ದರೋಡೆಕೋರರ ಕಾಟ ಆಯ್ತು; ಈಗ ಬೆಂ-ಮೈ ಎಕ್ಸ್‌ಪ್ರೆಸ್‌ವೇಯಲ್ಲಿ ಡೀಸೆಲ್ ಕಳ್ಳರ ಹಾವಳಿ

Public TV
1 Min Read
Bengaluru Mysuru

ರಾಮನಗರ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೈವೇಯಲ್ಲಿ (Bengaluru Mysuru Expressway) ದರೋಡೆಕೋರರ ಕಾಟದಿಂದ ಕಂಗಾಲಾಗಿದ್ದ ವಾಹನ ಸವಾರರು ಇದೀಗ ಡೀಸೆಲ್ ಕಳ್ಳರ (Diesel Theft)ಕಾಟಕ್ಕೆ ಹೈರಾಣಾಗಿದ್ದಾರೆ. ಟೋಲ್ ಬಳಿ ವಾಹನ ನಿಲ್ಲಿಸಿ ಮಲಗಿದರೆ ಬೆಳಗಾಗುವಷ್ಟರಲ್ಲಿ ಡೀಸೆಲ್ ಕಳ್ಳತನವಾಗುತ್ತಿರುವುದು ವಾಹನ ಸವಾರರ ಆತಂಕಕ್ಕೆ ಕಾರಣವಾಗಿದೆ.

ಬಿಡದಿಯ ಶೇಷಗಿರಿಹಳ್ಳಿ ಟೋಲ್ ಬಳಿ ರಾತ್ರಿ ವಾಹನ ಪಾರ್ಕ್ ಮಾಡಿ ಚಾಲಕ ನಿದ್ದೆಗೆ ಜಾರಿದರೆ ಇತ್ತ ಖದೀಮರು ಡೀಸೆಲ್ ಟ್ಯಾಂಕ್‌ನ ಕ್ಯಾಪ್ ಮುರಿದು ಡೀಸೆಲ್ ಕಳ್ಳತನ ಮಾಡುತ್ತಿದ್ದಾರೆ. ಡೀಸೆಲ್ ಕಳ್ಳರ ಕಾಟಕ್ಕೆ ಗೂಡ್ಸ್ ವಾಹನ ಚಾಲಕರು ಕಂಗಾಲಾಗಿದ್ದಾರೆ. ಇದನ್ನೂ ಓದಿ: ಮಾರ್ಗ ಮಧ್ಯೆ ಕೈಕೊಟ್ಟ ಅಂಬುಲೆನ್ಸ್ – ಆನೆ ದಾಳಿಯಿಂದ ಗಾಯಗೊಂಡಿದ್ದ ಶಾರ್ಪ್ ಶೂಟರ್ ಅರಣ್ಯ ಸಿಬ್ಬಂದಿ ಸಾವು

ಈ ಬಗ್ಗೆ ಹೈವೇ ಪೆಟ್ರೋಲಿಂಗ್ ಪೊಲೀಸರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನ ಇಲ್ಲ ಎಂದು ವಾಹನ ಸವಾರರು ಕಿಡಿಕಾರಿದ್ದಾರೆ. ದುಬಾರಿ ಟೋಲ್ ಕಟ್ಟಿದರೂ ಎಕ್ಸ್‌ಪ್ರೆಸ್ ಹೈವೇಯಲ್ಲಿ ಸೇಫ್ಟಿ ಇಲ್ಲ, ಒಂದೆಡೆ ವಾಹನ ಅಡ್ಡಗಟ್ಟಿ ದರೋಡೆ ಮಾಡುವ ಪ್ರಕರಣಗಳು ನಡೆಯುತ್ತಿದ್ದರೆ ಮತ್ತೊಂದೆಡೆ ವಾಹನಗಳ ಡೀಸೆಲ್ ಕಳವು ಎಕ್ಸ್‌ಪ್ರೆಸ್ ಹೈವೇ ಸವಾರರಿಗೆ ತಲೆನೋವಾಗಿ ಪರಿಣಮಿಸಿದೆ. ಇನ್ನಾದರೂ ಈ ಬಗ್ಗೆ ಪೊಲೀಸ್ ಇಲಾಖೆ ಎಚ್ಚೆತ್ತುಕೊಳ್ಳುವಂತೆ ವಾಹನ ಸವಾರರು ಮನವಿ ಮಾಡಿದ್ದಾರೆ. ಇದನ್ನೂ ಓದಿ: ರಾಖಿ ಕಟ್ಟಿಕೊಂಡಿದ್ದ ಮಕ್ಕಳಿಗೆ ಕ್ಷಮಾಪಣೆ ಪತ್ರ ಕೇಳಿದ ಮುಖ್ಯಶಿಕ್ಷಕಿ

Web Stories

Share This Article