ನಾಲ್ಕುವರೆ ತಿಂಗಳ ನಂತರ ನಟ ಧ್ರುವ ಸರ್ಜಾ ಪತ್ನಿ ಪ್ರೇರಣಾ ತಮ್ಮ ಮಗಳ ಫೋಟೋವನ್ನು ಅಭಿಮಾನಿಗಳಿಗಾಗಿ ಹಂಚಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಸೋಷಿಯಲ್ ಮೀಡಿಯಾ ಮೂಲಕ ಮಗಳನ್ನು ಪರಿಚಯಿಸಿದ್ದಾರೆ. ಅಕ್ಟೋಬರ್ 2ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ಪ್ರೇರಣಾ, ತಮ್ಮ ಮನೆಗೆ ಮಹಾಲಕ್ಷ್ಮಿ ಬಂದಿದ್ದಾಳೆ ಎಂದು ಬರೆದುಕೊಂಡಿದ್ದರು.
Advertisement
ಧ್ರುವ ಸರ್ಜಾ ಪುತ್ರಿ ಹೇಗಿರಬಹುದು ಎನ್ನುವ ಕುತೂಹಲ ಅವರ ಅಭಿಮಾನಿಗಳಲ್ಲಿ ಇದ್ದೇ ಇತ್ತು. ಆಗಾಗ್ಗೆ ಮಗಳ ಬಗ್ಗೆ ಮಾಹಿತಿಯನ್ನೂ ಅಭಿಮಾನಿಗಳು ಕೇಳುತ್ತಿದ್ದರು. ಯಾವಾಗ ಮಗಳ ಮುಖವನ್ನು ತೋರಿಸುತ್ತೀರಿ ಎಂದು ಹಲವಾರು ಬಾರಿ ಪ್ರಶ್ನೆ ಮಾಡಿದ್ದೂ ಇದೆ. ಆ ಅಭಿಮಾನಿಗಳ ಆಸೆಯನ್ನು ಇದೀಗ ಅವರು ಈಡೇರಿಸಿದ್ದಾರೆ. ಮಗಳಿಗೆ ನಿಮ್ಮೆಲ್ಲರ ಪ್ರೀತಿ ಇರಲಿ ಎಂದು ಪ್ರೇರಣಾ ಕೇಳಿಕೊಂಡಿದ್ದಾರೆ. ಇದನ್ನೂ ಓದಿ: ನಾನು ಕೂಡ ʻಕಾಂತಾರʼ ಸಿನಿಮಾ ನೋಡಿದೆ: ಅಮಿತ್ ಶಾ
Advertisement
Advertisement
ಧ್ರುವ ಸರ್ಜಾ ಸದ್ಯ ‘ಕೆಡಿ’ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರೀಕರಣದ ನಡುವೆಯೂ ಮಗಳಿಗಾಗಿ ಒಂದಷ್ಟು ಸಮಯವನ್ನು ಮೀಸಲಿಡುತ್ತಾರಂತೆ. ನಾಲ್ಕುವರೆ ತಿಂಗಳ ಮಗುವಿನ ಜೊತೆ ಆಟ ಆಡುವುದೇ ಸೊಗಸು ಎಂದು ಹಲವಾರಿ ಬಾರಿ ಅವರ ಆಪ್ತರ ಜೊತೆ ಮಾತನಾಡಿದ್ದಾರೆ. ತಮ್ಮ ಮಗಳು ಮತ್ತು ಸಹೋದರ ಚಿರು ಸರ್ಜಾ ಮಗನ ಜೊತೆ ಧ್ರುವ ವೀಕೆಂಡ್ ಅನ್ನು ಕಳೆಯುತ್ತಾರಂತೆ.
Advertisement
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k