– ಕೀಟಗಳಿಗೆ ಮೈಕ್ರೋ ಕ್ಯಾಮೆರಾ ಅಳವಡಿಸಲು ಪ್ಲ್ಯಾನ್
ಧಾರವಾಡ: ನೇಪಾಳದಲ್ಲಿ (Nepal) ಇತ್ತೀಚೆಗೆ ನಡೆದ ಪ್ರವಾಹ ದುರಂತದ ವೇಳೆ ಸಾಕಷ್ಟು ಜನ ಸಾವನ್ನಪ್ಪಿದರೆ, ಇನ್ನೂ ಅನೇಕರು ದೊಡ್ಡ ದೊಡ್ಡ ಕಟ್ಟಡಗಳಡಿ ಸಿಲುಕಿ ಅವರು ಪತ್ತೆಯೇ ಆಗಿಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕೀಟಗಳನ್ನು ಹೇಗೆ ಬಳಸಬಹುದು. ಅವುಗಳ ಮೂಲಕ ಕಟ್ಟಡ ಹಾಗೂ ಮಣ್ಣಿನಡಿ ಸಿಲುಕಿದ ವ್ಯಕ್ತಿಗಳನ್ನು ಹೇಗೆ ಪತ್ತೆ ಮಾಡಬಹುದು ಎಂಬುದನ್ನು ಧಾರವಾಡ ಕೃಷಿ ವಿಶ್ವವಿದ್ಯಾಲಯದ (Dharwad Agricultural University) ವಿದ್ಯಾರ್ಥಿಗಳು ತೋರಿಸಿಕೊಟ್ಟಿದ್ದಾರೆ.
ಹೌದು.. ಇಂಥದ್ದೊಂದು ಪ್ರಯೋಗವನ್ನು ಮಾಡಬಹುದು ಎಂಬುದನ್ನು ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ತೋರಿಸಿಕೊಟ್ಟಿದ್ದಾರೆ. ಶುಕ್ರವಾರದಿಂದ (ಸೆ.25) ಧಾರವಾಡದಲ್ಲಿ ಕೃಷಿ ಮೇಳ (Agricultural Fair) ಆರಂಭವಾಗಿದೆ. ಈ ಕೃಷಿ ಮೇಳದಲ್ಲಿ ವಿಸ್ಮಯಕಾರಿ ಕೀಟ ಪ್ರಪಂಚ ಎಂಬ ಕೀಟಗಳಿಂದ ಏನೆಲ್ಲ ಉಪಯೋಗ ಇದೆ ಎಂಬುದರ ಕುರಿತ ಮಾಹಿತಿಯು ಅನಾವರಣಗೊಂಡಿದೆ. ಇದರಲ್ಲಿ ಭೂಕಂಪ, ಕಟ್ಟಡ ದುರಂತ, ಪ್ರವಾಹ ಸಂದರ್ಭದಲ್ಲಿ ಕೀಟಗಳನ್ನು ಹೇಗೆ ಬಳಕೆ ಮಾಡಬಹದು ಎಂಬುದನ್ನು ಈ ವಿದ್ಯಾರ್ಥಿಗಳು ತೋರಿಸಿಕೊಟ್ಟಿದ್ದಾರೆ. ಇದನ್ನೂ ಓ ದಿ:ಸೋಪ್, ಶಾಂಪೂ, ಟೂತ್‌ಪೇಸ್ಟ್‌ನಲ್ಲೂ ವೆಜ್–ನಾನ್‌ವೆಜ್? ಖರೀದಿಗೂ ಮುನ್ನ ಇರಲಿ ಗಮನ
ಮನುಷ್ಯರು ಬೆರಳು ಆಡಿಸಲು ಬಾರದ ಜಾಗದಲ್ಲಿ ಕೀಟಗಳು ಸಹಜವಾಗಿ ನುಗ್ಗುತ್ತವೆ. ಕಟ್ಟಡ ದುರಂತವಾದಾಗ, ಭೂಕಂಪನಗಳು ಸಂಭವಿಸಿದಾಗ ಮನುಷ್ಯರನ್ನು ಪತ್ತೆ ಮಾಡುವುದು ಕಠಿಣವಾಗುತ್ತದೆ. ಇಂತಹ ಸಂದರ್ಭದಲ್ಲಿ ಕೀಟಗಳಿಗೆ ಮೈಕ್ರೋ ಕ್ಯಾಮೆರಾ ಅಳವಡಿಸಿ ಅವುಗಳನ್ನು ಬಿಡುವುದರ ಮೂಲಕ ಮನುಷ್ಯರು ಇರುವ ಜಾಗವನ್ನು ಪತ್ತೆ ಮಾಡಬಹುದು. ಸಂಶಯ ಬಂದ ಜಾಗದಲ್ಲಿ ಈ ಪ್ರಯೋಗ ಮಾಡಬಹುದು ಎಂದು ಕೃಷಿ ವಿವಿ ವಿದ್ಯಾರ್ಥಿಗಳು ಹೇಳಿದ್ದಾರೆ.

