ಬೆಂಗಳೂರು: ಹೊನ್ನಚರಿತ್ರೆಯ ಸಾರುವ ಕರುನಾಡ ಶಕ್ತಿ ಕೇಂದ್ರ ವಿಧಾನಸೌಧಕ್ಕೆ 60 ವರ್ಷ. 60 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಇವತ್ತು ವಜ್ರ ಮಹೋತ್ಸವ ನಡೆಯುತಿದೆ. ಇದಕ್ಕಾಗಿ ವಿಧಾನಸೌಧ ಅಲಂಕಾರಗೊಂಡಿದ್ದು, ರಾಷ್ಟ್ರಪತಿಗಳ ಭಾಷಣಕ್ಕೆ ಸಾಕ್ಷಿಯಾಗಲಿದೆ.
ವಿಧಾನಸಭಾ ಇತಿಹಾಸದಲ್ಲೇ ಇದು ಮೂರನೇ ಬಾರಿ ರಾಷ್ಟ್ರಪತಿಗಳು ಜಂಟಿ ಸದನವನ್ನು ಉದ್ದೇಶಿಸಿ ಮಾತನಾಡುತ್ತಿದ್ದು, ಬೆಳಗ್ಗೆ 11 ಗಂಟೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ವಿಶೇಷ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಹಿಂದೆ ಸರ್ವಪಲ್ಲಿ ರಾಧಾಕೃಷ್ಣನ್, ಅಬ್ದುಲ್ ಕಲಾಂ ವಿಶೇಷ ಅಧಿವೇಶನದಲ್ಲಿ ಭಾಷಣ ಮಾಡಿದ್ದರು. ಇನ್ನು ಈ ಸಾರ್ಥಕ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿಗಳನ್ನ ಸ್ಮರಿಸಲಾಗುತ್ತದೆ. ಎಲ್ಲಾ ಮಾಜಿ ಮುಖ್ಯಮಂತ್ರಿಗಳಿಗೆ ವಿಶೇಷ ಆಹ್ವಾನ ನೀಡಲಾಗಿದೆ.
Advertisement
ಶಾಸಕರು, ಪರಿಷತ್ ಸದಸ್ಯರು, ಮಾಜಿ ಶಾಸಕರು ಸೇರಿದಂತೆ ಸುಮಾರು 600 ಮಂದಿಗೆ ಆಹ್ವಾನ ನೀಡಲಾಗಿದೆ. ಎರಡು ದಿನಗಳ ಕಾರ್ಯಕ್ರಮಕ್ಕೆ ಮೊದಲಿಗೆ 27 ಕೋಟಿ ಖರ್ಚು, ಜನಪ್ರತಿನಿಧಿಗಳು, ಸಿಬ್ಬಂದಿಗೆ ಚಿನ್ನದ ಬಿಸ್ಕತ್ ಕೊಡುವ ವಿಚಾರವಾಗಿ ಭಾರೀ ವಿವಾದಕ್ಕೆ ಗ್ರಾಸವಾಗಿತ್ತು. ನಂತರ, 10 ಕೋಟಿ ಖರ್ಚಿನಲ್ಲಿ ಈಗ ಒಂದು ದಿನದ ಕಾರ್ಯಕ್ರಮ ಇವತ್ತು ನಡೆಯಲಿದೆ.
