ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva sarja) ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅಣ್ಣ ಚಿರು ಮತ್ತು ಅಜ್ಜಿಯ ಸಾವಿನ ಶಾಕ್ ನಂತರ ಮತ್ತೆ ಚಿತ್ರಗಳಲ್ಲಿ ಆಕ್ಟೀವ್ ಆಗಿದ್ದಾರೆ. `ಮಾರ್ಟಿನ್’ (Martin) ಸಿನಿಮಾ ಮುಗಿಯುತ್ತಿದ್ದಂತೆ ಸ್ಟಾರ್ ಡೈರೆಕ್ಟರ್ ಪ್ರೇಮ್ ಜೊತೆ ಸಿನಿಮಾ ಮಾಡೋಕೆ ಧ್ರುವ ರೆಡಿಯಾಗಿದ್ದಾರೆ. ಇದರ ಜೊತೆ ಮತ್ತೊಂದು ಬ್ರೇಕಿಂಗ್ ನ್ಯೂಸ್ ಅಂದ್ರೆ ಪ್ರಿನ್ಸ್ ಮುಂದೆ ಅಬ್ಬರಿಸಲು ಅಧೀರ ಸಂಜಯ್ ದತ್ (Sanjay dutt) ಎಂಟ್ರಿ ಕೊಡ್ತಿದ್ದಾರೆ.
ಚಿರು ಮತ್ತು ಅಜ್ಜಿಯ ಸಾವಿನ ನಂತರ ಧ್ರುವಾ ಕೊಂಚ ಸೈಲೆಂಟ್ ಆಗಿದ್ದಾರೆ. ನೋವಿನ ನಡುವೆ ಇದೀಗ ಹೊಸ ಅತಿಥಿಯ ಆಗಮನದ ಖುಷಿಯಲ್ಲಿದ್ದಾರೆ. ಮತ್ತೆ ಸಿನಿಮಾಗಳಲ್ಲಿ ಆಕ್ಟೀವ್ ಆಗಿದ್ದಾರೆ. ಸದ್ಯ `ಮಾರ್ಟಿನ್’ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಈ ಚಿತ್ರ ಮುಗಿಯುತ್ತಿದ್ದಂತೆ, ನಿರ್ದೇಶಕ ಪ್ರೇಮ್ ಜೊತೆ ಧ್ರುವ ಕೈ ಜೋಡಿಸಲಿದ್ದಾರೆ. ಮತ್ತೊಂದು ವಿಶೇಷ ಅಂದ್ರೆ ಚಿತ್ರದಲ್ಲಿ ಧ್ರುವ ಸರ್ಜಾಗೆ ಟಕ್ಕರ್ ಕೊಡಲು ಸಂಜಯ್ ದತ್ ಸಜ್ಜಾಗಿದ್ದಾರೆ. ಇದನ್ನೂ ಓದಿ:ನಿನ್ನ ತಲೆಯ ಮೇಲೆ ತೆಂಗಿನಕಾಯಿ ಒಡೆದು ಬಿಗ್ ಬಾಸ್ ಮನೆಯಿಂದ ಹೋಗ್ತೀನಿ: ಸೋನುಗೆ ಗುರೂಜಿ ವಾರ್ನಿಂಗ್

ʻಕೆವಿಎನ್ʼ ಪ್ರೊಡಕ್ಷನ್ ನಿರ್ಮಾಣದ 1970ರ ಕಾಲಘಟ್ಟದ ಕಥೆಯಲ್ಲಿ ಧ್ರುವ ಮತ್ತು ಸಂಜಯ್ ದತ್ ಕಾಂಬಿನೇಷನ್ ನೋಡಲು ಅಭಿಮಾನಿಗಳು ಕಾಯ್ತಿದ್ದಾರೆ.



