ಬೆಂಗಳೂರು: ಇಲ್ಲಿನ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (KPCC) ಕಚೇರಿಯಲ್ಲಿಂದು ಮಾಜಿ ಪ್ರಧಾನಿ ಇಂದಿರಾ ಗಾಂಧಿ (Indira Gandhi) 39ನೇ ಪುಣ್ಯಸ್ಮರಣೆ ಆಚರಿಸಲಾಯಿತು. ಇಂದಿರಾಗಾಂಧಿ ಭಾವಚಿತ್ರಕ್ಕೆ ಕೈ ನಾಯಕರು ಪುಷ್ಪ ನಮನ ಸಲ್ಲಿಸಿ ಸ್ಮರಿಸಿದರು. ಆದ್ರೆ ವೇದಿಕೆಯಲ್ಲಿ ಸರ್ದಾರ್ ವಲ್ಲಭಬಾಯಿ ಪಟೇಲ್ (Sardar Vallabhbhai Patel) ಅವರ ಫೋಟೋವನ್ನೇ ಇಡದಿರುವುದು ಚರ್ಚೆಗೆ ಗ್ರಾಸವಾಗಿದೆ.
Advertisement
ಇದೇ ದಿನ ಉಕ್ಕಿನ ಮನುಷ್ಯ ಎಂದೇ ಖ್ಯಾತಿಯಾದ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಜನ್ಮದಿನವೂ ಆಗಿದ್ದು, ಸರ್ದಾರ್ ವಲ್ಲಭಭಾಯಿ ಪಟೇಲರ ಭಾವಚಿತ್ರ ಇಡುವುದನ್ನೇ ಮರೆತು ಎಡವಟ್ಟು ಮಾಡಿದೆ ಎಂಬ ಟೀಕೆಗಳು ಕೇಳಿಬರುತ್ತಿವೆ. ಕಾರ್ಯಕ್ರಮದ ವೇದಿಕೆಯ ಒಂದು ಭಾಗದಲ್ಲಿ ಇಂದಿರಾ ಗಾಂಧಿ ಅವರ ಭಾವಚಿತ್ರ ಮಾತ್ರ ಇಡಲಾಗಿತ್ತು. ಆದ್ರೆ ಸಿಎಂ, ಡಿಸಿಎಂ ಮಾತನಾಡುತ್ತಾ ವೇದಿಕೆಯಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರನ್ನ, ಅವರ ಸಾಧನೆಗಳನ್ನ ನೆನಪಿಸಿಕೊಂಡರು. ಇಂದು ಪಟೇಲರ ಭಾವಚಿತ್ರ ಇಡಬೇಕಿತ್ತು ಎಂದು ನೆನಪಿಸಿಕೊಂಡರು. ಇದನ್ನೂ ಓದಿ: 15ನೇ ವರ್ಷಕ್ಕೆ ಕಾಲಿಟ್ಟ ದರ್ಶನ್ ಪುತ್ರ: ವಿಭಿನ್ನವಾಗಿ ವಿಶ್ ಮಾಡಿದ ವಿಜಯಲಕ್ಷ್ಮಿ
Advertisement
Advertisement
ಕಾರ್ಯಕ್ರಮದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಮಾತನಾಡಿ, ಇಡೀ ದೇಶ, ಪ್ರಪಂಚ ಬಲಿಷ್ಠ ನಾಯಕಿಯನ್ನ ನೆನಪು ಮಾಡಿಕೊಳ್ಳೋ ಪವಿತ್ರ ದಿನ. ಸರ್ದಾರ್ ವಲ್ಲಭಭಾಯಿ ಪಟೇಲ್ ಜನ್ಮದಿನ ಆಚರಣೆ ಮಾಡೋ ದಿನ. ದೇಶ ಇಬ್ಬರು ಮಹಾನ್ ಶಕ್ತಿಗಳನ್ನ ನೆನಪು ಮಾಡಿಕೊಳ್ತಿದ್ದೇವೆ. ನಾನು ಯೂತ್ ಕಾಂಗ್ರೆಸ್‌ನಲ್ಲಿದ್ದಾಗ (Youth Congress), ದೆಹಲಿಗೆ ಯೂತ್ ಕಾಂಗ್ರೆಸ್ ಸಮಾವೇಶಕ್ಕೆ ಹೋಗ್ತಿದ್ದೆವು. ಬೆಂಗಳೂರು ಬಿಟ್ಟು ಹೋಗೋವಾಗ ಅರ್ಧಕ್ಕೆ ರೈಲು ನಿಂತುಹೋಯಿತು. ಆಗ ಇಂದಿರಾಗಾಂಧಿ ಅವರ ಹತ್ಯೆಯಾಗಿದೆ ಅಂತ, ದೊಡ್ಡ ಗಲಾಟೆ ಆಯ್ತು. ಆಗ ನನ್ನನ್ನೂ ಅರೆಸ್ಟ್ ಮಾಡಿ ಮಲ್ಲೇಶ್ವರಂ ಜೈಲಿನಲ್ಲಿ ಇರಿಸಿದ್ದರು ಎಂದು ಆ ದಿನಗಳನ್ನ ನೆನಪಿಸಿಕೊಂಡರು. ಇದನ್ನೂ ಓದಿ: IPL 2024: ನಿವೃತ್ತಿ ಬಗ್ಗೆ ಮಹತ್ವದ ಸುಳಿವು ಕೊಟ್ಟ ಮಹಿ – ಅಭಿಮಾನಿಗಳಿಗೆ ಬಿಗ್ ಶಾಕ್!
Advertisement
ಸಿಎಂ ಸಿದ್ದರಾಮಯ್ಯ, ಸಚಿವರಾದ ಚೆಲುವರಾಯಸ್ವಾಮಿ, ಮಾಜಿ ಸಚಿವ ರೇವಣ್ಣ, ಕಾರ್ಯಾಧ್ಯಕ್ಷ ಸಲೀಂ ಅಹಮದ್, ಶಾಸಕ ನರೇಂದ್ರ ಸ್ವಾಮಿ, ರಾಣಿ ಸತೀಶ್, ನಜೀರ್ ಅಹಮದ್ ವೇದಿಕೆಯಲ್ಲಿದ್ದರು. ಇದನ್ನೂ ಓದಿ: ದೇಶದ ಬಡವರ ಆರಾಧ್ಯ ದೈವ ಆಗಿದ್ರು ಇಂದಿರಾಗಾಂಧಿ: ಸಿದ್ದರಾಮಮಯ್ಯ
Web Stories