ್ವರಪ್ಪ
ಬಿಜೆಪಿ ಮುಖಂಡ ಹಾಗೂ ರಾಜ್ಯ ಸಚಿವ ಭೂಪೇಂದ್ರ ಸಿಂಗ್ ಜಿಲ್ಲಾ ಪಂಚಾಯಿತಿ ಕಚೇರಿಗೆ ಆಗಮಿಸುತ್ತಿದ್ದಂತೆ ಪ್ರತಿಭಟನಾ ನಿರತ ಕಾಂಗ್ರೆಸ್ ಕಾರ್ಯಕರ್ತರು ಅವರ ವಾಹನವನ್ನು ಹಾದುಹೋಗಲು ಬಿಡಲಿಲ್ಲ. ದಿಗ್ವಿಜಯ್ ಸಿಂಗ್ ಮತ್ತು ಆರಿಫ್ ಮಸೂದ್ ಸಿಂಗ್ ಅವರ ಕಾರಿನ ಮುಂದೆ ನಿಂತು, ಪಂಚಾಯತ್ ಕಚೇರಿಗೆ ಸಚಿವರ ಪ್ರವೇಶವನ್ನು ತಡೆದರು. ಕೂಡಲೇ ಪರಿಸ್ಥಿತಿ ನಿಯಂತ್ರಿಸಲು ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಯಿತು. ಈ ವೇಳೆ ನೂಕುನುಗ್ಗಲು ಹೆಚ್ಚಾಗುತ್ತಿದ್ದಂತೆ ದಿಗ್ವಿಜಯ್ ಸಿಂಗ್ ಪೊಲೀಸ್ ಅಧಿಕಾರಿಯ ಕೊರಳಪಟ್ಟಿ ಹಿಡಿದು ತಳ್ಳಿರುವುದು ಕಂಡುಬಂದಿದೆ.
ಭೋಪಾಲ್ ಸೇರಿದಂತೆ ಮಧ್ಯಪ್ರದೇಶದ ಹಲವು ಜಿಲ್ಲೆಗಳಲ್ಲಿ ಜಿಲ್ಲಾ ಪಂಚಾಯಿತಿಗಳ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯುತ್ತಿದೆ. ಈ ಸಮೀಕ್ಷೆಗಳು ಬಿಜೆಪಿ ಮತ್ತು ಕಾಂಗ್ರೆಸ್ ಎರಡಕ್ಕೂ ವಿಶ್ವಾಸಾರ್ಹತೆಯ ಪ್ರಶ್ನೆಯಾಗಿದೆ.