ಡೀಸೆಲ್‌ ಬೆಲೆ ಹೆಚ್ಚಳ – ಪ್ರತಿ ವಿದ್ಯಾರ್ಥಿಗೆ 500-600 ರೂ. ಹೆಚ್ಚುವರಿ ಹೊರೆ

Public TV
1 Min Read
Private School Vehicle

– ಶುಲ್ಕ ಏರಿಸಲು ಖಾಸಗಿ ಶಾಲಾ ವಾಹನ ಸಂಘದಿಂದ ನಿರ್ಧಾರ

ಬೆಂಗಳೂರು: ಡೀಸೆಲ್‌ (Diesel) ಬೆಲೆ ಹೆಚ್ಚಳದ (Price Hike) ಹೊರೆಯನ್ನು ಪೋಷಕರ ಹೆಗಲಿಗೆ ಹಾಕಲು ಖಾಸಗಿ ಶಾಲಾ ವಾಹನ ಸಂಘ (Private School Vehicle Association) ನಿರ್ಧಾರ ಕೈಗೊಂಡಿದೆ.

ಪ್ರತಿ ಲೀಟರ್‌ ಡೀಸೆಲ್‌ ದರ 2 ರೂ. ಏರಿಕೆಯಾದ ಹಿನ್ನೆಲೆಯಲ್ಲಿ ಶಾಲಾ ವಾಹನದ ಶುಲ್ಕವನ್ನು ಹೆಚ್ಚಿಸಲು ಸಂಘ ನಿರ್ಧಾರ ಕೈಗೊಂಡಿದೆ. ಇದನ್ನೂ ಓದಿ: ಸೌದೆ ತಗೊಂಡ್ರೇ ಮಾತ್ರ ಹೆಣ ಸುಡಲು ಸ್ಲಾಟ್ – ಬೆಂಗಳೂರಿನ ಸ್ಮಶಾನದಲ್ಲೂ ಬ್ರೋಕರ್‌ಗಳ ಹಾವಳಿ!

ಸದ್ಯ ತಿಂಗಳಿಗೆ 2,000 ರೂ – 3,000 ರೂ. ಶುಲ್ಕವಿದೆ. ದರ ಏರಿಕೆಯಿಂದ 2,500 ರೂ- 3,500 ರೂ.ಗೆ ಏರಿಕೆಯಾಗಲಿದೆ. ಇದೇ ಶೈಕ್ಷಣಿಕ ವರ್ಷದಿಂದ ನೂತನ ದರ ಜಾರಿಯಾಗಲಿದೆ.

ಸದ್ಯ ಬೆಂಗಳೂರಲ್ಲೇ 7 ಸಾವಿರಕ್ಕೂ ಅಧಿಕ ಶಾಲಾ ವಾಹನಗಳು ಇವೆ. ಸಾವಿರಾರು ವಿದ್ಯಾರ್ಥಿಗಳು ಖಾಸಗಿ ವಾಹನದಲ್ಲೇ ನಿತ್ಯ ಶಾಲೆಗೆ ತೆರಳುತ್ತಿದ್ದಾರೆ. ಇದನ್ನೂ ಓದಿ: ಡೀಸೆಲ್ ಬೆಲೆ ಏರಿಕೆ – ಖಾಸಗಿ ಬಸ್ ಪ್ರಯಾಣ ದರ ದುಬಾರಿ!

ಮಾರ್ಚ್‌ 31 ವರೆಗೆ ಡೀಸೆಲ್‌ ಮಾರಾಟ ತೆರಿಗೆ ದರ 18.44% ಇತ್ತು. ರಾಜ್ಯ ಸರ್ಕಾರ ಏಪ್ರಿಲ್‌ 1 ರಿಂದ ಮಾರಾಟ ತೆರಿಗೆ ದರವನ್ನು 21.17% ಕ್ಕೆ ಹೆಚ್ಚಳ ಮಾಡಿತ್ತು. ಈ ಮೂಲಕ ಪ್ರತಿ ಲೀಟರ್‌ ಡೀಸೆಲ್‌ ದರವು 2 ರೂಪಾಯಿ ಏರಿಕೆಯಾಗಿದೆ.

Share This Article