ಮತ್ತೆ ಪ್ರೀತಿಯಲ್ಲಿ ಬಿದ್ರಾ ನಟಿ?- ನಿರ್ಮಾಪಕನ ತೋಳಲ್ಲಿ ತಲೆಯಿಟ್ಟು ಮಲಗಿದ ಸಮಂತಾ

Public TV
1 Min Read
samantha 2

ಸೌತ್ ನಟಿ ಸಮಂತಾ (Samantha) ಎರಡನೇ ಮದುವೆಗೆ ಸಿದ್ಧವಾದ್ರಾ ಎಂಬ ಅನುಮಾನ ಅಭಿಮಾನಿಗಳಲ್ಲಿ ಮೂಡಿದೆ. ನಿರ್ಮಾಪಕ ರಾಜ್ ನಿಡಿಮೋರು (Raj Nidimoru) ಜೊತೆಗಿನ ಸಮಂತಾ ಡೇಟಿಂಗ್ ಸುದ್ದಿಗೆ ಪುಷ್ಠಿ ನೀಡುವಂತಹ ಮತ್ತೊಂದು ಫೋಟೋ ಭಾರೀ ಸದ್ದು ಮಾಡ್ತಿದೆ. ನಿರ್ಮಾಪಕನ ತೋಳಲ್ಲಿ ನಟಿ ತಲೆಯಿಟ್ಟು ಮಲಗಿದ್ದಾರೆ. ಇದನ್ನೂ ಓದಿ:ರಾಜಕಾರಣಿಗಳ ಜೊತೆ ಡೇಟಿಂಗ್‌ಗೆ ಬಾ – ಟಾರ್ಚರ್ ಕೊಟ್ಟವನ ಚಳಿ ಬಿಡಿಸಿದ ನಮ್ರತಾ

samantha 1ಸಮಂತಾ ನಟನೆಯೊಂದಿಗೆ ನಿರ್ಮಾಪಕಿಯಾಗಿ ಹೊಸ ಹೆಜ್ಜೆ ಇಟ್ಟಿದ್ದಾರೆ. ‘ಶುಭಂ’ (Subham) ಮೂಲಕ ನಟಿ ಗೆಲುವು ಸಾಧಿಸಿದ್ದಾರೆ. ನಟಿಯ ಪ್ರತಿ ಕೆಲಸದಲ್ಲೂ ನಿರ್ಮಾಪಕ ರಾಜ್ ಜೊತೆಯಾಗಿರೋದನ್ನು ನೋಡಿ ಅಭಿಮಾನಿಗಳು ಗುಡ್ ನ್ಯೂಸ್‌ಗಾಗಿ ಕಾಯ್ತಿದ್ದಾರೆ. ಹೀಗಿರುವಾಗ ನಟಿ ಸೋಷಿಯಲ್ ಮೀಡಿಯಾದಲ್ಲಿ ರಾಜ್ ಜೊತೆಗಿನ ಹೊಸ ಫೋಟೋವನ್ನು ಹಂಚಿಕೊಂಡಿದ್ದಾರೆ. ನಿರ್ಮಾಪಕನ ತೋಳಲ್ಲಿ ಸಮಂತಾ ತಲೆಯಿಟ್ಟು ಮಲಗಿದ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ ನೋಡಿರೋ ಫ್ಯಾನ್ಸ್ ಮತ್ತೆ ಇಬ್ಬರ ಡೇಟಿಂಗ್ ಬಗ್ಗೆ ಗುಸು ಗುಸು ಶುರು ಮಾಡಿದ್ದಾರೆ. ಇದನ್ನೂ ಓದಿ:‘ಸಿತಾರೆ ಜಮೀನ್ ಪರ್’ ಬಾಯ್‌ಕಾಟ್‌ಗೆ ಆಗ್ರಹ- ಆಮೀರ್ ಖಾನ್ ವಿರುದ್ಧ ತಿರುಗಿಬಿದ್ದ ನೆಟ್ಟಿಗರು

ಇತ್ತೀಚೆಗೆ ‘ಶುಭಂ’ ಚಿತ್ರತಂಡದ ಜೊತೆಗಿನ ಪೋಸ್ಟ್‌ನಲ್ಲಿ ರಾಜ್ ಜೊತೆಗಿನ ಫೋಟೋ ಕೂಡ ನಟಿ ಹಂಚಿಕೊಂಡಿದ್ದರು. ಅದಕ್ಕೆ, ಹೊಸ ಆರಂಭ ಎಂದು ಕ್ಯಾಪ್ಷನ್ ನೀಡಿದ್ದರು. ಈ ಬೆನ್ನಲ್ಲೇ ಹೊಸ ಫೋಟೋ ಸದ್ದು ಮಾಡ್ತಿದೆ.

samantha 1ನಾಗಚೈತನ್ಯ ಜೊತೆ 2017ರಲ್ಲಿ ಪ್ರೀತಿಸಿ ಸಮಂತಾ ಮದುವೆಯಾಗಿದ್ದರು. ಕೆಲ ಮನಸ್ತಾಪಗಳಿಂದ ನಟಿ 2021ರಲ್ಲಿ ಡಿವೋರ್ಸ್ ಪಡೆದರು. ಬಳಿಕ ನಟಿ ಶೋಭಿತಾ ಜೊತೆ ಮಾಜಿ ಪತಿ ಹಸೆಮಣೆ ಏರಿದರು. ಅವರಂತೆಯೇ ಸಮಂತಾ ಕೂಡ ಮತ್ತೆ ಮದುವೆಯಾಗಲಿ, ಹೊಸ ಜೀವನ ಶುರು ಮಾಡಲಿ ಎಂದು ಫ್ಯಾನ್ಸ್ ಎದುರು ನೋಡ್ತಿದ್ದಾರೆ.

Share This Article