ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು (Narendra Modi) ರಾಜ್ಯಸಭೆಗೆ ಬರುವುದು ಕೇವಲ 20 ನಿಮಿಷ ಮಾತ್ರ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಶರದ್ ಪವಾರ್ (Sharad Pawar) ಲೇವಡಿ ಮಾಡಿದ್ದಾರೆ.
ಸಂಸತ್ತಿನಲ್ಲಿ ಸಾಮಾನ್ಯ ಜನರಿಗೆ ಸಂಬಂಧಿಸಿದ ವಿಷಯಗಳು ಮತ್ತು ನೀತಿ ನಿರ್ಧಾರಗಳನ್ನು ಚರ್ಚಿಸಲಾಗುತ್ತದೆ. ಆದರೆ ಪ್ರಧಾನಿ ಸ್ವಲ್ಪ ಸಮಯ ಮಾತ್ರ ಬರುತ್ತಾರೆ ಎಂದು ಶರದ್ ಪವಾರ್ ವಾಗ್ದಾಳಿ ನಡೆಸಿದ್ದಾರೆ. ಇದೇ ವೇಳೆ ಪ್ರಧಾನಿ ಮೋದಿಯವರು ಸಂಸತ್ತಿನ ಬಾಗಿಲಿಗೆ ನಮಸ್ಕರಿಸುವುದನ್ನು ನಾಟಕ ಎಂದು ಅವರು ಹೇಳಿದರು.
Advertisement
Advertisement
ಇಂದು ಅಧಿಕಾರ ದುರುಪಯೋಗವಾಗುತ್ತಿದೆ. ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಿ ವಿರೋಧ ಪಕ್ಷದ ನಾಯಕರನ್ನು ಬಂಧಿಸಲಾಗುತ್ತಿದೆ. ಕೇಜ್ರಿವಾಲ್‌ಗೆ ಕಿರುಕುಳ ನೀಡಲಾಗುತ್ತಿದೆ. ಜನರನ್ನು ಹತ್ತಿಕ್ಕಲಾಗುತ್ತಿದೆ. ಸುದ್ದಿವಾಹಿನಿಗಳನ್ನು ನಿರ್ಬಂಧಿಸಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು. ಇದನ್ನೂ ಓದಿ: ಬಿಜೆಪಿ, ಜೆಡಿಎಸ್‍ಗೆ ಅಲ್ಪಸಂಖ್ಯಾತರನ್ನು ಕಂಡರೆ ಆಗಲ್ಲ: ಡಿ.ಕೆ ಶಿವಕುಮಾರ್
Advertisement
ಇದೇ ವರ್ಷ ಜನವರಿಯಲ್ಲಿ ಮಾಲ್ಡೀವ್ಸ್‌ನ (Maldives) ಕೆಲವು ಸಚಿವರು ಪ್ರಧಾನಿ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದಾಗ, ಪವಾರ್ ಮೋದಿಯನ್ನು ಬೆಂಬಲಿಸಿದ್ದರು. ಅವರು ನಮ್ಮ ದೇಶದ ಪ್ರಧಾನಿಯಾಗಿದ್ದು, ಬೇರೆ ಯಾವುದೇ ದೇಶದವರು ಯಾವುದೇ ಹುದ್ದೆಯಲ್ಲಿರುವವರು ನಮ್ಮ ಪ್ರಧಾನಿಯ ಮೇಲೆ ಇಂತಹ ಕಾಮೆಂಟ್‌ಗಳನ್ನು ಮಾಡಿದರೆ ಅದನ್ನು ನಾವು ಒಪ್ಪುವುದಿಲ್ಲ ಎಂದು ಹೇಳಿದ್ದರು.