ಬೆಂಗಳೂರು: ಶಿಕ್ಷಣ ಪಡೆದು ಡಾಕ್ಟರೇಟ್ ಪದವಿ ಪಡೆಯುವುದು ನೋಡಿದ್ದೇವೆ, ಆದರೆ ಹಣ ಕೊಟ್ಟರೆ ರೌಡಿ ಶೀಟರ್ ಗೂ ಡಾಕ್ಟರ್ ನೀಡುವ ದಂಧೆ ನಗರದಲ್ಲಿ ನಡೆಯುತ್ತಿದೆ. ಇದಕ್ಕೆ ಉದಾಹರಣೆ ಎಂಬಂತೆ ರೌಡಿಶೀಟರ್ ಹೊಂದಿರುವ ಯಶಸ್ವಿನಿ ಗೌಡ ಅವರ ಸಾಮಾಜಿಕ ಸೇವೆ ಮೆಚ್ಚಿ ವಿಶ್ವವಿದ್ಯಾಲಯವೊಂದು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಅಮೆರಿಕ ಮೂಲದ `ಇಂಟರ್‍ನ್ಯಾಷನಲ್ ಗ್ಲೋಬಲ್ ಪೀಸ್ ಯೂನಿವರ್ಸಿಟಿ’ ಮೂಲಕ ಯಶಸ್ವಿನಿ ಗೌಡ ಡಾಕ್ಟರೇಟ್ ಪಡೆದಿದ್ದಾರೆ. ಯಶಸ್ವಿನಿ ಗೌಡ ಅವರ ಸಾಮಾಜಿಕ ಸೇವೆ ಮೆಚ್ಚಿ ಡಾಕ್ಟರೇಟ್ ನೀಡಿದ್ದಾಗಿ ಯೂನಿವರ್ಸಿಟಿ ತಿಳಿಸಿದೆ. ಆದರೆ ಇಂಟರ್‍ನ್ಯಾಷನಲ್ ಗ್ಲೋಬಲ್ ಪೀಸ್ ಯೂನಿವರ್ಸಿಟಿಗೆ ದುಡ್ಡು ಕೊಟ್ಟು ಡಾಕ್ಟರೇಟ್ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.
Advertisement
Advertisement
ಬೆಂಗಳೂರಲ್ಲಿ ಡಾಕ್ಟರೇಟ್ ಕೊಡಿಸಲು ಗ್ಯಾಂಗ್ ಒಂದು ಕಾರ್ಯನಿರ್ವಹಿಸುತ್ತಿದೆ ಎನ್ನಲಾಗಿದ್ದು, ಒಂದು ಡಾಕ್ಟರೇಟ್ ಪದವಿ ನೀಡಲು 75 ಸಾವಿರ ರೂ. ನಿಂದ 1.50 ಲಕ್ಷದವರೆಗೂ ವಸೂಲಿ ಮಾಡುತ್ತಾರೆ. ಹೆಚ್ಚು ಸುದ್ದಿಯಾಗುವ ಜನರನ್ನೇ ಟಾರ್ಗೆಟ್ ಮಾಡುವ ಈ ‘ಡಾಕ್ಟರೇಟ್ ಗ್ಯಾಂಗ್’, ಅರ್ಜಿ ಕೊಟ್ಟು ನಿಮ್ಮ ಅವರ ಮಾಹಿತಿ ಪಡೆದುಕೊಂಡು ಡಾಕ್ಟರೇಟ್ ಕೊಡಿಸುವ ಕಾರ್ಯದಲ್ಲಿ ತೊಡಗಿಕೊಂಡಿದೆಯಂತೆ.
Advertisement
ಭಾರತದಲ್ಲಿ ಈ ಹಿಂದೆ ಇಂತಹ ಅಕ್ರಮದಲ್ಲಿ ತೊಡಗಿದ್ದ ಕೆಲ ಯೂನಿವರ್ಸಿಟಿಗಳಿಗೆ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಕಡಿವಾಣ ಹಾಕಿತ್ತು. ಆದರೆ ವಿದೇಶಿ ವಿಶ್ವವಿದ್ಯಾಲಯಗಳಿಂದ ಸದ್ಯ ಡಾಕ್ಟರೇಟ್ ಪಡೆದುಕೊಳ್ಳುತ್ತಿರುವ ದಂಧೆಗೆ ಸರ್ಕಾರ ಕಡಿವಾಣ ಹಾಕುತ್ತಾ ಎಂಬ ಪ್ರಶ್ನೆ ಉದ್ಭವವಾಗಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv