– 4 ದಿನಗಳಿಂದ ಗದ್ದೆಗೆ ನೀರು ಪೂರೈಕೆ ಇಲ್ಲ
– ರೈತನ ಪರವಾಗಿ ಬಿಜೆಪಿ ಪ್ರತಿಭಟನೆ
ಕೋಲಾರ: ಚುನಾವಣೆ ಸಮೀಪಿಸುತ್ತಿದ್ದಂತೆ ಹಳ್ಳಿ ಭಾಗಗಳಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಜೊತೆಗೆ ಮತದಾರರನ್ನು ಸೆಳೆಯಲು ತಮ್ಮದೇ ಆದಂತಹ ಕಸರತ್ತುಗಳನ್ನು ರಾಜಕೀಯ ಪಕ್ಷದ ಅಭ್ಯರ್ಥಿಗಳು ನಡೆಸುತ್ತಿದ್ದಾರೆ. ಒಂದೆಡೆ ಮತದಾರರಿಗೆ ಆಸೆ ಆಮಿಷಗಳನ್ನು ಒಡ್ಡಿದರೆ ಇನ್ನೊಂದಡೆ ಬೇರೆ ಪಕ್ಷದ ಮತದಾರರನ್ನು ತಮ್ಮತ್ತ ಸೆಳೆದು ಪಕ್ಷ ಸೇರ್ಪಡೆ ಮಾಡಿಕೊಳ್ಳುತ್ತಿದ್ದಾರೆ.
Advertisement
ಕೋಲಾರ (Kolar) ಜಿಲ್ಲೆಯ ಕೆಜಿಎಫ್ (KGF) ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕಿ (Congress MLA) ರೂಪಾ ಶಶಿಧರ್ (Roopa Shashidhar) ತಮ್ಮ ಪಕ್ಷಕ್ಕೆ ಸೇರ್ಪಡೆಗೊಳ್ಳದ ಕುಟುಂಬಕ್ಕೆ ವಿದ್ಯುತ್ (Electricity) ಸಂಪರ್ಕ ಕಡಿತಗೊಳಿಸಿರುವ ಆರೋಪ ಕೇಳಿ ಬಂದಿದೆ. ಕೋಲಾರ ಜಿಲ್ಲೆ ಕೆಜಿಎಫ್ ತಾಲೂಕಿನ ಬೇತಮಂಗಲ ವ್ಯಾಪ್ತಿಯ ಪಂತನಹಳ್ಳಿ ಗ್ರಾಮದಲ್ಲಿ ತಮ್ಮ ಪಕ್ಷಕ್ಕೆ ಸೇರ್ಪಡೆಯಾಗಿಲ್ಲ ಎಂದು ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
Advertisement
Advertisement
ಪಂತನಹಳ್ಳಿ ಗ್ರಾಮದ ರೈತ (Farmer) ಶಿವಪ್ಪ ಬಿಜೆಪಿ (BJP) ಪಕ್ಷದಲ್ಲಿ ಗುರುತಿಸಿಕೊಂಡಿದ್ದು, ಇವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವಂತೆ ಕೆಜಿಎಫ್ ಶಾಸಕಿ ರೂಪಾ ಒತ್ತಾಯ ಮಾಡಿದ್ದರು ಎನ್ನಲಾಗಿದೆ. ಆದರೆ ರೈತ ಶಿವಪ್ಪ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳದ ಹಿನ್ನೆಲೆ ಕಳೆದ 3 ದಿನಗಳ ಹಿಂದೆ ಅವರ ಜಮೀನಿಗೆ ಇದ್ದಂತಹ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ್ದಾರೆಂದು ಆರೋಪಿಸಲಾಗಿದೆ. ಇದನ್ನೂ ಓದಿ: ಬುಧವಾರದಿಂದ ಸರ್ಕಾರಿ ನೌಕರರ ಮುಷ್ಕರ: ಯಾವ ಕಚೇರಿಗಳು ಬಂದ್ ಆಗಲಿವೆ?
Advertisement
ಈ ಹಿನ್ನೆಲೆ ಶಾಸಕಿ ಅವರ ವಿರುದ್ಧ ಕೆಜಿಎಫ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಆಕಾಂಕ್ಷಿಯಾಗಿರುವ ಮೋಹನ್ ಕೃಷ್ಣ ನೇತೃತ್ವದಲ್ಲಿ ಪಂತನಹಳ್ಳಿ ಗ್ರಾಮದ ರೈತನ ತೋಟದಲ್ಲಿ ನಿಂತು ಪ್ರತಿಭಟನೆ ಮಾಡಿದ್ದಾರೆ. ಶಾಸಕಿ ರೂಪಾ ಅವರು ತಮ್ಮ ಪ್ರಭಾವ ಬಳಸಿ, ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳದ ಬಿಜೆಪಿ ಕಾರ್ಯಕರ್ತನ ತೋಟಕ್ಕೆ ಇದ್ದಂತಹ ವಿದ್ಯುತ್ ಸಂಪರ್ಕ ಕಡಿತ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಕಳೆದ 4 ದಿನಗಳಿಂದ ರೈತನು ಬೆಳೆದ ಬೆಳೆಗಳಿಗೆ ನೀರಿಲ್ಲದೆ ಪರದಾಡುವಂತಹ ಸ್ಥಿತಿಯಲ್ಲಿದ್ದು ಇದಕ್ಕೆ ಶಾಸಕಿ ರೂಪಾ ಅವರೇ ನೇರ ಹೊಣೆ ಎಂದು ಹೇಳಿದ್ದಾರೆ. ಶಾಸಕಿ ಆದಂತಹವರು ರೈತರ ಸಂಕಷ್ಟಗಳಿಗೆ ಸ್ಪಂದಿಸಬೇಕೇ ಹೊರತು ರಾಜಕೀಯವಾಗಿ ಅವರಿಗೆ ತೊಂದರೆ ನೀಡಬಾರದು ಎಂದು ಗುಡುಗಿದ್ದಾರೆ. ಇದನ್ನೂ ಓದಿ: 14 ಕಡೆ ಕುಕ್ಕರ್ ಬ್ಲಾಸ್ಟ್ ಆಗಿದೆ, ತಗೊಳೋ ಮುನ್ನ ಎಚ್ಚರ: ರಮೇಶ್ ಜಾರಕಿಹೊಳಿ