– ಬಿಜೆಪಿ, ಆರ್‌ಎಸ್‌ಎಸ್ ವಿರುದ್ಧ ಹೋರಾಟ ಮಾಡಬೇಕು
– ಅಂಬೇಡ್ಕರ್, ಬಾಪೂಜಿ ಆರ್‌ಎಸ್‌ಎಸ್ ವಿರೋಧಿಸುತ್ತಿದ್ದರು
ಬೆಳಗಾವಿ: ಬಿಜೆಪಿ (BJP) ಕಾಲದಲ್ಲಿ ಯಾವುದೇ ಅತ್ಯಾಚಾರ ಆಗಿಲ್ವಾ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಪ್ರಶ್ನಿಸಿದ್ದಾರೆ.
Advertisement
ಬೆಂಗಳೂರಿನಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಅವರ ಕಾಲದಲ್ಲಿ ಅತ್ಯಾಚಾರ ಆಗಿಲ್ವಾ? ಈ ರೀತಿ ಆಗಬಾರದು. ಮಹಿಳೆಯರಿಗೆ ರಕ್ಷಣೆ ಸಿಗಬೇಕು. ಸಮಾಜದಲ್ಲಿ ಸಮಾಜಘಾತುಕ ಶಕ್ತಿಗಳು ಇಂಥ ಕೆಲಸ ಮಾಡುತ್ತವೆ. ಇದರ ಬಗ್ಗೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದರು. ಇದನ್ನೂ ಓದಿ: ಭೂ ಕಬಳಿಸುತ್ತಾ ಬರುತ್ತಿದೆ ಸಮುದ್ರ; ಕಡಲಿನ ಮುಂದೆ ತಾಪಃಹಾರ ಮಂತ್ರ ಪಠಣಕ್ಕೆ ವೇದಿಕೆ ಸಜ್ಜು
Advertisement
Advertisement
ಇನ್ನು ಬೆಳಗಾವಿ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿ ಮತ್ತು ಆರ್‌ಎಸ್‌ಎಸ್ (RSS) ಸಿದ್ಧಾಂತದ ವಿರುದ್ಧ ಹೋರಾಟ ಮಾಡುವ ಕರ್ತವ್ಯ ಪ್ರತಿಯೊಂದು ಕಾಂಗ್ರೆಸ್ ಕಾರ್ಯಕರ್ತರ ಮೇಲಿದೆ. ಆರ್‌ಎಸ್‌ಎಸ್ ಸಿದ್ಧಾಂತವೇ ಬಿಜೆಪಿ ಸಿದ್ಧಾಂತ. ಆರ್‌ಎಸ್‌ಎಸ್ ಕೈಗೊಂಬೆಯಾಗಿ ಬಿಜೆಪಿ ಕೆಲಸ ಮಾಡುತ್ತಿದೆ. ಒಡಕು ಮತ್ತು ತಾರತಮ್ಯ ಮಾಡುವುದುನ್ನು ಬಿಜೆಪಿ ವ್ಯವಸ್ಥಿತವಾಗಿ ಮಾಡುತ್ತಿದೆ. ಆರ್‌ಎಸ್‌ಎಸ್ ಅನ್ನು ಅಂಬೇಡ್ಕರ್, ಬಾಪೂಜಿ, ವಿರೋಧ ಮಾಡುತ್ತಿದ್ದರು. ನಮ್ಮ ದೇಶ ಬಹುತ್ವದ ದೇಶ. ಅನೇಕ ಜಾತಿ, ಧರ್ಮ, ಸಂಸ್ಕೃತಿಗಳಿವೆ. ಎಲ್ಲರನ್ನೂ ಮನುಷ್ಯರಾಗಿ ಕಾಣುವುದು ಅವಶ್ಯ. ಬಿಜೆಪಿ ಅಂಬೇಡ್ಕರ್, ಬಾಪು, ಸಂವಿಧಾನವನ್ನು ವಿರೋಧ ಮಾಡುತ್ತದೆ. ಹೀಗಾಗಿ ಈ ಸಮಾವೇಶ ಆಯೋಜನೆ ಮಾಡಲಾಗಿದೆ. ಸಂವಿಧಾನ, ಬಾಪು, ಅಂಬೇಡ್ಕರ್ ತತ್ವಗಳನ್ನು ಮುಂದಿನ ಪೀಳಿಗೆಗೆ ಉಳಿಸಿಕೊಂಡು ಹೋಗಲು ಈ ಸಮಾವೇಶ ಎಂದು ತಿಳಿಸಿದರು. ಇದನ್ನೂ ಓದಿ: ಹಾವೇರಿ| ಟ್ರ‍್ಯಾಕ್ಟರ್‌ಗೆ ಲಾರಿ ಡಿಕ್ಕಿ – ರಸ್ತೆಗೆ ಬಿದ್ದ ಕ್ರೂಡ್ ಆಯಿಲ್ ತುಂಬಿಕೊಳ್ಳಲು ಮುಗಿಬಿದ್ದ ಜನ
