ಚಾಮರಾಜನಗರ: ಸಚಿವ ಈಶ್ವರಪ್ಪ, ಪ್ರಮೋದ್ ಮುತಾಲಿಕ್ ಇವರೆಲ್ಲರೂ ದೇಶದ ತಾಲಿಬಾನಿಗಳು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್ ವಾಗ್ದಾಳಿ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಕೆ.ಎಸ್. ಈಶ್ವರಪ್ಪ ಅವರನ್ನು ಕೂಡಲೇ ಬಂಧಿಸಬೇಕು. ಅವರು ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಿದ್ದಾರೆ. ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 326 ದೇಶದ್ರೋಹ ಪ್ರಕರಣ ದಾಖಲಾಗಿದೆ. ಸರ್ಕಾರದ ವಿರುದ್ಧ ಮಾತಾಡಿದರೆ ದೇಶದ್ರೋಹ ಪ್ರಕರಣ ದಾಖಲಿಸುತ್ತಾರೆ. ಬಿಜೆಪಿಯವರು ಸ್ವಯಂ ಘೋಷಿತ ಹುಸಿ ದೇಶ ಭಕ್ತರು ಎಂದು ಟೀಕಿಸಿದರು. ಇದನ್ನೂ ಓದಿ: ಕಲಾಪ ಹಾಳು ಮಾಡುತ್ತಿರುವವರನ್ನು ಸದನದಿಂದ ಹೊರಹಾಕಿ: ಹೆಚ್‍ಡಿಕೆ
ಬಿಜೆಪಿ ಅವರು ವಿಧಾನಸಭೆಯಲ್ಲಿ ನಿಮ್ಮಪ್ಪ ಎನ್ನುವ ಪದ ಉಪಯೋಗಿಸಿದ್ದಾರೆ. ಜೈಲಿಗೆ ಹೋಗಿದಿರಿ ಅಂತಿರಿ. ನಿಮ್ಮ ಪಕ್ಷದವರು ಜೈಲಿಗೆ ಹೋಗಿಲ್ವಾ? ಅಮಿತ್ ಶಾ ಎರಡು ವರ್ಷ ಜೈಲಿನಲ್ಲಿ ಇರಲಿಲ್ವಾ. ಡಿಕೆಶಿ ಒಬ್ರೇನೆ ಜೈಲಿನಲ್ಲಿದ್ರಾ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಕರ್ನಾಟಕದಲ್ಲಿ ಹೂಡಿಕೆ ಮಾಡಲು ತೈವಾನ್ ಕಂಪನಿಗಳಿಗೆ ನಿರಾಣಿ ಆಹ್ವಾನ
ಕೊಳಚೆ ಬಾಯಲ್ಲಿ ಸುಗಂಧ ಬರಲ್ಲ ದುರ್ವಾಸನೆಯೇ ಯಾವಾಗಲೂ ಬರೋದು ಎಂದು ಬಿಜೆಪಿಯನ್ನು ಕುಟುಕಿದ ಅವರು, ಈಶ್ವರಪ್ಪ ರಾಜೀನಾಮೆ ಕೊಡೋವರೆಗು ಕಾಂಗ್ರೆಸ್ ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದರು.