ಧಾರವಾಡ: ಜಿಲ್ಲೆಯ ನೀರಸಾಗರ ಕೆರೆ ಹೂಳೆತ್ತುವ ವಿಚಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ಮತ್ತು ಬಿಜೆಪಿ ಶಾಸಕ ಸಿ.ಎಸ್ ನಿಂಬಣ್ಣವರ ಕಲಘಟಗಿ ಮಧ್ಯೆ ವಾಗ್ವಾದ ನಡೆದಿದೆ.
ಈಗ ಬಿತ್ತನೆ ಆರಂಭವಾಗಿದೆ, ಈಗ ಯಾಕೆ ಹೂಳು ತೆಗೆಯುತ್ತಿರಾ, ಎರಡು ತಿಂಗಳ ಮುಂಚೆಯೇ ಯಾಕೆ ಇದೇ ಕೆಸವನ್ನು ಮಾಡಲಿಲ್ಲ. ಮಳೆ ಆರಂಭವಾಗುವ ಹೊತ್ತಿಗೆ ಹೂಳೆತ್ತೋಕೆ ಯಾಕೆ ಬಂದಿದ್ದೀರಿ ಎಂದು ಶಾಸಕ ನಿಂಬಣ್ಣವರ ಆರ್.ವಿ ದೇಶಪಾಂಡೆ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
Advertisement
Advertisement
ಇದಕ್ಕೆ ತೀರುಗೇಟು ನೀಡಿದ ದೇಶಪಾಂಡೆ ಅವರು, ಎಂಎಲ್‍ಎ ಅವರೇ ನೀವು ಹೇಳೋದು ಸರಿ ಇದೇ ಆದರೆ ಇದು ಸಿಎಸ್‍ಆರ್ ಕಾಮಗಾರಿ ಸರ್ಕಾರದಿಂದ ಮಾಡುತ್ತಿಲ್ಲ. ನೀವು ಕೇಳದೇ ನಾವು ಹೂಳು ತೆಗೆಯೋಕೆ ಬಂದಿದ್ದೇವೆ ನೀವು ಅದನ್ನು ತಿಳಿದುಕೊಂಡು, ಹೂಳು ತೆಗೆಯೋಕೆ ಬಂದಿದ್ದಕ್ಕೆ ನಮಗೆ ಅಭಿನಂದನೆ ಹೇಳಬೇಕು ಎಂದು ತೀರುಗೇಟು ನೀಡಿದರು. ವಾಗ್ವಾದ ತಾರಕಕ್ಕೆ ಏರಿದ ಪರಿಣಾಮ ಸ್ಥಳದಲ್ಲೇ ಇದ್ದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಇಬ್ಬರನ್ನೂ ಸಮಾಧಾನಪಡಿಸಿ ಕಾಮಗಾರಿ ಪೂಜೆಗೆ ಕರೆದುಕೊಂಡು ಹೋದರು.
Advertisement
Advertisement
ಇದೇ ವೇಳೆ ಮಾತನಾಡಿದ ದೇಶಪಾಂಡೆ ಅವರು, ಈಗಾಗಲೇ ಮೋಡ ಬಿತ್ತನೆಯ ವಿಚಾರವಾಗಿ ಸಚಿವ ಸಂಪುಟದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಈ ವಿಚಾರದ ಬಗ್ಗೆ ಗ್ರಾಮೀಣಾಭಿವೃದ್ಧಿ ಸಚಿವರು ನನ್ನ ಜೊತೆ ಮಾತನಾಡಿದ್ದಾರೆ. ಮೋಡ ಬಿತ್ತನೆಗೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಬೆಂಗಳೂರು ಹಾಗೂ ಹುಬ್ಬಳ್ಳಿಯಲ್ಲಿ ಒಂದು ಕೇಂದ್ರ ಮಾಡಿದ್ದೇವೆ. ಇಷ್ಟೊತ್ತಿಗೆ ರಾಜ್ಯದಲ್ಲಿ ಮಳೆಯಾಬೇಕಿತ್ತು, ಆದರೆ ಗುಜರಾತ್‍ನಲ್ಲಿ ಉಂಟಾದ ಚಂಡಮಾರುತದಿಂದ ಸಮಸ್ಯೆ ಆಗಿದೆ. ಆದಷ್ಟು ಬೇಗ ಮೋಡ ಬಿತ್ತನೆ ಮಾಡುತ್ತೇವೆ ಎಂದು ಭರವಸೆ ನೀಡಿದರು.
[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.biskuht.com/wp-content/plugins/wonderplugin-video-embed/engine/playvideo-64-64-0.png”]