Advertisement
ಬಿಜೆಪಿ ಸಂವಿಧಾನ, ಅಂಬೇಡ್ಕರ್ ಬಗ್ಗೆ ಬಹಳಷ್ಟು ಪ್ರೀತಿ ತೋರುತ್ತಿದ್ದಾರೆ. ಆದರೆ ಬಿಜೆಪಿ ಯಾವತ್ತೂ ಅಂಬೇಡ್ಕರ್ ಮತ್ತು ವಿಚಾರಗಳಿಗೆ ವಿರುದ್ಧ. ಬಾಪು ಮತ್ತು ಅಂಬೇಡ್ಕರ್ ವಿಚಾರ ರಕ್ಷಣೆ ಮಾಡಬೇಕು, ಸಂವಿಧಾನ ರಕ್ಷಣೆ ಮಾಡಬೇಕು. ಸಂವಿಧಾನ ಜಾರಿಗೆ ಬಂದಾಗ ಬಿಜೆಪಿ ವಿರೋಧ ಮಾಡಿದೆ. ಬಾಪು, ಅಂಬೇಡ್ಕರ್ ಪ್ರತಿಕೃತಿ ದಹನ ಮಾಡಿದವರು ಬಿಜೆಪಿಯವರು. ಸಂವಿಧಾನ ಜಾರಿ ಮಾಡೋದೆ ನಮ್ಮ ಸಿದ್ಧಾಂತ. ಸಂವಿಧಾನವೇ ನಮ್ಮ ಸಿದ್ಧಾಂತ ಎಂದರು. ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಬಂಧನ
ನಮ್ಮ ಅಧಿಕಾರ ಅವಧಿಯಲ್ಲಿ ಬಡವರಿಗೆ, ಎಲ್ಲಾ ಧರ್ಮ, ಜಾತಿಯವರಿಗೆ ಬಲ ನೀಡುವ ಕಾರ್ಯಕ್ರಮ ನೀಡಿದ್ದೇವೆ. ಈಗ 56,000 ಕೋಟಿ ರೂಪಾಯಿಗಳಲ್ಲಿ ಐದು ಗ್ಯಾರಂಟಿ ನೀಡಿದ್ದೇವೆ. ಇದರ ಜೊತೆಗೆ ಅಭಿವೃದ್ಧಿ ಕಾರ್ಯ ಮಾಡುತ್ತಿದ್ದೇವೆ. ಕಾಂಗ್ರೆಸ್ ಮಾತ್ರ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುತ್ತದೆ. ನಾವು ಯಾರನ್ನೂ ದ್ವೇಷ ಮಾಡಿಲ್ಲ. ಬಿಜೆಪಿ ಮತ್ತು ಆರ್‌ಎಸ್‌ಎಸ್ ಸಿದ್ಧಾಂತ ಜನರ ಮನಸ್ಥಿತಿ ಛಿಧ್ರಛಿದ್ರ ಮಾಡುತ್ತದೆ. ಜನರನ್ನು ಹೊಡೆದಾಡುವಂತೆ ಮಾಡುತ್ತದೆ. ಪ್ರಜಾಪ್ರಭುತ್ವದಲ್ಲಿ ಬಿಜೆಪಿಗೆ ನಂಬಿಕೆ ಇಲ್ಲ. ಇಂತಹ ಬಿಜೆಪಿಯನ್ನು ನಾವು ಸೋಲಿಸಬೇಕು. ನಮ್ಮ ಸಿದ್ಧಾಂತ ಗೆದ್ದರೆ ಸಮಾಜದಲ್ಲಿ ಸಮಾನತೆ ಉಳಿಯುತ್ತದೆ. ಆಗ ಮಾತ್ರ ಸಮ ಸಮಾಜ ಕಟ್ಟಬಹುದು ಎಂದು ನುಡಿದರು. ಇದನ್ನೂ ಓದಿ: ವಾಣಿ ವಿಲಾಸ ಸಾಗರ ಜಲಾಶಯ ಭರ್ತಿ – ಯದುವೀರ್ ಒಡೆಯರ್ ಬಾಗಿನ ಅರ್ಪಣೆ