ಚಿಕ್ಕಬಳ್ಳಾಪುರ: ಮನೆಯ ಹೊರಗಡೆ ಮಲಗಿದ್ದ ಗಂಡನ ಕುತ್ತಿಗೆಯಲ್ಲಿ ಚಾಕು ಇರಿದು ಕೊಲೆ ಮಾಡಲಾಗಿದ್ದು ಹೆಂಡತಿಯೇ ಗಂಡನನ್ನ ಕೊಲೆ ಮಾಡಿದಾಳ ಎಂಬ ಅನುಮಾನ ಮೂಡಿರುವ ಘಟನೆ ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ದೊಡ್ಡಬಳ್ಳಾಪುರ (Doddaballapura) ವಾಸುದೇವನಹಳ್ಳಿಯಲ್ಲಿ ನಡೆದಿದೆ.
ಗ್ರಾಮದ 70 ವರ್ಷದ ಈರಣ್ಣ ಎಂಬಾತನ ಕುತ್ತಿಗೆಗೆ ಚಾಕು ಇರಿದು ಕೊಲೆ ಮಾಡಲಾಗಿದೆ. ಮಲಗಿದ್ದಲ್ಲಿಯೇ ಈರಣ್ಣ ಶವವಾಗಿದ್ದಾನೆ. ಇದನ್ನೂ ಓದಿ: ರಾಷ್ಟ್ರೀಯ ಮತದಾರರ ದಿನದ ಪ್ರತಿಜ್ಞಾ ವಿಧಿ ಬೋಧಿಸಿದ ಡಾ.ಶಾಲಿನಿ ರಜನೀಶ್
Advertisement
Advertisement
ಅಂದ ಹಾಗೆ ಕಳೆದ ರಾತ್ರಿ ಈರಣ್ಣ ಹಾಗೂ ಪಾರ್ವತಮ್ಮ ನಡುವೆ ಜಗಳ ನಡೆದಿತ್ತಂತೆ. ನಂತರ ಮನೆಯ ಹೊರಭಾಗದಲ್ಲಿ ಎಂದಿನಂತೆ ಮಲಗಿದ್ದವ ಬೆಳಿಗ್ಗೆ ಎದ್ದು ನೋಡಿದ್ರೆ ಶವವಾಗಿ ಪತ್ತೆಯಾಗಿದ್ದಾನೆ. ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್ಪಿ ಸಿ.ಕೆ ಬಾಬಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರ ಕಾರ್ಖಾನೆಯಲ್ಲಿ ಭಾರೀ ಸ್ಫೋಟ – 5ಕ್ಕೂ ಹೆಚ್ಚು ಮಂದಿ ಸಾವಿನ ಶಂಕೆ
Advertisement
Advertisement
ಇನ್ನೂ ಪಾರ್ವತಮ್ಮನ ಗಂಡನನ್ನ ಕೊಲೆ ಮಾಡಿದಳಾ ಎಂಬುದರ ಬಗ್ಗೆಯೂ ಪೊಲೀಸರು ವಿಚಾರಣೆ ಸಹ ನಡೆಸಿದ್ದಾರೆ. ಇಲ್ಲ ಬೇರೆ ಯಾರಾದರೂ ಕೊಲೆ ಮಾಡಿದರಾ…? ಅನ್ನೋ ಆಯಾಮದಲ್ಲೂ ತನಿಖೆ ಮುಂದುವರೆಸಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇದನ್ನೂ ಓದಿ: `ಪಬ್ಲಿಕ್ ಟಿವಿ’ ಮುಖ್ಯಸ್ಥ ರಂಗನಾಥ್ ಪ್ರೇರಣೆ – ಇಡೀ ಗ್ರಾಮಕ್ಕೆ 24*7 ನೀರು ಸೌಲಭ್ಯ ಕಲ್ಪಿಸಿದ ಗ್ರಾಪಂ ಅಧ್ಯಕ್ಷ