ತಿರುವನಂತಪುರಂ: ಶಬರಿಮಲೆ ಅಯ್ಯಪ್ಪನಿಗೆ ಆಂಧ್ರಪ್ರದೇಶದ ಭಕ್ತರೊಬ್ಬರು ವಜ್ರದ ಕಿರೀಟವನ್ನು ಕಾಣಿಕೆಯಾಗಿ ಕೊಟ್ಟು ಹರಕೆಯನ್ನು ತೀರಿಸಿಕೊಂಡಿದ್ದಾರೆ.
ಕರ್ನೂಲ್ ಜಿಲ್ಲೆಯ ನಂದ್ಯಾಲದ ಮಾರಂ ವೆಂಕಟಸುಬ್ಬಯ್ಯ ಶಬರಿಮಲೆ ಅಯ್ಯಪ್ಪ ಸ್ವಾಮಿಗೆ ವಜ್ರ ಹೊದಿಕೆಯ ಚಿನ್ನದ ಕಿರೀಟ ನೀಡಿದ್ದಾರೆ. ಕೇರಳ ಹೈಕೋರ್ಟ್ ವಕೀಲರೊಬ್ಬರ ನೆರವಿನೊಂದಿಗೆ ಶುಕ್ರವಾರ ಕಿರೀಟವನ್ನು ಶಬರಿಮಲೆ ದೇವಸ್ಥಾನದ ಮುಖ್ಯ ಅರ್ಚಕರಿಗೆ ಹಸ್ತಾಂತರಿಸಿದ್ದಾರೆ. ಇದನ್ನೂ ಓದಿ: ಯೋಗಿ ಗೋರಖ್‍ಪುರದಲ್ಲಿಯೇ ಇರಲಿ, ಮತ್ತೆ ಬರುವುದು ಬೇಡ : ಅಖಿಲೇಶ್ ಯಾದವ್
Advertisement
Advertisement
ವೆಂಕಟಸುಬ್ಬಯ್ಯ ಅವರು ಅಯ್ಯಪ್ಪನ ಭಕ್ತರಾಗಿದ್ದಾರೆ. ಕಳೆದ 30 ವರ್ಷಗಳಿಂದ ಶಬರಿಗಿರಿಗೆ ಭೇಟಿ ನೀಡುತ್ತಿದ್ದಾರೆ. ವೆಂಕಟಸುಬ್ಬಯ್ಯ ಅವರು ಕಳೆದ ವರ್ಷ ಕೊರೊನಾ ಸೋಂಕಿಗೆ ಒಳಗಾಗಿದ್ದರು. 15 ದಿನಗಳ ಕಾಲ ಐಸಿಯುನಲ್ಲಿ ಚಿಕಿತ್ಸೆ ಪಡೆದು ಸಾವು-ಬದುಕಿನ ನಡುವೆ ಹೋರಾಡಿ ಬದುಕುಳಿದಿದ್ದರು. ಇದನ್ನೂ ಓದಿ: ರಸ್ತೆಗಳನ್ನು ಕಂಗನಾ ಕೆನ್ನೆಗಿಂತ ಸುಗಮವಾಗಿಸುತ್ತೇನೆ: ಇರ್ಫಾನ್ ಅನ್ಸಾರಿ
Advertisement
Advertisement
ಚೇತರಿಸಿಕೊಂಡಲ್ಲಿ ಶಬರಿಮಲೆ ಅಯ್ಯಪ್ಪ ಸ್ವಾಮಿಗೆ ವಜ್ರದ ಕಿರೀಟವನ್ನ ನೀಡುವುದಾಗಿ ಹರಕೆ ಹೊತ್ತಿದ್ದರು. ಅದೇ ರೀತಿಯಾಗಿ ಆ ಹರಕೆಯ ಭಾಗವಾಗಿ ಚಿನ್ನದ ಕಿರೀಟವನ್ನ ದೇವಾಲಯಕ್ಕೆ ಕಾಣಿಕೆಯಾಗಿ ನೀಡಿದ್ದಾರೆ. ಅಯ್ಯಪ್ಪನ ಆಶೀರ್ವಾದಿಂದಲೇ ನಾನು ಮತ್ತೆ ಬದುಕಲು ಸಾಧ್ಯವಾಯಿತು ಎಂದು ವೆಂಕಟಸುಬ್ಬಯ್ಯ ಅವರು ಹೇಳಿದ್ದಾರೆ. ಈ ಕಿರೀಟದ ನಿಖರವಾದ ಬೆಲೆ ಎಷ್ಟು ಎನ್ನುವ ಮಾಹಿತಿ ಇಲ್ಲ.