– ಕ್ಯಾನ್ಸರ್ ಬಂದಾಗ ನನಗೂ ಭಯವಾಗಿತ್ತು
ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿಯಂತೆ ನನಗೆ ಈಗಿನ ನಾಯಕ ವಿರಾಟ್ ಕೊಹ್ಲಿ ಮತ್ತು ಎಂಎಸ್ ಧೋನಿ ಅವರು ಸಪೋರ್ಟ್ ಮಾಡಲಿಲ್ಲ ಎಂದು ಮಾಜಿ ಆಟಗಾರ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಹೇಳಿದ್ದಾರೆ.
ಸೌರವ್ ಗಂಗೂಲಿ ಅವರ ನಾಯಕ್ವದಲ್ಲಿ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದ ಯುವಿ, ನಂತರ ರಾಹುಲ್ ದ್ರಾವಿಡ್, ಸೆಹ್ವಾಗ್, ಗಂಭೀರ್, ಕೊಹ್ಲಿ, ಧೋನಿ ಅವರ ನಾಯಕತ್ವದಲ್ಲಿ ಪಂದ್ಯಗಳನ್ನು ಆಡಿದ್ದಾರೆ. ಆದರೆ ಕೊಹ್ಲಿ ಹಾಗೂ ಧೋನಿ ಅವರಿಗೆ ಹೋಲಿಸಿಕೊಂಡರೆ ನನಗೆ ಸೌರವ್ ಗಂಗೂಲಿ ಅವರು ಹೆಚ್ಚಿನ ಬೆಂಬಲ ನೀಡಿದ್ದಾರೆ ಎಂದು ಯುವರಾಜ್ ತಿಳಿಸಿದ್ದಾರೆ.
Advertisement
Advertisement
ನಾನು ಸೌರವ್ ಗಂಗೂಲಿ ಅವರ ನಾಯಕತ್ವದಲ್ಲಿ ಬಹಳ ಪಂದ್ಯಗಳನ್ನು ಆಡಿದ್ದೇನೆ. ಅವರು ನನಗೆ ಬಹಳ ಸಪೋರ್ಟ್ ಮಾಡಿದ್ದಾರೆ. ಅವರ ನಂತರ ಧೋನಿ ಅವರು ನಾಯಕತ್ವ ತೆಗೆದುಕೊಂಡರು. ಧೋನಿ ಮತ್ತು ಸೌರವ್ ನಡುವೆ ಒಬ್ಬರನ್ನು ಆಯ್ಕೆ ಮಾಡಲು ಬಹಳ ಕಷ್ಟವಾಗುತ್ತದೆ. ನನಗೆ ಸೌರವ್ ಅವರ ನಾಯಕತ್ವದಲ್ಲಿ ಬಹಳ ಒಳ್ಳೆಯ ನೆನಪುಗಳಿವೆ ಯಾಕೆಂದರೆ ಅವರು ನನಗೆ ಬಹಳ ಬೆಂಬಲ ನೀಡಿದ್ದಾರೆ. ಆದರೆ ಧೋನಿ ಮತ್ತು ಕೊಹ್ಲಿ ಅವರಿಂದ ನನಗೆ ಆ ರೀತಿಯ ಬೆಂಬಲ ಸಿಗಲಿಲ್ಲ ಎಂದು ಯುವಿ ಟಿವಿ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
Advertisement
Advertisement
ಈಗ ಸದ್ಯಕ್ಕೆ ಭಾರತ ತಂಡಕ್ಕೆ ಒಬ್ಬ ಒಳ್ಳೆಯ ವ್ಯಕ್ತಿ ಬೇಕು. ಆತ ಆಟಗಾರರ ಜೊತೆ ಮೈದಾನದ ಹೊರಗಿನ ವಿಚಾರಗಳ ಬಗ್ಗೆಯೂ ಮಾತನಾಡಬೇಕು. ಯಾಕೆಂದರೆ ಅವರ ಮೈದಾನದ ಹೊರಗಿನ ಕೆಲ ಸಮಸ್ಯೆಗಳು ಮೈದಾನದ ಒಳಗಿನ ಪ್ರದರ್ಶನವನ್ನು ಪ್ರತಿಬಿಂಬಿಸುತ್ತದೆ. ಈ ರೀತಿಯ ಒಬ್ಬ ವ್ಯಕ್ತಿ ಆಟಗಾರರ ವೈಯಕ್ತಿಕ ವಿಚಾರಗಳಲ್ಲಿ ಮಾರ್ಗದರ್ಶನ ನೀಡಬಲ್ಲರು ಎಂದು ಯುವಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆಟಗಾರ ಜೊತೆ ಅವರ ವೈಯಕ್ತಿಕ ಸಮಸ್ಯೆಗಳ ಬಗ್ಗೆ ಮಾತನಾಡಿ ಅವರನ್ನು ಉತ್ತಮ ವ್ಯಕ್ತಿಗಳನ್ನಾಗಿ ಮಾಡಬೇಕು. ನಮ್ಮ ಸಮಯದಲ್ಲಿ ನಮಗೆ ಪ್ಯಾಡಿ ಅಪ್ಟನ್ ಅವರು ಇದ್ದರು ಅವರು, ಭಯ, ವೈಫಲ್ಯದಂತ ಮೈದಾನ ಹೊರಗಿನ ವಿಚಾರಗಳ ಬಗ್ಗೆ ನಮ್ಮ ಬಳಿ ಮಾತನಾಡಿ ತುಂಬಾ ಸಹಾಯ ಮಾಡುತ್ತಿದ್ದರು. ಈಗಿನ ಭಾರತ ತಂಡಕ್ಕೆ ಪ್ಯಾಡಿಯಂತವರು ಬೇಕಾಗಿದ್ದಾರೆ ಎಂದು ಯುವರಾಜ್ ತಿಳಿಸಿದ್ದಾರೆ.
