ಕನ್ನಡತಿ ಶ್ರೀಲೀಲಾ (Sreeleela) ಸದ್ಯ ಟಾಲಿವುಡ್‌ನಲ್ಲಿ (Tollywood) ಕಮಾಲ್ ಮಾಡ್ತಿದ್ದಾರೆ. ರಶ್ಮಿಕಾ ಮಂದಣ್ಣ ನಂತರ ಕನ್ನಡದ ಮತ್ತೋರ್ವ ನಟಿ ಶ್ರೀಲೀಲಾ ತೆಲುಗು ಮಂದಿ ಮಣೆ ಹಾಕ್ತಿದ್ದಾರೆ. ಹೀಗಿರುವಾಗ ಗೋಲ್ಡನ್ ಚಾನ್ಸ್‌ವೊಂದನ್ನು ನಟಿ ಮಿಸ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ:ನಾಳೆ ಅಪ್ಪು ನಟನೆಯ ‘ಜಾಕಿ’ ಸಿನಿಮಾ ರಿಲೀಸ್
Advertisement
‘ಗುಂಟೂರು ಖಾರಂ’ ಸಿನಿಮಾ ಸಕ್ಸಸ್ ಆದ್ರೂ ಶ್ರೀಲೀಲಾಗೆ ಅದ್ಯಾಕೋ ಈ ಬಾರಿ ಲಕ್ ಕೈ ಕೊಟ್ಟಿದೆ. ಕೈಗೆ ಬಂದ ತುತ್ತು ಬಾಯಿಗೆ ಇಲ್ಲದಂತೆ ಆಗಿದೆ. ಮೆಗಾಸ್ಟಾರ್ ಚಿರಂಜೀವಿ ಪುತ್ರ, ಸ್ಟಾರ್ ನಟ ರಾಮ್ ಚರಣ್ (Ramcharan) ಜೊತೆ ಶ್ರೀಲೀಲಾ ಡ್ಯುಯೇಟ್ ಹಾಡುವ ಅವಕಾಶ ಮಿಸ್ ಮಾಡಿಕೊಂಡಿದ್ದಾರೆ.
Advertisement
Advertisement
ರಾಮ್ ಚರಣ್ 16ನೇ ಸಿನಿಮಾಗೆ ಬುಚ್ಚಿ ಬಾಬು ಸನಾ ನಿರ್ದೇಶನ ಮಾಡಲಿದ್ದಾರೆ. ರಾಮ್ ಚರಣ್ ಜೊತೆ ಹ್ಯಾಟ್ರಿಕ್ ಹೀರೋ ಶಿವಣ್ಣ ಕೂಡ ನಟಿಸಲಿದ್ದಾರೆ. ರಾಮ್ ಚರಣ್‌ಗೆ ಶ್ರೀಲೀಲಾರನ್ನು ಜೋಡಿಯಾಗಿ ತೋರಿಸಬೇಕು ಎಂದು ಚಿತ್ರತಂಡ ಯೋಚಿಸಿತ್ತು. ನಟಿಯ ಜೊತೆ ಮಾತುಕತೆ ಆಗಿತ್ತು.
Advertisement
ಆದರೆ ಏಕಾಎಕಿ ಏನಾಯ್ತೋ ಶ್ರೀಲೀಲಾ ಬದಲು ಜಾನ್ವಿ ಕಪೂರ್‌ಗೆ (Janhvi Kapoor) ಮಣೆ ಹಾಕಿದ್ದರು. ಬಾಲಯ್ಯ, ಮಹೇಶ್ ಬಾಬುರಂತಹ ಸ್ಟಾರ್‌ಗಳ ಜೊತೆ ನಟಿಸಿರುವ ಲೀಲಾಗೆ ರಾಮ್ ಚರಣ್ ಜೊತೆ ನಟಿಸಿದ್ರೆ ಕೆರಿಯರ್‌ಗೆ ಬಿಗ್ ಬ್ರೇಕ್ ಸಿಗುತ್ತಿತ್ತು. ಆದರೆ ಕಾರಣಾಂತರಗಳಿಂದ ನಟಿ ಗೋಲ್ಡನ್ ಚಾನ್ಸ್ ಮಿಸ್ ಮಾಡಿಕೊಂಡಿದ್ದಾರೆ. ಚರಣ್ ಜೊತೆ ರೊಮ್ಯಾನ್ಸ್ ಮಾಡುವ ಅವಕಾಶ ಜಾನ್ವಿಗೆ ಸಿಕ್ಕಿದೆ.
ಕನ್ನಡದ ಕಿಸ್, ಭರಾಟೆ, ಬೈ ಟು ಲವ್, ತೆಲುಗಿನ ಧಮಾಕಾ, ಸ್ಕಂದ, ಆದಿಕೇಶವ ಸೇರಿದಂತೆ ಹಲವು ಸಿನಿಮಾಗಳಲ್ಲಿ ಶ್ರೀಲೀಲಾ ನಟಿಸಿದ್ದಾರೆ.