ದುಬೈ: ಕೂಲ್ ಕ್ಯಾಪ್ಟನ್ ಎಂದೇ ಖ್ಯಾತಿ ಪಡೆದಿರುವ ಧೋನಿ ಅಫ್ಘಾನ್ ವಿರುದ್ಧ ಪಂದ್ಯದಲ್ಲಿ ಬೌಲರ್ ಕುಲ್ದೀಪ್ ಯಾದವ್ ವಿರುದ್ಧ ಸಿಡಿಮಿಡಿಗೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹೌದು, ಇಂಡೋ ಅಫ್ಘಾನ್ ಪಂದ್ಯದಲ್ಲಿ ಬರೋಬ್ಬರಿ 696 ದಿನಗಳ ಬಳಿಕ ನಾಯಕತ್ವ ವಹಿಸಿದ ಧೋನಿ ನಾನು ಕೋಪಗೊಂಡರೆ ಹೇಗಿರುತ್ತೆ ಎಂಬುವುದನ್ನು ತೋರಿಸಿದ್ದಾರೆ.
Advertisement
ಪಂದ್ಯದ ವೇಳೆ ಧೋನಿ ಯುವ ಸ್ಪಿನ್ ಬೌಲರ್ ಕುಲ್ದೀಪ್ ಯಾದವ್‍ಗೆ ಬೌಲಿಂಗ್ ಮಾಡಲು ಬಾಲ್ ನೀಡಿದ್ದು, ವೇಳೆ ಯಾದವ್ ಫೀಲ್ಡಿಂಗ್ ಬದಲಾವಣೆ ಮಾಡಲು ತಿಳಿಸಿದ್ದರು. ಇದರಿಂದ ತಾಳ್ಮೆ ಕಳೆದುಕೊಂಡ ಧೋನಿ ಬೌಲಿಂಗ್ ಮಾಡ್ತಿಯಾ, ಇಲ್ಲ ಬೌಲರ್ ಬದಲಾಯಿಸಲಾ ಎಂದು ಹೇಳಿದ್ದಾರೆ. ಧೋನಿಯ ಕೋಪ ಕಂಡ ಯಾದವ್ ಮರು ಮಾತನಾಡದೇ ಬೌಲಿಂಗ್ ಮಾಡಿದ್ದಾರೆ. ಕುಲ್ ದೀಪ್ ಯಾದವ್‍ಗೆ ಧೋನಿ ಕೋಪದಿಂದ ಹೇಳಿರುವ ಮಾತು ಸ್ಟಂಪ್ ಮೈಕ್‍ನಲ್ಲಿ ಸೆರೆಯಾಗಿದೆ. ಈ ಪಂದ್ಯದಲ್ಲಿ ಕುಲ್ದೀಪ್ ಯಾದವ್ 2 ವಿಕೆಟ್ ಪಡೆದು ಮಿಂಚಿದ್ದಾರೆ.
Advertisement
Kuldeep Yadav asking Dhoni to change fielder's location
Dhoni : "Bowling karega ya bowler change kare". ????????#INDvAFG #AsiaCup2018 pic.twitter.com/mlYzatzKAS
— Amit ???????? (@hey_Amit_) September 25, 2018
Advertisement
ಇದೇ ಮೊದಲಲ್ಲ: ಧೋನಿ ಕುಲ್ದೀಪ್ ಯಾದವ್ ನಡುವೆ ಈ ರೀತಿಯ ಸಂಭಾಷಣೆ ನಡೆದಿರುವುದು ಇದೇ ಮೊದಲಲ್ಲ. 2017 ರ ಶ್ರೀಲಂಕಾ ವಿರುದ್ಧ ಪಂದ್ಯದಲ್ಲಿಯೂ ಧೋನಿ ಹಾಗೂ ಯಾದವ್ ನಡುವೆ ಇದೇ ರೀತಿ ಸಂದರ್ಭ ಎದುರಿಸಿದ್ದರು. ಪಂದ್ಯದ ಬಳಿಕ ಯಾದವ್ ಇದನ್ನು ಬಹಿರಂಗ ಪಡಿಸಿದ್ದರು.
Advertisement
ಪಂದ್ಯದಲ್ಲಿ ಎದುರಾಳಿ ತಂಡವರು ನನ್ನ ಬೌಲಿಂಗ್ ನಲ್ಲಿ ಬೌಂಡರಿ, ಸಿಕ್ಸರ್ ಸಿಡಿಸಿದ್ದರು. ಮೈದಾನವೂ ತುಂಬ ಚಿಕ್ಕದಾಗಿದ್ದರಿಂದ ಬಾಲ್ ಬಹುಬೇಗ ಬೌಂಡರಿ ಸೇರುತ್ತಿತ್ತು. ಇದರಿಂದ ನನಗೆ ತುಂಬಾ ನಿರಾಸೆಯಾಗಿತ್ತು. ಪಂದ್ಯದ ನಾಲ್ಕನೇ ಓವರ್ ನಲ್ಲಿ ಬ್ಯಾಟ್ಸ್ ಮನ್ ಸ್ವೀಪ್ ಮಾಡಿ ಬೌಂಡರಿ ಗಟ್ಟಿದ್ದ, ಈ ವೇಳೆ ನನ್ನ ಬಳಿ ಬಂದ ಧೋನಿ ಕವರ್ ಫೀಲ್ಡರ್ ಬದಲಾಯಿಸಿ ಡೀಪ್ ಗೆ ಕಳುಹಿಸುವಂತೆ ತಿಳಿಸಿದ್ದರು. ಆಗ ನಾನು ನಿರಾಕರಿಸಿದ್ದೆ. ಮರುಕ್ಷಣ ಕೋಪಗೊಂಡ ಧೋನಿ ನನಗೆ ಹುಚ್ಚು ಹಿಡಿದಿದೆ ಅಂದು ಕೊಂಡಿದ್ದೀಯಾ ಎಂದು ಪ್ರಶ್ನಿಸಿದ್ದರು ಎಂದು ಯಾದವ್ ಹೇಳಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv