ಮುಂಬೈ: ನಟಿ ಹೇಮಾ ಮಾಲಿನಿ (Hema Malini) ಅವರನ್ನು ಮದುವೆಯಾಗಲು ಧರ್ಮೇಂದ್ರ ಇಸ್ಲಾಂ (Islam) ಧರ್ಮಕ್ಕೆ ಮತಾಂತರವಾಗಿದ್ರಾ ಎಂಬ ಪ್ರಶ್ನೆ ಈಗ ಮತ್ತೆ ಮುನ್ನೆಲೆಗೆ ಬಂದಿದ್ದು ಚರ್ಚೆ ಆಗುತ್ತಿದೆ.
ಬಾಲಿವುಡ್‌ನ ಖ್ಯಾತ ನಟ, ಹೀ–ಮ್ಯಾನ್ ಎಂದೇ ಪ್ರಸಿದ್ಧರಾಗಿದ್ದ ಧರ್ಮೇಂದ್ರ ಅವರು ಇಂದು ವಿಧಿವಶರಾಗಿದ್ದಾರೆ. ನಿಧನರಾದ ನಂತರ ಧರ್ಮೇಂದ್ರ ಅವರಿಗೆ ಸಂಬಂಧಿಸಿದ ಹಲವಾರು ವೈಯಕ್ತಿಕ ವಿಚಾರಗಳು ಮುನ್ನೆಲೆಗೆ ಬರುತ್ತಿದೆ.
ಮತಾಂತರ ಆಗಿದ್ರಾ?
ಧರ್ಮೇಂದ್ರ ಅವರಿಗೆ ಇಬ್ಬರು ಪತ್ನಿಯರು. ತಮ್ಮ 19ನೇ ವಯಸ್ಸಿನಲ್ಲೇ ಧರ್ಮೇಂದ್ರ (Dharmendra) 1954 ರಲ್ಲಿ ಪ್ರಕಾಶ್ ಕೌರ್ ಅವರನ್ನು ಮದುವೆಯಾಗಿದ್ದರು. ಆದರೆ 1980 ರಲ್ಲಿ ಹೇಮಾ ಮಾಲಿನಿ ಅವರನ್ನು ಧರ್ಮೇಂದ್ರ ವಿವಾಹವಾದರು. ಇದನ್ನೂ ಓದಿ: ಭಾರತೀಯ ಚಿತ್ರರಂಗದ ಒಂದು ಯುಗಾಂತ್ಯ – ಧರ್ಮೇಂದ್ರ ನಿಧನಕ್ಕೆ ಮೋದಿ ಸಂತಾಪ
ಹೇಮಾ ಮಾಲಿನಿ ಜೀವನ ಚರಿತ್ರೆ ಪುಸ್ತಕ ʼಹೇಮಾ ಮಾಲಿನಿ: ಬಿಯಾಂಡ್ ದಿ ಡ್ರೀಮ್ ಗರ್ಲ್’ ಪುಸ್ತಕದಲ್ಲಿ ರಾಮ್ ಕಮಲ್ ಮುಖರ್ಜಿ ಹಿಂದೂ ಧರ್ಮದಲ್ಲಿ ಮೊದಲ ಪತ್ನಿ ಇರುವಾಗಲೇ ಎರಡನೇ ಮದುವೆಯಾಗುವುದು ಅಪರಾಧ. ಈ ಕಾರಣಕ್ಕೆ ಧರ್ಮೇಂದ್ರ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿದ್ದರು. ಧರ್ಮೇಂದ್ರ ಅವರು ದಿಲಾವರ್ ಖಾನ್ ಕೇವಲ್ ಕೃಷ್ಣ ಮತ್ತು ಹೇಮಾ ಅವರು ಆಯೇಷಾ ಬಿ ಎಂದು ತಮ್ಮ ಹೆಸರುಗಳನ್ನು ಬದಲಾಯಿಸಿಕೊಂಡಿದ್ದರು. 1979ರಲ್ಲಿ ‘ನಿಕಾಹ್’ ಕೂಡ ನಡೆದಿತ್ತು ಎಂದು ಉಲ್ಲೇಖಿಸಿದ್ದು ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿತ್ತು.
ಹೇಮಾಮಾಲಿನಿ ಅವರನ್ನು ಮದುವೆಯಾದ ಬಗ್ಗೆ ಧರ್ಮೇಂದ್ರ ಅವರು ಸರ್ಕಾರಿ ದಾಖಲೆಗಳಲ್ಲಿ ಉಲ್ಲೇಖಿಸಿರಲಿಲ್ಲ. 2004ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಧರ್ಮೇಂದ್ರ ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಅಫಿಡೆವಿಟ್‌ನಲ್ಲಿ ಹೇಮಾ ಮಾಲಿನಿ ಹೆಸರಿನ ಆಸ್ತಿ ವಿವರಗಳನ್ನು ಬಹಿರಂಗ ಪಡಿಸಿರಲಿಲ್ಲ. ಅವರು ತಮ್ಮ ಮೊದಲ ಪತ್ನಿ ಪ್ರಕಾಶ್ ಕೌರ್ ಅವರ ಆಸ್ತಿ ವಿವರವನ್ನು ಮಾತ್ರ ಪ್ರಕಟಿಸಿದ್ದರು.
ವಿವಾದವಾಗುತ್ತಿದ್ದಂತೆ ಮಾಧ್ಯಮಕ್ಕೆ ಸ್ಟಷ್ಟನೆ ನೀಡಿದ ಅವರು, ಇದೊಂದು ಸುಳ್ಳು ಆರೋಪವಾಗಿದ್ದು, ನನ್ನ ಹಿತಾಸಕ್ತಿಗಳಿಗಾಗಿ ಧರ್ಮವನ್ನು ಬದಲಾಯಿಸುವ ವ್ಯಕ್ತಿಯಲ್ಲ ಎಂದು ತಿಳಿಸಿದ್ದರು.
