ಬೆಂಗಳೂರು: ನಮೋ ಎಂದರೆ ನಮಗೆ ಮೋಸ ಎಂದಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ಬಿಜೆಪಿ ದಿಕ್ಕೆಟ್ಟ ಗುಲಾಮ ಎಂದು ಕರೆಯುವ ಮೂಲಕ ತಿರುಗೇಟು ನೀಡಿದೆ.
ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ‘ಸೀದಾ ರುಪಯ್ಯ ಸರ್ಕಾರ್’ ಎಂದು ಲೇವಡಿ ಮಾಡಿದ್ದ ವಿಚಾರವನ್ನು ಪ್ರಸ್ತಾಪಿಸಿದ ಗುಂಡೂರಾವ್, ನಮೋ ಎಂದರೆ ‘ನಮಗೆ ಮೋಸ’ ಎಂದರ್ಥ. ನೋಟ್ ಬ್ಯಾನ್ ಕ್ರಮ, ನೀರವ್ ಮೋದಿ ಮತ್ತು ಇತರರಿಂದ ಬ್ಯಾಂಕ್ ಲೂಟಿಯಾದ್ದರಿಂದ ದೇಶದ ಜನತೆಗೆ ಮೋಸವಾಗಿದೆ ಎಂದು ವಾಗ್ದಾಳಿ ನಡೆಸಿದ್ದರು.
Advertisement
"ನಮೋ ಎಂದರೆ 'ನಮಗೆ ಮೋಸ'
ನಮ್ಮ ಕರ್ನಾಟಕಕ್ಕೆ ಮೋಸ
ನಮೋ ಅವರೇ, ರೈತರಿಗೆ, ಯುವಕರಿಗೆ, ಎಲ್ಲರಿಗೂ ಮೋಸ ಮಾಡೋದು ನಿಲ್ಲಿಸಿ. ಕೆಲಸ ಮಾಡಿ": @dineshgrao #ModiMosa pic.twitter.com/9vNbxKI3Qm
— Karnataka Congress (@INCKarnataka) February 28, 2018
Advertisement
ಇದಕ್ಕೆ ಟಾಂಗ್ ಎನ್ನುವಂತೆ ಬಿಜೆಪಿ ‘ದಿಗು’ ಎಂದರೆ ‘ದಿಕ್ಕೆಟ್ಟ ಗುಲಾಮ’ ಎಂದು ಕರೆದಿದೆ. ಈ ಸಂಬಂಧ ಬಿಜೆಪಿ ಕರ್ನಾಟಕ ಟ್ವೀಟ್ ಮಾಡಿ, ‘ದಿಗು’ ರವರೆ, ಗಾಂಧಿ ಕುಟುಂಬದ ಗುಲಾಮಗಿರಿ ಬಿಟ್ಟು, ಕನ್ನಡಿಗರಂತೆ ಸ್ವಾಭಿಮಾನದಿಂದ ಬದುಕುವುದನ್ನು ಕಲಿಯಿರಿ. ಇನ್ನೂ ನೀವೊಬ್ಬ ಯುವ ನಾಯಕ ಎಂಬ ಭ್ರಮೆಯಿಂದ ಹೊರಬಂದು ಪ್ರಬುದ್ಧ ರಾಜಕೀಯವನ್ನು ಇನ್ನಾದರೂ ಕಲಿಯಿರಿ ಎಂದು ಬರೆದು ತಿರುಗೇಟು ನೀಡಿದೆ.
Advertisement
'ದಿಗು' ಎಂದರೆ 'ದಿಕ್ಕೆಟ್ಟ ಗುಲಾಮ'
'ದಿಗು' ರವರೆ, ಗಾಂಧಿ ಕುಟುಂಬದ ಗುಲಾಮಗಿರಿ ಬಿಟ್ಟು, ಕನ್ನಡಿಗರಂತೆ ಸ್ವಾಭಿಮಾನದಿಂದ ಬುದುಕುವುದನ್ನು ಕಲಿಯಿರಿ.
ಇನ್ನೂ ನೀವೊಬ್ಬ ಯುವ ನಾಯಕ ಎಂಬ ಭ್ರಮೆಯಿಂದ ಹೊರಬಂದು ಪ್ರಬುದ್ಧ ರಾಜಕೀಯವನ್ನು ಇನ್ನಾದರೂ ಕಲಿಯಿರಿ. https://t.co/GXyVL1d5rS
— BJP Karnataka (@BJP4Karnataka) March 1, 2018
Advertisement