ಗಾಂಧೀನಗರ: ಭಾರತೀಯ ಕ್ರಿಕೆಟಿಗ ರವೀಂದ್ರ ಜಡೇಜಾರವರು (Ravindra Jadeja) ರಾಜಕೀಯದಲ್ಲಿ ಹೊಸ ಇನ್ನಿಂಗ್ಸ್ ಬರೆದಿದ್ದಾರೆ. ಇದೀಗ ಪತಿ ಬಿಜೆಪಿಗೆ ಸೇರ್ಪಡೆಗೊಂಡ ಫೋಟೋವನ್ನು ಪತ್ನಿ, ಗುಜರಾತ್ (Gujarat) ಶಾಸಕಿ ರಿವಾಬಾ ಜಡೇಜಾ (Rivaba Jadeja) ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಬಿಜೆಪಿ (BJP) ದೇಶಾದ್ಯಂತ ಸದಸ್ಯತ್ವ ಅಭಿಯಾನ ಆರಂಭಿಸಿದೆ. ಈ ಅಭಿಯಾನದ ಭಾಗವಾಗಿ ಜಡೇಜಾ ಅವರು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಈ ಬಗ್ಗೆ ರವೀಂದ್ರ ಜಡೇಜಾ ಎಲ್ಲಿಯೂ ಅಧಿಕೃತವಾಗಿ ತಿಳಿಸಿಲ್ಲ.
Advertisement
🪷 #SadasyataAbhiyaan2024 pic.twitter.com/he0QhsimNK
— Rivaba Ravindrasinh Jadeja (@Rivaba4BJP) September 2, 2024
Advertisement
ರಿವಾಬಾ 2019ರಲ್ಲಿ ಬಿಜೆಪಿ ಪಕ್ಷವನ್ನು ಸೇರಿದ್ದರು. 2022 ರ ವಿಧಾನಸಭಾ ಚುನಾವಣೆಯಲ್ಲಿ ಜಾಮ್‌ನಗರ್ ಉತ್ತರ ಕ್ಷೇತ್ರದಿಂದ ಕಣಕ್ಕೆ ಇಳಿದು ಆಪ್ ಅಭ್ಯರ್ಥಿ ಕರ್ಶನ್‌ಬಾಯ್ ಕಾರ್ಮುರ್ ರವರನ್ನು ಸೋಲಿಸುವ ಮೂಲಕ ರಾಜಕೀಯ ಇನ್ನಿಂಗ್ಸ್ ಆರಂಭಿಸಿದ್ದಾರೆ. ಇದನ್ನೂ ಓದಿ: ವರ್ಷ ವರ್ಷ ಹಬ್ಬ ಬರುತ್ತೆ ಆದ್ರೆ ನಾಳೆಯ ಹಬ್ಬ ಮತ್ತೆ ಬರಲ್ಲ: ಡಿಕೆಶಿ
Advertisement
Advertisement
ನರೇಂದ್ರ ಮೋದಿ (Narendra Modi) ಹಾಗೂ ಗೃಹ ಸಚಿವ ಅಮಿತ್ ಶಾ (Amit Shah) ಅವರ ತವರಾದ ಗುಜರಾತ್‌ನಲ್ಲಿ ಭಾರತೀಯ ಜನತಾ ಪಕ್ಷ 2 ಕೋಟಿ ಪ್ರಾಥಮಿಕ ಸದಸ್ಯರನ್ನು ಸೇರ್ಪಡೆಗೊಳಿಸುವ ಗುರಿಯನ್ನು ಹೊಂದಿದೆ ಎಂದು ಹಿರಿಯ ಸದಸ್ಯರೊಬ್ಬರು ಹೇಳಿದ್ದಾರೆ. ಇದನ್ನೂ ಓದಿ: ಗಣೇಶ ಚತುರ್ಥಿ ಪ್ರಯುಕ್ತ ಸೆ.7ರಂದು ಪ್ರಾಣಿವಧೆ, ಮಾಂಸ ಮಾರಾಟ ನಿಷೇಧ
ಜಡೇಜಾ ಟಿ20 ವಿಶ್ವಕಪ್‌ನ ವಿಜಯದ ನಂತರ ಟಿ20 ಕ್ರಿಕೆಟಿಗೆ ನಿವೃತ್ತಿ ಘೋಷಿಸಿದ್ದರು. ಇದೀಗ ಈ ತಿಂಗಳಿನಿಂದ ಪ್ರಾರಂಭವಾಗುವ ಟೆಸ್ಟ್ ಸರಣಿಯಿಂದ ಭಾರತ ತಂಡಕ್ಕೆ ಮರಳಿದ್ದಾರೆ. ಭಾರತ ಹಾಗೂ ಬಾಂಗ್ಲಾ ದೇಶದ ಎರಡು ಪಂದ್ಯಗಳ ಟೆಸ್ಟ್ ಸರಣಿಯು ಸೆ.19 ರಿಂದ ಪ್ರಾರಂಭಗೊಳ್ಳಲಿದೆ. ಇದನ್ನೂ ಓದಿ: Punjab Economic Crisis | ವಿದ್ಯುತ್ ಸಬ್ಸಿಡಿ ರದ್ದುಗೊಳಿಸಿ ಪೆಟ್ರೋಲ್, ಡೀಸೆಲ್ ಜೊತೆ ಬಸ್ ಟಿಕೆಟ್ ದರ ಏರಿಸಿದ ಪಂಜಾಬ್