ಉಡುಪಿ: ಡಿಫ್ರೆಂಟ್ ಕಂಟೆಂಟ್ ಚಿತ್ರ ದೇಶಕ್ಕೆ ಇಷ್ಟ ಆಗಿದೆ. ಸಿಕ್ಕಿರುವಂತ ಪ್ರಶಸ್ತಿಗಳಿಗೆ ಈಗ ಕಿರೀಟ ಸಿಕ್ಕಿದೆ. ವರಮಹಾಲಕ್ಷ್ಮಿ ಹಬ್ಬದ ದಿನ ಶುಭಸುದ್ದಿ ಬಂದಿದೆ ಎಂದು ಉಡುಪಿಯಲ್ಲಿ ಕಾಂತಾರ ನಟಿ ಮಾನಸಿ ಸುಧೀರ್ ಹೇಳಿಕೆ ನೀಡಿದ್ದಾರೆ.
ಕಾಂತಾರ (Kantara) ಚಿತ್ರಕ್ಕೆ ಎರಡು ರಾಷ್ಟ್ರ ಪ್ರಶಸ್ತಿ (70th National Award) ಬಂದಿರುವ ಸಂತೋಷವನ್ನು ಚಿತ್ರದ ನಾಯಕ `ಶಿವ’ನ ತಾಯಿ `ಕಮಲ’ ಪಾತ್ರಧಾರಿ ಮಾನಸಿ ಸುಧೀರ್ (Manasi Sudhir) ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದಾರೆ. ರಿಷಬ್ ಶೆಟ್ಟಿ ಈ ಅವಾರ್ಡನ್ನು ಕನ್ನಡದ ಜನತೆ ಮತ್ತು ದೈವನರ್ತಕರಿಗೆ ಸಲ್ಲಿಸಿದ್ದಾರೆ. ಇಂದು ಬಹಳ ಖುಷಿ ಮತ್ತು ಹೆಮ್ಮೆಪಡುವ ದಿನ ಎಂದರು. ಇದನ್ನೂ ಓದಿ: ಪ್ರಶಸ್ತಿಯನ್ನು ಪುನೀತ್ ರಾಜ್‌ಕುಮಾರ್, ದೈವಕ್ಕೆ, ದೈವ ನರ್ತಕರಿಗೆ ಅರ್ಪಣೆ ಮಾಡುತ್ತೇನೆ- ರಿಷಬ್ ಶೆಟ್ಟಿ
Advertisement
Advertisement
ಶೂಟಿಂಗ್ ದಿನಗಳನ್ನು ಮೆಲುಕುಹಾಕುತ್ತಾ ಮಾತನಾಡಿದ ಅವರು, 40 ದಿನ ಚಿತ್ರದ ಸೆಟ್ಟಿನಲ್ಲಿದ್ದೆ. ಆ ಎಲ್ಲಾ ಕ್ಷಣಗಳು ಕಣ್ಣ ಮುಂದೆ ಬಂತು. ರಿಷಬ್ ವಿಭಿನ್ನ ನಿರ್ದೇಶನ, ನಟನೆ ಮತ್ತು ಪ್ಯಾಟರ್ನ್ ಚಿತ್ರಗಳನ್ನು ಕೊಡುತ್ತಾರೆ. ರಿಷಬ್ ಶೆಟ್ಟಿ ಸಿನಿಮಾಗಳು ಮನೋರಂಜನೆಗೆ ಮೋಸಮಾಡಲ್ಲ. ಚಿತ್ರದ ಕ್ಲೈಮ್ಯಾಕ್ಸ್ ಕಣ್ಣಾರೆ ನೋಡಿದ್ದೇನೆ. ಅದೊಂದು ವಿಶೇಷ ಆಕ್ಷನ್, ವಿಶೇಷ ಅನುಭವ. ಕಾಂತಾರದ ಕೊರಿಯೋಗ್ರಫಿ, ಫೈಟ್ ನಿಜಕ್ಕೂ ಅದ್ಭುತ. ಜನರಿಂದ ಸಿಕ್ಕ ಪ್ರತಿಕ್ರಿಯೆ ಮತ್ತು ಪ್ರೀತಿ ಬಹಳ ದೊಡ್ಡದು. ದೇಶ ವಿದೇಶದಿಂದಲೂ ಈ ಚಿತ್ರಕ್ಕೆ ಮೆಚ್ಚುಗೆ ಬಂದಿದೆ. ಚಿತ್ರ ಒಂದಲ್ಲ ಒಂದು ರೀತಿಯಲ್ಲಿ ಎಲ್ಲರಿಗೂ ಕನೆಕ್ಟ್ ಆಗುತ್ತದೆ ಎಂದರು. ಇದನ್ನೂ ಓದಿ: ಯಶ್, ರಿಷಬ್ ಶೆಟ್ಟಿ ಒಟ್ಟಿಗೆ ನಟಿಸುತ್ತಾರಾ? ನಿರ್ಮಾಪಕ ಹೇಳಿದ್ದೇನು?
Advertisement
Advertisement
ಕಾಂತಾರ ಫ್ರೀಕ್ವೆಲ್ ಕುತೂಹಲದ ಬಗ್ಗೆ ನಾನೇನು ಹೇಳುವುದಿಲ್ಲ. ಕುತೂಹಲ ಯಾವತ್ತೂ ಹಾಗೆ ಇರಬೇಕು. ಸಿನಿಮಾದ ಮಾರ್ಕೆಟಿಂಗ್ ಬಹಳ ಒಳ್ಳೆಯದು. ಕಾಂತಾರ ಪ್ರೀಕ್ವೆಲ್ ಬಗ್ಗೆ ಯಾವುದೇ ಮಾತುಕತೆ ಆಗಲಿಲ್ಲ. ನಾನು ಈವರೆಗೆ ಚಿತ್ರೀಕರಣದಲ್ಲಿ ಸದ್ಯ ಭಾಗಿ ಆಗಿಲ್ಲ. ಮೊದಲ ಅಧ್ಯಾಯದಲ್ಲಿ ನನ್ನ ಜೀವನ ಆಗಿದೆ. ಬಿಫೋರ್ ಕಾಂತರಾ ಆಫ್ಟರ್ ಕಾಂತಾರ ಎಂಬಂತಾಗಿದೆ. ಕನ್ನಡ ಚಿತ್ರರಂಗದಲ್ಲಿ ನನಗೆ ಬಹಳಷ್ಟು ಅವಕಾಶಗಳು ಬಂದಿದೆ ಎಂದು ಸಂತಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಕನ್ನಡ ಚಿತ್ರರಂಗ ರಾಷ್ಟ್ರಮಟ್ಟದಲ್ಲಿ ಮಿಂಚಿದ ಕ್ಷಣ- ನ್ಯಾಷನಲ್ ಅವಾರ್ಡ್ ಬಂದಿದ್ದಕ್ಕೆ ಯಶ್ ಸಂತಸ