ಸ್ಯಾಂಡಲ್‌ವುಡ್‌ನ `ಪೊಗರು’ ಹೀರೋ ಧ್ರುವಾ ಸರ್ಜಾ ಸದ್ಯ `ಮಾರ್ಟಿನ್’ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಎ.ಪಿ ಅರ್ಜುನ್ ಜತೆ ಆ್ಯಕ್ಷನ್ ಸಿಕ್ವೇನ್ಸ್ ಚಿತ್ರೀಕರಣಕ್ಕಾಗಿ ಭರ್ಜರಿ ತಯಾರಿ ಮಾಡಿಕೊಂಡಿದ್ದಾರೆ.

ಮಾರ್ಟಿನ್‌ಗಾಗಿ ಒಂದಾಗಿರುವ ಧ್ರುವಾ ಮತ್ತು ಎ.ಪಿ ಅರ್ಜುನ್ ಸದ್ಯ ಈ ಚಿತ್ರದ ಕೊನೆಯ ಹಂತದ ಚಿತ್ರೀಕರಣಕ್ಕೆ ಬಂದು ತಲುಪಿದೆ. ಸೆಪ್ಟೆಂಬರ್ ೩೦ಕ್ಕೆ ತೆರೆಗೆ ಬರಲಿರುವ ಈ ಚಿತ್ರದ ಆ್ಯಕ್ಷನ್ ಸಿಕ್ವೇನ್ಸ್ ಮತ್ತು ಎರಡು ಹಾಡು ಬಾಕಿಯಿದೆ. ಸ್ಟಂಟ್ ಮಾಸ್ಟರ್ ರವಿ ವರ್ಮಾ ಸಾರಥ್ಯದಲ್ಲಿ ಆ್ಯಕ್ಷನ್ ಸೀನ್ಸ್ ಮೂಡಿಬರಲಿದ್ದು, ಇದಕ್ಕಾಗಿ ಭರ್ಜರಿ ತಯಾರಿ ನಡೆಯುತ್ತಿದೆ. ಜತೆಗೆ ಜನಪ್ರಿಯ ಸ್ಟಂಟ್ ಮಾಸ್ಟರ್ಸ್ ರಾಮ ಲಕ್ಷ್ಮಣ ಕೂಡ ಚಿತ್ರತಂಡಕ್ಕೆ ಸಾಥ್ ನೀಡುತ್ತಿದ್ದಾರೆ.



