ಧಾರವಾಡ: ದೇಶದ ಮೊದಲ ಮಾದರಿ ರೈಲ್ವೇ ನಿಲ್ದಾಣವೆಂಬ ಹೆಗ್ಗಳಿಕೆಗೆ ಧಾರವಾಡದ ಮುಗದ ರೈಲ್ವೇ ನಿಲ್ದಾಣ ಪ್ರಖ್ಯಾತಿಯನ್ನು ಪಡೆದುಕೊಂಡಿದೆ.
ಹೌದು, ಈ ಬಗ್ಗೆ ಸ್ವತಃ ಕೇಂದ್ರ ರೈಲ್ವೇ ಸಚಿವ ಪಿಯೂಷ್ ಗೊಯಲ್ ತಮ್ಮ ಟ್ವಿಟ್ಟರ್ ನಲ್ಲಿ ವಿಡಿಯೋವನ್ನು ಹಾಕುವ ಮೂಲಕ ಈ ಮಾದರಿ ರೈಲ್ವೇ ನಿಲ್ದಾಣವನ್ನು ಎಲ್ಲಾ ನಿಲ್ದಾಣಗಳು ಪಾಲಿಸಬೇಕೆಂದು ಹೇಳಿದ್ದಾರೆ.
Advertisement
A Model to Replicate: Mugad station in Dharwad, Karnataka has set a benchmark for other stations to follow, with 10 km of spick & span tracks that have been painted red & white, a charming garden and the planting of Lily, Rose & Kakada flowers in and around the station. pic.twitter.com/sCd6026CtB
— Piyush Goyal (@PiyushGoyal) November 22, 2018
Advertisement
ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸಚಿವರು, ಕರ್ನಾಟಕದ ಧಾರವಾಡದಲ್ಲಿ ಬರುವ ಮುಗದ ರೈಲ್ವೇ ನಿಲ್ದಾಣವು ದೇಶದಲ್ಲೇ ಮಾದರಿ ನಿಲ್ದಾಣವಾಗಿ ಹೊರಹೊಮ್ಮಿದೆ. ಈ ನಿಲ್ದಾಣವನ್ನು ನೋಡಿ ಇತರೇ ನಿಲ್ದಾಣಗಳು ಇದೇ ರೀತಿ ಅನುಸರಿಸಬೇಕು. ಅಲ್ಲದೇ ಅಚ್ಚುಕಟ್ಟಾದ 10 ಕಿ.ಮೀ ಉದ್ದದ ರೈಲ್ವೇ ಟ್ರಾಕ್ ಗಳಿಗೆ ಕೆಂಪು ಮತ್ತು ಬಿಳಿ ಬಣ್ಣಗಳನ್ನು ಬಳಿಯಲಾಗಿದೆ. ರೈಲ್ವೇ ನಿಲ್ದಾಣದಲ್ಲಿ ಹೊಳೆಯುವ ಉದ್ಯಾನವನ್ನು ಕಾಣಬಹುದು. ಅಲ್ಲದೇ ನಿಲ್ದಾಣದ ಸುತ್ತಲೂ ಲಿಲ್ಲಿ, ರೋಸ್ ಹಾಗೂ ಕಾಕಡ ಹೂವುಗಳ ಗಿಡಗಳನ್ನು ನೋಡಬಹುದು ಎಂದು ಬರೆದು ವಿಡಿಯೋವನ್ನು ಶೇರ್ ಮಾಡಿದ್ದಾರೆ.
Advertisement
Advertisement
ಧಾರವಾಡ ಮತ್ತು ಅಳ್ನಾವರ ಮಧ್ಯದಲ್ಲಿರುವ ಈ ನಿಲ್ದಾಣವು ಅತೀ ಸಣ್ಣ ರೈಲ್ವೇ ನಿಲ್ದಾಣವಾಗಿದ್ದರೂ, ತನ್ನ ವಿಭಿನ್ನ ವೈಶಿಷ್ಟ್ಯದಿಂದ ಭಾರತವನ್ನೆ ತನ್ನತ್ತ ನೋಡುವಂತೆ ಮಾಡಿದೆ. ನೋಡಲು ಚಿಕ್ಕದಾಗಿದ್ದರೂ, ಅಚ್ಚುಕಟ್ಟಾಗಿ ರೈಲ್ವೇ ನಿಲ್ದಾಣ ನಿರ್ಮಾಣವಾಗಿದೆ. ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಆಸನದ ವ್ಯವಸ್ಥೆ, ಶೌಚಾಲಯ, ವಿಶ್ರಾಂತಿ ಕೊಠಡಿ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಎಲೆಕ್ಟ್ರಾನಿಕ್ ಗಡಿಯಾರ, ಎಲ್‍ಇಡಿ ಲೈಟಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ. ಈ ನಿಲ್ದಾಣದಲ್ಲಿ ವಿಶೇಷವಾಗಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ.
10 ಕಿ.ಮೀ. ನಷ್ಟು ಉದ್ದದ ರೈಲ್ವೇ ಟ್ರ್ಯಾಕ್ ಗಳಿಗೆ ಕೆಂಪು ಹಾಗೂ ಬಿಳಿ ಬಣ್ಣಗಳನ್ನು ಬಳಿಯಲಾಗಿದೆ. ಇದರಿಂದಾಗಿ ರೈಲ್ವೇ ಟ್ರ್ಯಾಕ್ ಗಳು ಸುಂದರವಾಗಿ ಕಾಣುತ್ತಿವೆ. ನಿಲ್ದಾಣದ ಮುಂಭಾಗದಲ್ಲಿ ಸುಂದರ ಉದ್ಯಾನವನ್ನು ನಿರ್ಮಿಸಲಾಗಿದೆ. ನಿಲ್ದಾಣದ ಒಳಗೂ ಹೂವಿನ ಗಿಡಗಳನ್ನು ಬೆಳಸಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv