ಬೆಂಗಳೂರು: ಪ್ರತೀ ಚಿತ್ರ, ಅದರಲ್ಲಿನ ಗೆಟಪ್ಪುಗಳನ್ನು ಅಭಿಮಾನಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡೇ ನಿರ್ಧಾರ ಮಾಡುತ್ತಾ ಬಂದಿರುವವರು ಧ್ರುವ ಸರ್ಜಾ. ಬಹುಶಃ ಧ್ರುವ ಅವರು ಈ ಪಾಟಿ ಅಭಿಮಾನಿ ಬಳಗವನ್ನು ಹೊಂದಿರೋದಕ್ಕೆ, ಅವರನ್ನು ಪ್ರತೀ ಹಂತದಲ್ಲಿಯೂ ತೃಪ್ತಗೊಳಿಸುತ್ತಿರೋದಕ್ಕೆ ಇಂಥಾ ಮನಸ್ಥಿತಿಯೇ ಮೂಲಕ ಕಾರಣ.
ಇದೀಗ ಪೊಗರು ಚಿತ್ರದಲ್ಲಿನ ಧ್ರುವ ಸರ್ಜಾ ಗೆಟಪ್ಪಿನದ್ದೊಂದು ಫೋಟೋ ಜಾಹೀರಾಗಿದೆ. ಅದು ಅಭಿಮಾನಿಗಳನ್ನೆಲ್ಲ ಹುಚ್ಚೆಬ್ಬಿಸಿ ಬಿಟ್ಟಿದೆ!
ನೀಳವಾದ ಗಡ್ಡ ಮತ್ತು ತಲೆಗೂದಲು ಬಿಟ್ಟಿರೋ ಧ್ರುವ ರಗಡ್ ಲುಕ್ಕಿನಲ್ಲಿ ಕಾಣಿಸಿಕೊಂಡಿದ್ದಾರೆ. ಪೊಗರು ಎಂಬ ಟೈಟಲ್ಲಿಗೆ ಪಕ್ಕಾ ಸೂಟ್ ಆಗುವಂತಿರೋ ಈ ಫೋಟೋವನ್ನು ಅಭಿಮಾನಿಗಳೆಲ್ಲ ಮೆಚ್ಚಿಕೊಂಡಿದ್ದಾರೆ. ಚಿತ್ರ ತಂಡ ಈ ಫಸ್ಟ್ ಲುಕ್ ಫೋಟೋ ಬಿಡುಗಡೆ ಮಾಡಿದ ಕ್ಷಣಾರ್ಧದಲ್ಲಿಯೇ ಅದು ವೈರಲ್ ಆಗೋವಷ್ಟರ ಮಟ್ಟಿಗೆ ಅದನ್ನು ಅಭಿಮಾನಿಗಳೆಲ್ಲ ಇಷ್ಟಪಟ್ಟಿದ್ದಾರೆ.
ತಮ್ಮ ತಾಯಿಗೆ ಅನಾರೋಗ್ಯವಿದ್ದುದರಿಂದಲೇ ಧ್ರುವ ಪೊಗರು ಚಿತ್ರದ ಚಿತ್ರೀಕರಣದಿಂದ ದೂರ ಉಳಿದುಕೊಂಡಿದ್ದರು. ಆದರೀಗ ಅಮ್ಮನ ಆರೋಗ್ಯದಲ್ಲಿ ಚೇತರಿಕೆ ಕಾಣಿಸಿಕೊಂಡಿದೆ. ಈ ಹೊತ್ತಿನಲ್ಲಿಯೇ ಪೊಗರು ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರೋ ಧ್ರುವ ಇನ್ನು ಇಪ್ಪತ್ತು ದಿನಗಳ ಕಾಲ ಚಿತ್ರೀಕರಣ ಬಿಟ್ಟು ಆಚೀಚೆ ಕದಲೋದಿಲ್ಲ. ನಿರ್ದೇಶಕ ನಂದ ಕಿಶೋರ್ ಕೂಡಾ ಅದಕ್ಕೆ ಪೂರಕವಾದ ತಯಾರಿ ಮಾಡಿಕೊಂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv