ಹಿರಿಯ ನಟ ಹರೀಶ್ ರಾಯ್ (Harish Roy) ಅನಾರೋಗ್ಯದಿಂದ ಬಳಲುತ್ತಿದ್ದಾರೆ. ತಮ್ಮ ಚಿಕಿತ್ಸೆಗಾಗಿ ಆರ್ಥಿಕ ನೆರವಿಗಾಗಿ ಸಹಾಯವನ್ನ ಕೇಳಿದ್ದರು. ಈ ವಿಡಿಯೋ ವೈರಲ್ ಆ ಬೆನ್ನಲ್ಲೇ ನಟ ಧ್ರುವ ಸರ್ಜಾ (Dhruva Sarja) ನಟ ಹರೀಶ್ ರಾಯ್ ಸಹಾಯಕ್ಕೆ ನಿಂತಿದ್ದಾರೆ. ಅವರ ಆಸ್ಪತ್ರೆಯ ಖರ್ಚನ್ನ ಭರಿಸುವುದಾಗಿ ಹೇಳಿದ್ದಾರೆ. ಈ ಬಗ್ಗೆ ವಿಡಿಯೋ ಮೂಲಕ ನಟ ಧ್ರುವ ಸರ್ಜಾ ಅವರಿಗೆ ಧನ್ಯವಾದವನ್ನ ಹೇಳಿದ್ದಾರೆ ಹರೀಶ್ ರಾಯ್.
ಹರೀಶ್ ರಾಯ್ ಅವರಿಗೆ ಥೈರಾಯ್ಡ್ ಕ್ಯಾನ್ಸರ್ ಹೊಟ್ಟೆಗೆ ಹರಡಿ ಈಗ ಹೊಟ್ಟೆಯಲ್ಲಿ ನೀರು ತುಂಬಿಕೊಂಡಿದೆ. ಇದಕ್ಕೆ ಸೂಕ್ತ ಚಿಕಿತ್ಸೆ ನೀಡಿದ್ರೆ ವಾಸಿಯಾಗುವ ಭರವಸೆಯನ್ನ ವೈದ್ಯರು ನೀಡಿದ್ದಾರೆ. ಇದನ್ನೂ ಓದಿ: ಹದಗೆಟ್ಟ ಅನಾರೋಗ್ಯ.. ಉಲ್ಬಣಗೊಂಡ ಕ್ಯಾನ್ಸರ್: ಸಹಾಯ ಕೇಳಿ ಕಣ್ಣೀರಿಟ್ಟ KGF ಚಾಚಾ
ಹರೀಶ್ ರಾಯ್ ಅವರಿಗೆ ನೀಡಬೇಕಾದ ಚಿಕಿತ್ಸೆ ದುಬಾರಿಯಾಗಿದ್ದು, ಒಂದೊಂದು ಇಂಜೆಕ್ಷನ್ ಬೆಲೆ ಮೂರುವರೆ ಲಕ್ಷ ರೂಪಾಯಿಗಳದ್ದು ಎಂದು ಈ ಹಿಂದೆ ಪಬ್ಲಿಕ್ ಟಿವಿಗೆ ಹೇಳಿಕೊಂಡಿದ್ದರು. ಜೊತೆಗೆ ಹರೀಶ್ ರಾಯ್ ಅವರಿಗೆ ತುರ್ತಾಗಿ ಚಿಕಿತ್ಸೆ ಕೂಡಾ ಪ್ರಾರಂಭಿಸಬೇಕಿದೆ ಎಂದು ವೈದ್ಯರು ಸಲಹೆಯನ್ನ ನೀಡಿದ್ದಾರಂತೆ. ಹೀಗಾಗಿ ಚಿತ್ರರಂಗದವರ ನೆರವನ್ನ ಕೇಳಿದ್ದರು ಹರೀಶ್ ರಾಯ್.
ಹರೀಶ್ ರಾಯ್ ಕಷ್ಟದ ಈ ಸಂದರ್ಭಕ್ಕೆ ನಟ ಧ್ರುವ ಸರ್ಜಾ ಮಿಡಿದಿದ್ದಾರೆ. ಹರೀಶ್ ರಾಯ್ ಅವರ ಆಸ್ಪತ್ರೆ ಖರ್ಚು ಭರಿಸುತ್ತೇನೆ ಎಂದು ಮಾತು ಕೊಟ್ಟಿದ್ದಾರೆ ಎನ್ನಲಾಗ್ತಿದೆ. ಈ ಹಿಂದೆ ಕೆಜಿಎಫ್ ಸಿನಿಮಾ ಶೂಟಿಂಗ್ ವೇಳೆ ಅಂದರೆ ಮೂರು ವರ್ಷಗಳ ಹಿಂದೆ ಕ್ಯಾನ್ಸರ್ ಚಿಕಿತ್ಸೆಗಾಗಿ ನಟ ಯಶ್, ದರ್ಶನ್ ಹಾಗೂ ದುನಿಯಾ ವಿಜಯ್ ಸಹಾಯ ಮಾಡಿದ್ದರು ಎಂದು ನಟ ಹರೀಶ್ ರಾಯ್ ತಿಳಿಸಿದ್ದರು.