ಮತ್ತೊಂದು ಕಡೆ ನಿರ್ಜನ ಪ್ರದೇಶಗಳಲ್ಲಿ ವ್ಯಕ್ತಿಗಳನ್ನು ಕೊಲೆ ಮಾಡಿ ಎಸೆದು ಹೋದಾಗ ಆ ವ್ಯಕ್ತಿಯನ್ನು ಯಾರು ಕೊಂದಿರಬಹುದು? ಎಷ್ಟು ದಿನದ ಹಿಂದೆ ಕೊಂದಿರಬಹುದು ಎಂಬೆಲ್ಲ ಪ್ರಶ್ನೆಗಳು ಮೂಡುತ್ತವೆ. ಮನುಷ್ಯನ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದಾಗ ಎಷ್ಟು ದಿನದ ಹಿಂದೆ ಈ ವ್ಯಕ್ತಿ ಸತ್ತಿರಬಹುದು ಎಂಬ ಪ್ರಶ್ನೆ ಮೂಡುವುದು ಸರ್ವೇ ಸಾಮಾನ್ಯ. ಆದರೆ, ಇಂತಹ ಪ್ರಶ್ನೆಗಳಿಗೆ ಕೀಟಗಳು ಉತ್ತರ ನೀಡಬಲ್ಲವು ಎಂಬುದನ್ನು ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ತೋರಿಸಿಕೊಟ್ಟಿದ್ದಾರೆ. ಸಿಬಿಐನವರು ಈ ತಂತ್ರವನ್ನು ಈಗಾಗಲೇ ಬಳಕೆ ಮಾಡುತ್ತಿದ್ದಾರೆ. ಈ ಹುಳುಗಳು ಪೊಲೀಸ್ ತನಿಖೆಗೂ ಸಹಕಾರಿಯಾಗುತ್ತವೆ ಎನ್ನುತ್ತಾರೆ.
ಈ ರೀತಿಯ ಪ್ರಯೋಗವನ್ನು ವಿದ್ಯಾರ್ಥಿಗಳು ವಿಸ್ಮಯಕಾರಿ ಕೀಟ ಪ್ರಪಂಚದಲ್ಲಿ ಪ್ರದರ್ಶನಕ್ಕಿಟ್ಟಿದ್ದಾರೆ. ಮನುಷ್ಯ ಸತ್ತಾಗ ದೇಹದ ಮೇಲೆ ಯಾವ್ಯಾವ ಕೀಟಗಳು ದಾಳಿ ಮಾಡುತ್ತವೆ ಎಂಬ ಮಾಹಿತಿಯನ್ನೂ ಇವರು ನೀಡುತ್ತಿದ್ದಾರೆ. ಸದ್ಯ ಕೃಷಿ ಮೇಳದ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿರುವ ವಿಸ್ಮಯಕಾರಿ ಕೀಟ ಪ್ರಪಂಚದಲ್ಲಿ ಈ ಕ್ಯಾಮೆರಾ ಅಳವಡಿಸಿ ಮನುಷ್ಯರನ್ನು ಪತ್ತೆ ಮಾಡುವ ಮಾಡೆಲ್ ಎಲ್ಲರ ಗಮನ ಸೆಳೆಯುತ್ತಿದೆ.ಇದನ್ನೂ ಓದಿ: ಬಂಟ್ವಾಳದ ಅಬ್ದುಲ್ ರೆಹಮಾನ್ ಹತ್ಯೆ ಕೇಸ್ – ಕಲ್ಲಡ್ಕ ಪ್ರಭಾಕರ್ ಭಟ್ಗೆ ನೋಟಿಸ್

