ಲಕ್ನೋ: ಯೋಗಿ ಆದಿತ್ಯನಾಥ್ ಗೋರಖ್‍ಪುರದಲ್ಲಿಯೇ ಇರಲಿ. ಅಲ್ಲಿಂದ ಮತ್ತೆ ಬರುವ ಅವಶ್ಯಕತೆ ಇಲ್ಲ ಎಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಹೇಳಿದರು.
ಮುಂದಿನ ತಿಂಗಳು ಚುನಾವಣೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಗೋರಖ್‍ಪುರ (ನಗರ) ಕ್ಷೇತ್ರದಿಂದ ಸ್ಪರ್ಧಿಸುತ್ತಿರುವುದಾಗಿ ಘೋಷಿಸಿದ ಕೆಲವೇ ಹೊತ್ತಲ್ಲಿ ಅಖಿಲೇಶ್ ಯಾದವ್ ವಾಗ್ದಾಳಿ ನಡೆಸಿದರು. ಈ ಮುನ್ನ ಯೋಗಿ ಆದಿತ್ಯನಾಥ್ ಅವರು ಅಯೋಧ್ಯೆಯಿಂದ ಸ್ಪರ್ಧಿಸುತ್ತಾರೆ ಅಥವಾ ಮಥುರಾದಿಂದ ಸ್ಪರ್ಧಿಸುತ್ತಾರೆ ಅಥವಾ ಪ್ರಯಾಗ್‍ರಾಜ್‍ನಿಂದ ಸ್ಫರ್ಧಿಸುತ್ತಾರೆ ಎಂದು ಹೇಳುತ್ತಿದ್ದರು. ಈಗ ನೋಡಿ ಬಿಜೆಪಿ ಅವರನ್ನು ಗೋರಖ್‍ಪುರಕ್ಕೆ ಕಳುಹಿಸಿದೆ. ಎಂದು ನಾನು ಇಷ್ಟಪಡುತ್ತೇನೆ (ಮುಖ್ಯಮಂತ್ರಿ ) ಗೋರಖ್‍ಪುರಕ್ಕೆ. ಯೋಗಿ ಅಲ್ಲಿಯೇ ಇರಲಿ. ಅಲ್ಲಿಂದ ಅವರು ಮತ್ತೆ ಬರುವ ಅವಶ್ಯಕತೆ ಇಲ್ಲ. ನಾನು ಅವರನ್ನು ಅಲ್ಲಿಯೇ ನೋಡಲು ಬಯಸುತ್ತೇನೆ ಎಂದು ವ್ಯಂಗ್ಯವಾಡಿದರು.
Advertisement
Advertisement
ಅಖಿಲೇಶ್ ಯಾದವ್ ಅವರ ನೇತೃತ್ವದ ಸಮಾಜವಾದಿ ಪಕ್ಷ ಉತ್ತರಪ್ರದೇಶದ ಮರುಚುನಾವಣೆಯ ಬಿಜೆಪಿಗೆ ದೊಡ್ಡ ಸವಾಲಾಗಿ ಎದುರಾಗಿದೆ. ಕಳೆದ ಕೆಲವು ತಿಂಗಳಿನಿಂದ ಅಖಿಲೇಶ್ ಯಾದವ್ ಹಾಗೂ ಯೋಗಿ ಆದಿತ್ಯನಾಥ್ ರಾಜಕೀಯ ವಾಗ್ದಾಳಿ ನಡೆಸಲು ಆರಂಭಿಸಿದ್ದಾರೆ. ಅಲ್ಲದೇ ಶುಕ್ರವಾರ ಈ ಚುನಾವಣೆ 80 ವರ್ಸಸ್ 20 ಆಗಿದೆ ಎಂಬ ಯೋಗಿ ಆದಿತ್ಯನಾಥ್ ಅವರು ಹೇಳಿಕೆಗೆ ವ್ಯಾಪಕವಾಗಿ ಆಕ್ರೋಶ ವ್ಯಕ್ತವಾಗಿತ್ತು. ಇದನ್ನೂ ಓದಿ: ರಸ್ತೆಗಳನ್ನು ಕಂಗನಾ ಕೆನ್ನೆಗಿಂತ ಸುಗಮವಾಗಿಸುತ್ತೇನೆ: ಇರ್ಫಾನ್ ಅನ್ಸಾರಿ
Advertisement
Advertisement
ರಾಷ್ಟ್ರೀಯತೆ, ಉತ್ತಮ ಆಡಳಿತ ಮತ್ತು ಅಭಿವೃದ್ಧಿಗೆ ಒಲವು ತೋರುವ ಶೇ 80 ಮತದಾರರು ತಮ್ಮ ಪಕ್ಷಕ್ಕೆ ಮತ ಹಾಕುತ್ತಾರೆ. ಆದರೆ ರಾಷ್ಟ್ರೀಯತೆ, ಅಭಿವೃದ್ಧಿಯ ವಿರುದ್ಧ ಇರುವವರು ತಮ್ಮ ಪಕ್ಷಕ್ಕೆ ಮತ ಹಾಕುವುದಿಲ್ಲ ಅವರು ಗೂಂಡಾಗಳಿಗೆ ಬೆಂಬಲ ನೀಡುತ್ತಾರೆ ಎಂದು ಹೇಳಿದ್ದರು. ಇದನ್ನೂ ಓದಿ: ಅಯೋಧ್ಯೆ ಅಲ್ಲ, ಗೋರಖ್‌ಪುರ ಕ್ಷೇತ್ರದಿಂದ ಯೋಗಿ ಆದಿತ್ಯನಾಥ್ ಸ್ಪರ್ಧೆ
ಸ್ಪರ್ಧೆಯು ಬಹಳ ಮುಂದಕ್ಕೆ ಸಾಗಿದೆ. ಹೋರಾಟವು ಈಗ 80 ವರ್ಸಸ್ 20 ಆಗಿದೆ ಎಂದು ಅವರು ಸೂಕ್ಷ್ಮವಾಗಿ ರಾಜ್ಯದಲ್ಲಿ 19 ರಷ್ಟು ಮುಸ್ಲಿಂ ಜನಸಂಖ್ಯೆಯ ಬಗ್ಗೆ ಮಾತನಾಡಿದ್ದಾರೆ. ಶೇ. 80ರಷ್ಟು ಜನ ಯಾವಾಗಲೂ ಧನಾತ್ಮಕ ಮತ್ತು ಅಭಿವೃದ್ಧಿ – ಪರರಾಗಿರುತ್ತಾರೆ ಎಂದಿದ್ದರು.