ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಸರ್ವಾಧಿಕಾರಿ ಧೋರಣೆಯನ್ನು ಅನುಸರಿಸುತ್ತಿದ್ದು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ (Lok Sabha Election) ಮತ್ತೊಮ್ಮೆ ಏನಾದರೂ ಅಧಿಕಾರಕ್ಕೆ ಬಂದರೆ ಇವೆಲ್ಲವೂ ಮೀರಲಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ (Mallikarjun Kharge) ಕಿಡಿಕಾರಿದ್ದಾರೆ.
ಬುಧವಾರ ನಗರದ ಲುಂಬಿನಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಈಗಾಗಲೇ ಮೋದಿ ಸ್ವಾಯತ್ತತೆ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಈ ಬಾರಿ 400ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಹೇಳುತ್ತಿದ್ದಾರೆ. ಬೇರೆಯವರಿಗೆ ಏನೂ ಸಿಗುವುದಿಲ್ಲ. ದೇಶದ 543 ಸ್ಥಾನಗಳನ್ನು ತಾವೇ ಗೆಲ್ಲುವುದಾಗಿ ಹೇಳುತ್ತಿದ್ದು, ಒಂದು ವೇಳೆ ಹೀಗಾದರೆ ದೇಶಕ್ಕೆ ಒಳ್ಳೆಯ ಬೆಳವಣಿಗೆ ಅಲ್ಲ ಎಂದರು. ಇದನ್ನೂ ಓದಿ: ರಾಮನಗರದಲ್ಲಿ ಅಶಾಂತಿ ಸೃಷ್ಠಿಸೋದೆ ಹೆಚ್‌ಡಿಕೆ ಕೆಲಸ: ಡಿಕೆಶಿ
Advertisement
Advertisement
ಲೋಕಸಭಾ ಚುನಾವಣೆಗೆ ಈಗಾಗಲೇ ಕಾಂಗ್ರೆಸ್ (Congress) ಪಕ್ಷ ಎಲ್ಲಾ ಆಯಾಮಗಳಲ್ಲಿ ಸಿದ್ಧತೆಗಳನ್ನು ನಡೆಸಿದೆ. ದಿನಕ್ಕೊಂದು ರಾಜ್ಯದ ಪ್ರಮುಖರ ಸಭೆ ನಡೆಸಿ, ಎಲ್ಲವನ್ನೂ ಪರಾಮರ್ಶೆ ಮಾಡಲಾಗುತ್ತಿದೆ. ಆಯಾ ರಾಜ್ಯಗಳ ಸಭೆ ನಡೆಸುವುದರ ಜೊತೆಜೊತೆಗೆ ಇಂಡಿಯಾ ಒಕ್ಕೂಟದ ಜೊತೆಗೆ ನಿರಂತರವಾಗಿ ಮಾತುಕತೆ ಹಾಗೂ ದಿನದ ಬೆಳವಣಿಗೆಗಳ ಮೇಲೆ ನಿಗಾಯಿರಿಸಲು ತಂಡಗಳ ರಚನೆ ಮಾಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಲೋಕಸಭಾ ಚುನಾವಣೆ ಸ್ಪರ್ಧೆ ಬಗ್ಗೆ ಯೋಚನೆ ಮಾಡಿ ಹೇಳ್ತೀನಿ: ಡಾ.ಸಿ.ಎನ್.ಮಂಜುನಾಥ್
Advertisement
ಮುಕುಲ್ ವಾಸನಿಕ್ ನೇತೃತ್ವದಲ್ಲಿ ಆರು ಜನರ ತಂಡವು ಒಕ್ಕೂಟದ ಮುಖಂಡರೊಂದಿಗೆ ಲೋಕಸಭಾ ಚುನಾವಣೆ ಕುರಿತು ಚರ್ಚೆ, ಸಮಾಲೋಚನೆ ನಿರಂತರವಾಗಿ ನಡೆಯುತ್ತಿದೆ ಎಂದರು. ಇದನ್ನೂ ಓದಿ: ವಿಶ್ವದ ಏಕೈಕ ಮಂದಸ್ಮಿತ ಬಾಹುಬಲಿಗೆ ಗುರುವಾರ ಮಹಾಮಸ್ತಕಾಭಿಷೇಕ
Advertisement
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೇವಲ ಜಾಹೀರಾತಿನ ಸರ್ಕಾರವಾಗಿದ್ದು, ಮಾಧ್ಯಮಗಳಲ್ಲಿ ದಿನನಿತ್ಯ ನಿರಂತರ ಬರುತ್ತಿರುವ ಜಾಹೀರಾತುಗಳೇ ಹಿಡಿದ ಕನ್ನಡಿಯಾಗಿವೆ. ಟಿವಿ, ಪತ್ರಿಕೆಯಲ್ಲಿ ದಿನಬೆಳಗ್ಗೆಯಾದರೇ ಸಾಕು, ನರೇಂದ್ರ ಮೋದಿ ಅವರದ್ದೇ ಜಾಹೀರಾತು ಬರುತ್ತದೆ. ಮೋದಿ ಇಲ್ಲದೆ ದೇಶ ನಡೆಯುವುದಿಲ್ಲ ಎಂಬ ರೀತಿಯಲ್ಲಿ ಅವರನ್ನು ಬಿಂಬಿಸಲಾಗುತ್ತಿದೆ ಎಂದು ಆರೋಪಿಸಿದರು. ಇದನ್ನೂ ಓದಿ: ಟಿಕೆಟ್‌ಗಾಗಿ ನಾನು ಲಾಬಿ ಮಾಡಿಲ್ಲ: ಸುಮಲತಾ ಅಂಬರೀಶ್
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಯಾವ ರೀತಿಯಲ್ಲಿ ಹೆಣೆಯಬೇಕು ಎಂಬ ಕಾರಣಕ್ಕೆ ಬಿಜೆಪಿ ನಾಯಕರು ಪದೇ ಪದೇ ಕಲಬುರಗಿ ಜಿಲ್ಲೆಗೆ ಅವರ ಅಭ್ಯರ್ಥಿ ನೋಡುವ ನೆಪದಲ್ಲಿ ಬಂದು ಹೋಗುತ್ತಿದ್ದಾರೆ. ಕಳೆದ 2019ರ ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ನಾಯಕರು ಇಲ್ಲೇ ಬಿಡಾರ ಹೂಡಿದ್ದರು ಎಂದು ಹೇಳಿದರು. ಇದನ್ನೂ ಓದಿ: ಮೋದಿ ರಾಜ್ಯಸಭೆಗೆ ಬರುವುದು 20 ನಿಮಿಷ ಮಾತ್ರ: ಶರದ್ ಪವಾರ್ ಲೇವಡಿ