Advertisement
ವಿಧಾನಸೌಧದಕ್ಕೆ ವಿಶೇಷ ಭದ್ರತೆಯನ್ನ ಏರ್ಪಡಿಸಲಾಗಿದ್ದು, ವಜ್ರಮಹೋತ್ಸವದ ಎಲ್ಲಾ ಕಾರ್ಯಕ್ರಮಗಳನ್ನು ಕೆಂಗಲ್ ಹನುಮಂತಯ್ಯ ಅವರ ಮೊಮ್ಮಗ ವೆಂಕಟವರ್ದನ್ ಅವರ ತಂಡ ನಿರ್ವಹಿಸುತ್ತಿದೆ. ಅವರ ಡಿಎನ್‍ಎ ಇವೆಂಟ್ ಮ್ಯಾನೇಜ್ ಮೆಂಟ್ ಸಂಸ್ಥೆ ನಿರ್ವಹಿಸುತ್ತಿದೆ. ಅವರ ಡಿಎನ್‍ಎ ಇವೆಂಟ್ ಮ್ಯಾನೇಜ್ ಮೆಂಟ್ ಸಂಸ್ಥೆ ನಿರ್ವಹಿಸುತ್ತಿದೆ. ಈ ಮಧ್ಯೆ ಇವತ್ತು ಮಧ್ಯಾಹ್ನ ಸಾಕ್ಷ್ಯಚಿತ್ರ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಈ ಹೊತ್ತಲ್ಲೇ ಸಿಎಂ ಸಿದ್ದರಾಮಯ್ಯ ಕ್ಯಾಬಿನೆಟ್ ಸಭೆ ಕರೆದಿದಿದ್ದಾರೆ.
Advertisement
Advertisement
ವಜ್ರ ಮಹೋತ್ಸವದಲ್ಲಿ ಇವತ್ತು ಏನೇನು..?
* ಬೆಳಗ್ಗೆ 11 ಗಂಟೆ – ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ಕೋವಿಂದ್ ಭಾಷಣ
* ಮಧ್ಯಾಹ್ನ 12.00 – ವಿಧಾನಪರಿಷತ್ ಸಭಾಂಗಣ ವೀಕ್ಷಿಸಲಿರುವ ರಾಷ್ಟ್ರಪತಿ
* ಮಧ್ಯಾಹ್ನ 12.15 – ಗಾಂಧಿ ಪ್ರತಿಮೆ ಮುಂದೆ ಶಾಸಕರ ಜೊತೆ ಫೋಟೋ ಶೂಟ್
* ಮಧ್ಯಾಹ್ನ 12.30 – ವಿಧಾನಸೌಧದಿಂದ ರಾಷ್ಟ್ರಪತಿಗಳ ನಿರ್ಗಮನ
* ಮಧ್ಯಾಹ್ನ 1.30 – ಭೋಜನ ವ್ಯವಸ್ಥೆ
* ಮಧ್ಯಾಹ್ನ 3-5 ಗಂಟೆ – ಬ್ಯಾಂಕ್ವೆಟ್ ಹಾಲ್ ನಲ್ಲಿ ಮೂರು ಸಾಕ್ಷ್ಯ ಚಿತ್ರ ಪ್ರದರ್ಶನ
* ಸಂಜೆ 5-6 ಗಂಟೆ – ವಿಧಾನಸೌಧದ ಮುಂಭಾಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸಾಂಸ್ಕೃತಿಕ ಕಾರ್ಯಕ್ರಮ
* ಸಂಜೆ 6-6.30 – ಮಾಜಿ ಮುಖ್ಯಮಂತ್ರಿಗಳಾದ ಕೆಸಿ ರೆಡ್ಡಿ, ಕೆಂಗಲ್ ಹನುಮಂತಯ್ಯ, ಕಡಿದಾಳ್ ಮಂಜಪ್ಪ ಕುಟುಂಬಗಳಿಗೆ ಗೌರವ ಸಮರ್ಪಣೆ
* ಸಂಜೆ – 6.30ಕ್ಕೆ – ಹಂಸಲೇಖ ತಂಡದಿಂದ ರಸಮಂಜರಿ ಕಾರ್ಯಕ್ರಮ
ವಿಧಾನಸೌಧದ ಕಟ್ಟಡದ ಮೇಲೆ ಸರ್ಕಾರದ ಸಾಧನೆಯ 3ಡಿ ಮ್ಯಾಪಿಂಗ್ ಪ್ರದರ್ಶನ
ವಿಧಾನಸೌಧ ವಜ್ರಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ವಾಗತಿಸಿ ಬರ ಮಾಡಿಕೊಂಡರು. pic.twitter.com/YhpFOz8aaT
— DIPR Karnataka (@KarnatakaVarthe) October 24, 2017