ಲಕ್ನೋ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಪ್ರಚಾರದ ವೇಳೆ ವಿರೋಧ ಪಕ್ಷಗಳ ವಿರುದ್ಧ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಕಿಡಿಕಾರಿದ್ದಾರೆ.
ಸುಲ್ತಾನಪುರದಲ್ಲಿ ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದ ಜೆಪಿ ನಡ್ಡಾ, ಸಮಾಜವಾದಿ ಪಕ್ಷದವರು ರಾಮಭಕ್ತರ ಮೇಲೆ ಗುಂಡು ಹಾರಿಸಲಿಲ್ಲವೇ? ರಾಮ ಜನ್ಮಭೂಮಿ ವಿವಾದವನ್ನು ಕಾಂಗ್ರೆಸ್ ಪಕ್ಷದವರು ಮುಂದೂಡಿರಲಿಲ್ಲವೇ? ಬಿಜೆಪಿಗೆ ಲಾಭವಾಗುತ್ತೆ ಎಂಬ ಕಾರಣಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ಆಯೋಧ್ಯೆ ರಾಮಮಂದಿರ ನಿರ್ಧಾರವನ್ನು ತಡೆ ಹಿಡಿಯಲು ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಹೇಳುತ್ತಿರಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಮುಲಾಯಂ ಸಿಂಗ್ ಯಾದವ್ ಮನಃಪೂರ್ವಕವಾಗಿ ಸಮಾಜವಾದಿ ಪಕ್ಷದೊಂದಿಗಿಲ್ಲ: ಬಿಜೆಪಿ
ತ್ರಿವಳಿ ತಲಾಕ್ ನಿಷೇಧಿಸಲು ಸುಪ್ರೀಂ ಕೋರ್ಟ್ ಆದೇಶಿಸಿತು. ಅದನ್ನು ತೆಗೆಯುವಷ್ಟು ತಾಕತ್ತು ಯಾವ ರಾಜಕೀಯ ಪಕ್ಷಕ್ಕೂ ಇರಲಿಲ್ಲ. ಇದನ್ನು ಹೋಗಲಾಡಿಸಲು ಮತ್ತು ಮುಸ್ಲಿಂ ಸಹೋದರಿಯರಿಗೆ ಸ್ವಾತಂತ್ರ್ಯ ನೀಡಲು ನರೇಂದ್ರ ಮೋದಿ ಅವರು ಸಂಸತ್ತಿನಲ್ಲಿ ಸುಪ್ರೀಂ ಆದೇಶವನ್ನು ತಂದರು ಎಂದು ತಿಳಿಸಿದ್ದಾರೆ.
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯು ಫೆ.10 ರಿಂದ ಆರಂಭವಾಗಿದ್ದು, ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಮಾ.10 ರಂದು ಮತ ಎಣಿಕೆ ನಡೆಯಲಿದೆ. ಇದನ್ನೂ ಓದಿ: 2023ರ ಹೊತ್ತಿಗೆ ರಾಮಮಂದಿರ ಉದ್ಘಾಟನೆಗೆ ಸಿದ್ಧ: ಯೋಗಿ ಆದಿತ್ಯನಾಥ್