ಇದೇ ವೇಳೆ ಲಾಕ್‍ಡೌನ್ ಬಗ್ಗೆ ಮಾತನಾಡಿರುವ ಯುವರಾಜ್ ಅವರು, ಇದರಿಂದ ಅನುಕೂಲ ಮತ್ತು ಅನಾನುಕೂಲ ಎರಡು ಇದೆ. ವಿಶ್ವದಾದ್ಯಂತ ಕೊರೊನಾದಿಂದ ಬಹಳ ಜನರು ಸಾಯುತ್ತಿರುವುದನ್ನು ನೋಡಿದರೆ ನೋವು ಆಗುತ್ತೆ. ಈ ಸೋಂಕು ಬಹಳ ಬೇಗ ಹರಡುತ್ತಿದೆ. ಜನರು ಇದಕ್ಕೆ ಹೆದರದೆ ಸೂಕ್ತ ಹೆಲ್ತ್ ವೈಬ್‍ಸೈಟ್‍ಗಳಿಗೆ ಹೋಗಿ ಚೆಕ್ ಮಾಡಿ ಸೋಂಕಿನ ಬಗ್ಗೆ ತಿಳಿದುಕೊಳ್ಳಬೇಕು ಎಂದು ಯುವರಾಜ್ ಸಲಹೆ ನೀಡಿದ್ದಾರೆ.
ನನಗೂ ಕ್ಯಾನ್ಸರ್ ಬಂದಾಗ ನಾನೂ ಕೂಡ ತುಂಬಾ ಭಯಪಟ್ಟಿದೆ. ಆದರೆ ನಂತರ ಅದರ ಬಗ್ಗೆ ಸೂಕ್ತ ಮಾಹಿತಿ ಪಡೆದುಕೊಂಡೆ. ಸರಿಯಾದ ಆಸ್ಪತ್ರೆಗೆ ಹೋಗಿ ಗುಣಮುಖನಾದೆ. ಹಾಗೆ ಕೊರೊನಾ ವಿಚಾರವಾಗಿಯೂ ಯಾರೂ ಭಯಪಡಬೇಡಿ ಸರ್ಕಾರಿ ಹೆಲ್ತ್ ವೆಬ್‍ಸೈಟಿಗೆ ಹೋಗಿ ಮಾಹಿತಿ ಪಡೆಯಿರಿ. ಸೂಕ್ತ ಚಿಕಿತ್ಸೆ ಪಡೆದುಕೊಳ್ಳಿ ಎಂದು ಯುವಿ ಹೇಳಿದ್ದಾರೆ.
ಒಟ್ಟು ಭಾರತದ ಪರ 304 ಏಕದಿನ ಪಂದ್ಯಗಳನ್ನು ಆಡಿರುವ ಯುವಿ, ಗಂಗೂಲಿ ನಾಯಕತ್ವದಲ್ಲಿ 110 ಪಂದ್ಯ ಹಾಗೂ ಧೋನಿ ನಾಯಕತ್ವದಲ್ಲಿ 104 ಪಂದ್ಯಗಳನ್ನು ಆಡಿದ್ದಾರೆ. ಯುವರಾಜ್ ಅವರು ಕಳೆದ ವರ್ಷ ಎಲ್ಲಾ ಮಾದರಿ ಕ್ರಿಕೆಟ್‍ಗೆ ವಿದಾಯ ಹೇಳಿದ್ದರು. 2007ರ ಟಿ-20 ವಿಶ್ವಕಪ್ ಹಾಗೂ 2011ರ ವಿಶ್ವಕಪ್ ಅನ್ನು ಭಾರತ ಗೆಲ್ಲುವಲ್ಲಿ ಯುವಿ ಪ್ರಮುಖ ಪಾತ್ರವಹಿಸಿದ್ದರು.